ಬೆಂಗಳೂರು,: ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಾಲ್ಕು ದಿನದ ಯುದ್ಧದ ಬಳಿಕ ಕದನ ವಿರಾಮ ಮಾಡಿಕೊಂಡಿವೆ. ಈ ವಿಚಾರದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿಕೆ, ಜನಪರ ಕಾಳಜಿ ತೋರಿದ್ದರು. ಕದನ ವಿರಾಮ ಘೋಷಿಸಿತ್ತಿದ್ದಂತೆ ಎರಡು ದೇಶಗಳನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು. ಇದು ವ್ಯಾಪಕ ಚರ್ಚೆ ಆಯಿತು. ಅಲ್ಲದೇ ಟ್ರಂಪ್ ಅವರು ಟ್ರೋಲ್ ಸಹ ಆಗಿದ್ದರು. ಇದೀಗ ಅವರ ಹೆಸರನ್ನು ಬೆಂಗಳೂರಿನ ಯೋಜನೆಗಳಿಗೆ ಇಡಲಾಗುವುದು. ನಮಗೆ ಈ ಕೆಲಸ ಮಾಡಿಕೊಡಿ ಎಂಬ ಆಗ್ರಹ ಹೆಚ್ಚಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮೂಲ ಸೌಕರ್ಯ ಕಾಮಗಾರಿಗಳು ನಿಗದಿತ ಗಡುವಿನೊಳಗೆ ಮುಗಿಯುವುದೇ ಇಲ್ಲ. ಹೀಗೆ ಮೇಲ್ಸೇತುವೆ ಕೆಲಸ, ನಮ್ಮ ಮೆಟ್ರೋ ಮಾರ್ಗ ಕಾರ್ಯಾಚರಣೆ ಆಗದೇ ವಿಳಂಬವಾಗುತ್ತಿದೆ. ಈ ಸಂಬಂಧ ಸ್ಥಳೀಯ ನಿವಾಸಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಡೊನಾಲ್ಡ್ ಟ್ರಂಪ್ಗೆ ಮನವಿ ಮಾಡಿದ್ದಾರೆ. ಜೊತೆಗೆ ಅವರನ್ನು ಗುರಿಯಾಗಿಸಿಕೊಂಡು ವ್ಯಂಗ್ಯವಾಡಿದ್ದಾರೆ. ಈ ಮೂಲ ಸೌಕರ್ಯಗಳಿಗೆ ವೇಗ ನೀಡಿದರೆ ನಿಮ್ಮ (ಟ್ರಂಪ್) ಹೆಸರಿಡುವುದಾಗಿ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ X @BengaluruRains_ ಖಾತೆಯಿಂದ ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ನೀವು ಭಾರತ ಮತ್ತು ಪಾಕಿಸ್ತಾನದ ಯುದ್ಧ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯೋಜನೆ ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಯೋಜನೆಗೆ ಮಧ್ಯಪ್ರವೇಶಿಸಿ ಯೋಜನೆ ತ್ವರಿತಗತಿಯಲ್ಲಿ ಆಗುವಂತೆ ಮಾಡಬೇಕೆಂದು ವ್ಯಂಗ್ಯವಾಗಿ ಕೇಳಿಕೊಂಡಿದ್ದಾರೆ. ಟ್ರಂಪ್ ಫ್ಲೈಓವರ್: BMRCL ಜೊತೆಗೆ ಟ್ರಂಪ್ ಹೆಸರು ಬಿಬಿಎಂಪಿಯ ನಾಗರಿಕ ಯೋಜನೆಗಳಲ್ಲಿ ಒಂದಾಗಿರುವ ಕೋರಮಂಗಲದಲ್ಲಿರುವ ಈಜಿಪುರ ಫ್ಲೈಓವರ್ ಮತ್ತು ನಮ್ಮ ಮೆಟ್ರೋ ಹಳದಿ ಮಾರ್ಗ ಕಾರ್ಯಾಚರಣೆ ನಡೆಸಲು ‘ಮಧ್ಯಸ್ಥಿಕೆ ವಹಿಸಿ’ ವೇಗಗೊಳಿಸಲು ಸಹಾಯ ಮಾಡುವಂತೆ ಬೆಂಗಳೂರಿನ ಈ ನಾಗರಿಕ ಟ್ರಂಪ್ಗೆ ಕರೆ ನೀಡಿದ್ದಾರೆ. ನಾಗರಿಕರ ಪೋಸ್ಟ್ ಹಾಸ್ಯಮಯ ಅನ್ನಿಸಿದರೂ ಸಹಿತ ವರ್ಷಗಳು ಕಳೆದರೂ ಜನರಿಗೆ ಉಪಯೋಗವಾಗಬೇಕಿದ್ದ ಈ ಎರಡು ಯೋಜನೆಗಳು ಕುಂಟುತ್ತಾ ಸಾಗಿವೆ. ನಮ್ಮ ಮೆಟ್ರೋ ಹಳದಿ ಮಾರ್ಗ ಪೂರ್ಣಗೊಂಡರು ಯೋಜನೆ ಕಾರ್ಯಾರಂಭವಾಗಿಲ್ಲ. ಇತ್ತ ಈಜಿಪುರ ಮೇಲ್ಸೇತುವೆ ಗಡುವಿನ ಮೇಲೆ ಗಡುವು ಪಡೆದರೆ ಪೂರ್ಣಗೊಳ್ಳುತ್ತಿಲ್ಲ. ಇದರಿಂದ ಪ್ರಯಾಣಿಕರು, ನಗರ ನಿವಾಸಿಗಳು ನಿತ್ಯವು ಸಮಸ್ಯೆ ಎದುರಿಸುವಂತಾಗಿದೆ. ಯೋಜನೆ ಆರಂಭವಾದರೆ ಟ್ರಾಫಿಕ್ ಜಾಮ್ ಆಗುತ್ತದೆ. ಇನ್ನಿತರ ಮೂಲಸೌಕರ್ಯ ಸಮಸ್ಯೆಗಳು ಎದುರಾಗುತ್ತವೆ ಎಂಬ ಕಳವಳಕಾರಿ ಸಂಗತಿ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ.
ಬೆಂಗಳೂರು ನಾಗರಿಕರ ಹತಾಶೆ ಇಂಡಿಯಾ ಪಾಕಿಸ್ತಾನ ಯುದ್ಧ ನಿಲ್ಲಿಸಲು ಮುಂದಾದ ಟ್ರಂಪ್ ಅವರು ಈ ಈಜಿಪುರ ಯೋಜನೆ ಪೂರ್ಣಗೊಳಿಸಲು, ಹೊಸ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಆರಂಭದ ಕೆಲಸಕ್ಕೆ ವೇಗ ನೀಡುವಂತೆ ಮಾಡಬೇಕು. ಹೀಗೆ ಮಾಡಿದರೆ ಈಜಿಪುರ ಯೋಜನೆಗೆ ‘ಮೆಗಾ ಟ್ರಂಪ್ ಮೇಲ್ಸೇತುವೆ’ ಹಾಗೂ BMRCL ಜೊತೆ ನಿಮ್ಮ ಹೆಸರು ಇಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನೋಡಿದ ಜನರು ನಕ್ಕಿದ್ದಾರೆ. ಬೆಂಗಳೂರಿಗೆ ವರ್ಷಗಳಿಂದ ಅಪೂರ್ಣ ಯೋಜನೆ, ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಹತಾಶರಾಗಿದ್ದಾರೆ. ಈ ಪೋಸ್ಟ್ ನೋಡಿದರೆ ನೆಟ್ಟಿಗರು, ಹೋರಾಟ ನಿಲ್ಲಿಸಿದಾಗ ಕದನ ವಿರಾಮ ಘೋಷಣೆ ಆಯಿತು. ಎಲ್ಲವು ತ್ವರಿತವಾಗಿ ನಡೆದರೆ. ಆದರೆ ಬೆಂಗಳೂರು ಯೋಜನೆಗಳು ಮಾತ್ರ ವರ್ಷಗಳು ಕಳೆದರೂ ಕುಂಟುತ್ತಿವೆ ಎಂದು ಲೇವಡಿ ಮಾಡಿದ್ದಾರೆ.
ಟ್ರಂಪ್ ಗೆ ಕರೆ ನೀಡಿರುವುದು ಒಳ್ಳೆಯ ಐಡಿಯಾ. ”ಡೊನಾಲ್ಡ್ ಒಳಗೆ ಬನ್ನಿ,” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
