ಟಿಬಿ ಡ್ಯಾಂನಿಂದ ಅಪಾರ ನೀರು ಹೊರಕ್ಕೆ: ಇಂದು ಮಧ್ಯಾಹ್ನ ಭೇಟಿ ನೀಡಲಿರುವ ವಿಪಕ್ಷ ನಾಯಕರು

ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್ 19 ಕೊಚ್ಚಿಕೊಂಡು ಹೋಗಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಈ ಮಧ್ಯೆ ಇಂದು ತುಂಗಭದ್ರಾ ಡ್ಯಾಂಗೆ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಲಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12-30ಕ್ಕೆ ಡ್ಯಾಂಗೆ ನಿಯೋಗ ಆಗಮಿಸಿ, ಡ್ಯಾಮ್ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ನಾಯಕರು ಆಗಮಿಸಲಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿರುವ ಪಂಪ ಸಾಗರ ಜಲಾಶಯ ಇದಾಗಿದೆ.

ಜಲಾಶಯದಿಂದ ಅಪಾರ ನೀರು ಹೊರಕ್ಕೆ: ಸದ್ಯ ನದಿಗೆ 89,015 ಕ್ಯೂಸೆಕ್​ ನೀರು ಬಿಡಲಾಗುತ್ತಿದೆ. ಸುಮಾರು 14 ಟಿಎಂಸಿ ನೀರು ನಿನ್ನೆ ರಾತ್ರಿ 11 ಗಂಟೆಯಿಂದ ನದಿಗೆ ಹರಿದುಹೋಗುತ್ತಿದೆ. ಜಲಾಶಯಕ್ಕೆ 18,420 ಕ್ಯೂಸೆಕ್​​ ಒಳಹರಿವು ಇದೆ. ಸದ್ಯ 1,631.64 ಅಡಿ ಹಾಗೂ 100.367 ಟಿಎಂಸಿ ನೀರು ಸಂಗ್ರಹವಿದೆ. ಕಾಲುವೆ ಸೇರಿ ಒಟ್ಟು 99,890 ಕ್ಯೂಸೆಕ್ ಹೊರಹರಿವು ಇದೆ. ಕ್ರಸ್ಟ್​ ಗೇಟ್​ ರಿಪೇರಿ ಮಾಡಲು ಜಲಾಶಯದಿಂದ ಇನ್ನೂ 60 ಟಿಎಂಸಿ ನೀರು ಖಾಲಿ ಮಾಡಬೇಕು ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *