ಚಾಮರಾಜನಗರ : ಎಸ್ಐಟಿ ಬಂಧನದಲ್ಲಿರುವ ಸಿಎಸ್ ಚಿನ್ನಯ್ಯನ ಪೂರ್ವಾಪರಗಳನ್ನು ಹೆಕ್ಕುವುದು ನಿಸ್ಸಂದೇಹವಾಗಿ ಜಟಿಲದ ಕೆಲಸ. ಅವನು ತಮಿಳುನಾಡು ಮೂಲದವನು, ಬೆಳೆದಿದ್ದು ಮಂಡ್ಯದ ಚಿಕ್ಕಬಳ್ಳಿಯಲ್ಲಿ ಅಂತ ಹೇಳಲಾಗುತ್ತಿದೆ. ಅವನಿಗೆ ಮೂರು ಹೆಂಡತಿಯರು ಎಂಬ ಸುದ್ದಿಯೂ ಇದೆ.
ಒಂದು ಹೆಂಡತಿ ಚಿನ್ನಯ್ಯ ಕೆಟ್ಟವನು ಎಂಬ ಚಿತ್ರಣ ನೀಡುತ್ತಾರೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿರುವ ಮತ್ತೊಬ್ಬ ಹೆಂಡತಿ ಅದಕ್ಕೆ ತದ್ವಿರುದ್ಧವಾದ ಚಿತ್ರಣ ನೀಡುತ್ತಾರೆ. ಚಿನ್ನಯ್ಯ ತುಂಬಾ ಒಳ್ಳೆಯವನು, ಕುಡಿತದ ಚಟ ಹಾಗಿರಲಿ, ಕುಡುಕರನ್ನು ಮತ್ತು ಬೀಡಿ-ಸಿಗರೇಟು ಸೇದುವವರನ್ನು ಅವನು ಮನೆಗೂ ಸೇರಿಸುತ್ತಿರಲಿಲ್ಲವಂತೆ! ಈ ಜನ್ಮ ಮಾತ್ರವಲ್ಲ ಮುಂದಿನ ಜನ್ಮಕ್ಕೂ ಚಿನ್ನಯ್ಯನೇ ತನಗೆ ಗಂಡನಾಗಿ ಸಿಗಲಿ ಎಂದು ಮಹಿಳೆ ಹೇಳುತ್ತಾರೆ.
For More Updates Join our WhatsApp Group :




