ಮೆಟ್ರೋ ದೈನಂದಿನ ಪ್ರಯಾಣಿಕರ ಸಂಚಾರದಲ್ಲಿ ಡಿ.6ರಂದು ಸಾರ್ವಕಾಲಿಕ ದಾಖಲೆ

ಬೆಂಗಳೂರು || ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗ, ಟೆಕ್ಕಿಗಳಿಗೆ ಹೊಸ ಸಮಸ್ಯೆ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಚಾರದಲ್ಲಿ BMRCL ಶುಕ್ರವಾರ ದಾಖಲೆ ಬರೆದಿದೆ. ನಮ್ಮ ಮೆಟ್ರೋ ರೈಲು ಓಡಾಟ ಆರಂಭವಾದ ಬಳಿಕ ಈವರೆಗೆ ದೈನಂದಿನ ಪ್ರಯಾಣಿಕರ ಸಂಚಾರದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ. ಒಂದೇ ದಿನ ಮೆಟ್ರೋದಲ್ಲಿ 9 ಲಕ್ಷಕ್ಕೂ ಅಧಿಕ ಮಂದಿ ಓಡಾಡಿದ್ದಾರೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ಅಧಿಕೃತ ಮಾಹಿತಿ ನೀಡಿದೆ.

ಒಂದೇ ದಿನ ಗರಿಷ್ಠ ಪ್ರಯಾಣಿಕರು ನಮ್ಮ ಮೆಟ್ರೋ ರೈಲುಗಳಲ್ಲಿ ಸಂಚಾರ ಮಾಡಿದ್ದಾರೆ. ಡಿಸೆಂಬರ್ 6ರಂದು ಶುಕ್ರವಾರ 9,20,562 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಹಾಗಾದರೆ ಯಾವ ಮಾರ್ಗದಲ್ಲಿ ಹೆಚ್ಚು ಸಂಚಾರವಾಗಿದೆ ಎಂಬ ಮಾಹಿತಿ ಇಲ್ಲಿದೆ.

ನಮ್ಮ ಮೆಟ್ರೋ ಮೊದಲ ಮಾರ್ಗ ಚಲಘಟ್ಟ-ವೈಟ್ಫಿಲ್ಡ್ವರೆಗಿನ ನೇರಳೆ ಮಾರ್ಗದಲ್ಲಿ (Namma Metro Purple Line) ಶುಕ್ರವಾರ ಒಂದೇ ದಿನ 439616 ಲಕ್ಷ ಪ್ರಯಾಣಿಕರು ಓಡಾಡಿದ್ದಾರೆ.

ಇನ್ನೂ ನಮ್ಮ ಮೆಟ್ರೋ ಎರಡನೇ ಮಾರ್ಗವಾದ ಮಾದಾವರ-ಸಿಲ್ಕ್ ಇನ್ಸ್ಟ್ಟಿಟ್ಯೂ ವರೆಗಿನ ಹಸಿರು ಮಾರ್ಗದಲ್ಲಿ Namma Metro Green Line) ಬರೋಬ್ಬರಿ 3,12,248 ಜನರು ಒಂದೇ ದಿನ ಸಂಚರಿಸಿದ್ದಾರೆ. ಇನ್ನೂ ಕೆಂಪೇಗೌಡ ಮೆಟ್ರೋ ನಿಲ್ದಾಣ ಮೆಜೆಸ್ಟಿಕ್ ಇಂಟರ್ಚೇಂಜ್ ನಿಲ್ದಾಣದಿಂದ 1,67,617 ಮಂದಿ ಓಡಾಡಿದ್ದಾರೆ. ಇದರಲ್ಲಿ ಮೆಟ್ರೋ ಸಂಚಾರ ಮಾರ್ಗ ಬದಲಾಯಿಸಿಕೊಂಡವರು, ಇಲ್ಲಿಂದಲೇ ಸಂಚಾರ ಆರಂಭಿಸಿದವು, ನಾಲ್ಕು ದಿಕ್ಕಿನಿಂದ ಇಲ್ಲಿಗೆ ಬಂದು ಇಳಿದವರು ಇದ್ದಾರೆ. ಒಟ್ಟಾರೆಯಾಗಿ 1081 ಪೇಪರ್ ಟಿಕೆಟ್ಗಳು ಶುಕ್ರವಾರ (ಡಿ.6) ಮಾರಾಟವಾಗಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ನಲ್ಲಿ 2.38 ಕೋಟಿ ಜನ ಸಂಚಾರ, ಆದಾಯ? ಇದೇ ವರ್ಷ ಆಗಸ್ಟ್ 14 ರಂದು ಒಂದೇ ದಿನ 9,17 ಲಕ್ಷ ಮಂದಿ ಒಂದೇ ದಿನ ಪ್ರಯಾಣ ಮಾಡಿದ್ದರು. ಅದೇ ಸಾರ್ವಕಾಲಿಕ ದಾಖಲಾಗಿತ್ತು. ಅದನ್ನು ಡಿಸೆಂಬರ್ 6ರಂದು ದಾಖಲಾದ ಪ್ರಯಾಣಿಕರ ಸಂಖ್ಯೆಯು ಮೀರಿಸಿ ಮತ್ತೊಂದು ದಾಖಲೆ ಬರೆದಿದೆ. ಈ ವರ್ಷದ ಎರಡು ಗರಿಷ್ಠ ದೈನಂದಿನ ದಾಖಲೆಗಳು ಇವು ಆಗಿವೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಮಾಸಿಕವಾಗಿ ಅತ್ಯಧಿಕ ಜನರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಆ ತಿಂಗಳಲ್ಲಿ ಬರೋಬ್ಬರಿ 2.38 ಕೋಟಿ ಜನರು ಮೆಟ್ರೋ ಸಾರಿಗೆಯಲ್ಲಿ ಓಡಾಡಿದ್ದಾರೆ. ಇದರಿಂದ ಮೆಟ್ರೋಗೆ 60 ಕೋಟಿಗೂ ಹೆಚ್ಚಿನ ಆದಾಯ ಸಂಗ್ರಹವಾಗಿದೆ ಎಂದು BMRCL ಅಧಿಕಾರಿಗಳು ಇತ್ತೀಚೆಗೆ ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *