Metro ನಿಲ್ದಾಣಗಳಿಗೆ ಬಂತು ‘ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆ’, ಇವುಗಳ ಬಳಕೆ ಹೇಗೆ?

Metro ನಿಲ್ದಾಣಗಳಿಗೆ ಬಂತು 'ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆ', ಇವುಗಳ ಬಳಕೆ ಹೇಗೆ?

ಬೆಂಗಳೂರು: ಬೆಂಗಳೂರಿನಲ್ಲಿ ಎಲ್ಲ ದಿಕ್ಕುಗಳಿಗೂ ಮೆಟ್ರೋ ಜಾಲ ವಿಸ್ತರಣೆ ಮಾಡುತ್ತಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಅನುಭವವ ಉತ್ತಮಪಡಿಸಲು ಮುಂದಾಗಿದೆ. ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೆಟ್ರೋ ನಿಲ್ದಾಣಗಳಲ್ಲಿ ಡಿಜಿಟಲ್ ನವೀನತೆಗಳನ್ನು ಅಳವಡಿಸಲು ಮುಂದಾಗಿದೆ. ನೀವು ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ ಸ್ವಯಂ ಪ್ರೇರಿತ ಟಿಕೆಟ್ ಯಂತ್ರ ನೋಡಿದ್ದೀರಿ ಅಂತದ್ದೇ ಕ್ಯೂಆರ್ ಕೋಡ್ ಯಂತ್ರ ಮೆಟ್ರೋ ಸ್ಟೇಷನ್ಗಳಲ್ಲಿ ಅಳವಡಿಸಳಾಗಿದೆ.

ಬೆಂಗಳೂರಿನ ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 10 ನೂತನ ಸ್ವಯಂ ಸೇವಾ ಟಿಕೆಟ್ ಯಂತ್ರಗಳನ್ನು ಸ್ಥಾಪಿಸಿದೆ. ಈ ಯಂತ್ರಗಳು QR-ಆಧಾರಿತ ಟಿಕೆಟ್ಗಳನ್ನು ತ್ವರಿತವಾಗಿ ಮತ್ತು ಸಂಪರ್ಕರಹಿತವಾಗಿ ವಿತರಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮಷಿನ್ಗಳು ಸಾಂಪ್ರದಾಯಿಕ ಏಕ ಪ್ರಯಾಣ ಟೋಕನ್ಗಳನ್ನು ಕ್ರಮೇಣ ಬದಲಾಯಿಸುತ್ತವೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಕೆ ಆಗಿರುವ ಈ ಸ್ವಯಂ ಸೇವಾ ಕ್ಯೂ.ಆರ್ ಟಿಕೆಟ್ ಯಂತ್ರಗಳಿಂದ ಸರಳವಾದ ಎರಡು-ಹಂತದ ಪ್ರಕ್ರಿಯೆಯಲ್ಲಿ, ಪ್ರಯಾಣಿಕರು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ಪಡೆಯಬಹುದಾಗಿದೆ. ಇದರ ಬಳಕೆ ಹೇಗೆ, ಟಿಕೆಟ್ ಪಡೆಯುವ ವಿಧಾನಗಳ ವಿವರ ಇಲ್ಲಿದೆ. ಟಿಕೆಟ್ ಪಡೆಯುವ ವಿಧಾನ * ನೀವು ಈ ಕ್ಯೂ.ಆರ್ ಕೋಡ್ ಯಂತ್ರಗಳು ಇರುವ ಮೆಟ್ರೋ ನಿಲ್ದಾಣಗಳಿಂದ ಪ್ರಯಾಣ ಮಾಡುವುದಾದರೆ, ಮೊದಲು ಈ ಯಂತ್ರಗಳಲ್ಲಿ ಡ್ರಾಪ್-ಡೌನ್ ಮೆನು ಅಥವಾ ನಕ್ಷೆಯನ್ನು ಉಪಯೋಗಿಸಿ ಗಮ್ಯಸ್ಥಾನವನ್ನು ಆಯ್ಕೆ ಮಾಡಬೇಕು. ನಂತರ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ, ಟಿಕೆಟ್ ದರವನ್ನು ಪರಿಶೀಲಿಸಬಹುದು.

ನಂತರ ನೀವು ದರ ಪಾವತಿ ವಿಧಾನ ಆಯ್ಕೆ ಮಾಡಿಕೊಳ್ಳಬೇಕು. ನೀವು ಬಳಸು ವಯಾವುದೇ ಯುಪಿಐ ಆಧಾರಿತ ಮೊಬೈಲ್ ಆಯಪ್ಗಳ ಮೂಲಕ ಪಾವತಿಸಬಹುದು. ಹಣ ಪಾವತಿ ಯಶಸ್ವಿಯಾದ ನಂತರ ತಕ್ಷಣವೇ ಪೇಪರ್ ಕ್ಯೂಆರ್ ಟಿಕೆಟ್ ಲಭ್ಯವಾಗುತ್ತದೆ..

ಈ ಕ್ಯೂಆರ್ ಟಿಕೆಟ್ಗಳನ್ನು ನಿಲ್ದಾಣದ ಎಂಟ್ರಿ ಮತ್ತು ಎಕ್ಸಿಟ್ ಗೇಟ್ಗಳಲ್ಲಿ ಬಳಸಬೇಕಿದೆ. ನಿಮ್ಮ ಪ್ರಯಾಣ ಮುಗಿಸಿದ ನಂತರ, ಪ್ರಯಾಣಿಕರ ಟಿಕೆಟ್ಗಳನ್ನು ನಿಗದಿತ ಕಸದ ಬ್ಯಾಕ್ಸುಗಳಲ್ಲಿ ಹಾಕಬೇಕು ಎಂದು ನಮ್ಮ ಮೆಟ್ರೋ ಮನವಿ ಮಾಡಿದೆ. ಟಿಕೆಟ್ ಕಸದ ಬಾಕ್ಸ್ ಹಾಕುವ ವಿಚಾರದಲ್ಲೂ ಪರಿಸರಸ್ನೇಹಿ ಕ್ರಮಗಳನ್ನು ಅನುಸರಿಸಲಾಗಿದೆ.

ಪ್ರಯಾಣಿಕರ ಅನುಭವವನ್ನು ಸುಧಾರಿಸಲು ನಾವು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದೇವೆ. ಸ್ವಯಂ ಸೇವಾ ಟಿಕೆಟ್ ಯಂತ್ರಗಳ ಪರಿಚಯವು ನಮ್ಮ ಮೆಟ್ರೋ ಸೇವೆಗಳನ್ನು ಹೆಚ್ಚು ಉಪಯುಕ್ತ, ಸುಗಮವಾಗಿ ಮತ್ತು ಆಧುನಿಕ ಪಾವತಿ ವಿಧಾನಗಳು ಹೊಂದಿಕೊಳ್ಳುವಂತೆ ಮಾಡುವ ಮಹತ್ವದ ಹೆಜ್ಜೆಯಾಗಿದೆ. ಪ್ರಯಾಣಿಕರ ಅನುಕೂಲತೆ ಒದಗಿಸುವ ಜೊತೆಗೆ ಸ್ವಯಂ ಟಿಕೆಟ್ ಯಂತ್ರದಿಂದ ಕೂಪನ್ ಪಡೆಯಲು ಸಾಲುಗಟ್ಟಿ ನಿಲ್ಲುವುದು ತಪ್ಪಲಿದೆ. ಸಮಯ ಉಳಿತಾಯ ವಾಗುತ್ತದೆ. ಚಿಲ್ಲರೆ ಸಮಸ್ಯೆ ತಪ್ಪಲಿದೆ ಎಂದು ಬಿಎಂಆರ್ಎಲ್ ತಿಳಿಸಿದೆ.

Leave a Reply

Your email address will not be published. Required fields are marked *