ರೈತನ ಬದುಕಿಗೆ ವರದಾನವಾಗದ ಮಿಡಿ ಸೌತೆ!

ರೈತನ ಬದುಕಿಗೆ ವರದಾನವಾಗದ ಮಿಡಿ ಸೌತೆ!

ತುಮಕೂರು: ಇಷ್ಟು ದಿನ ವಾಣಿಜ್ಯ ಬೆಳೆಯಂತೆಯೇ ರೈತನ ಬದುಕಿಗೆ ಆದಾಯ ತಂದುಕೊಡುತ್ತಿದ್ದ ಮಿಡಿಸೌತೆ ಸೌತೆ ಈಗ ರೈತನ ಬದುಕಿಗೇ ಬರೆ ಎಳೆಯುತ್ತಿದೆ. ಮಿಡಿಸೌತೆ ಬೆಳೆದ ಕೆಲ ರೈತರು ಯಾಕಾದರೂ ಮಿಡಿಸೌತೆ ಬೆಳೆದುಬಿಟ್ಟೆ ಎನ್ನುವಷ್ಟರ ಮಟ್ಟಿಗೆ ಸಂಕಷ್ಟಕ್ಕೆ ಈಡಾಗಿದ್ದಾರೆ.

ಹೌದು, ಮಿಡಿ ಸೌತೆ ಅಥವಾ ಉಪ್ಪಿನಕಾಯಿ ಸೌತೆಕಾಯಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ. ಗರ್ಕಿನ್? (ಕುಕುಂಬರ್) ಎಂದೇ ಪ್ರಸಿದ್ಧಿಯಾಗಿರುವ ಮಿಡಿ ಸೌತೆಯನ್ನು ಒಪ್ಪಂದದಡಿ ಬೆಳೆಸಿ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಇದನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಹೆಚ್ಚಿನ ಲಾಭ ಗಳಿಸುವ ವಿಧಾನದ ದಾರಿಯೂ ಇದೆ. ಇಷ್ಟು ವರ್ಷ ಮಿಡಿಸೌತೆ ಮಂದಹಾಸ ಮೂಡಿಸಿತ್ತು. ಈ ರೈತರನ್ನು ಮಂಕಾಗಿಸಿದೆ.

ಮಡಿಸೌತೆ ಬೆಳೆದು ಇನ್ನೇನು ಫಸಲು ಕೊಯ್ಲಿಗೆ ಬಂತು ಎನ್ನುವಷ್ಟರಲ್ಲಿ ಇಲ್ಲಸಲ್ಲದ ನಿಯಮಗಳನ್ನು ವಿಧಿಸುತ್ತಿದ್ದಾರೆ ಏಜೆಂಟರ್. ಬೆಳೆಗಾರರಿಗೆ ಆರಂಭದಲ್ಲಿ 50 ಸಾವಿರ 1 ಲಕ್ಷದ ವರೆಗೂ ಅಡ್ವಾನ್ಸ್ ಕೊಡುತ್ತೇವೆ ಎಂದು 10-15 ಸಾವಿರ ಬೀಜ ಕೊಟ್ಟ ಏಜೆಂಟರ್ ಕೊಯ್ಲಿನ ಹಂತಕ್ಕೆ ಬಂದರೂ ಕೆಲ ಏಜೆಂಟರ್ ಅಡ್ವಾನ್ಸ್ ಕೊಡದೆ ಮೋಸ ಮಾಡಿದ್ದಾರೆ. ಈ ಭಾರಿ ಮಿಡಿಸೌತೆಗೆ ಬೇಡಿಕೆಯಿಲ್ಲ. ತೀರಾ ಸಣ್ಣ (ಗ್ರೇಡ್ ಆಧಾರದ ಮೇಲೆ ವಿಂಗಡಣೆ) ಒಂದನೇ ಗ್ರೇಡ್ ಕಾಯಿ ಮಾತ್ರ ಕೊಡಬೇಕು ಎಂದೆಲ್ಲಾ ಹೇಳಿ ಇತ್ತ ಹೇಳಿದಂತೆ ಅಡ್ವಾನ್ಸ್ ಸಹ ಕೊಡದೆ, ಅತ್ತ ಮಿಡಿಸೌತೆ ಕಾಯಿಯನ್ನೂ ತೆಗೆದುಕೊಂಡು ಹೋಗುತ್ತಿಲ್ಲ. ಅತ್ತ ದಪ್ಪ ಮಿಡಿ ಸೌತೆ ಕಾಯಿಯನ್ನು ಸುರಿದು ಹೋಗುತ್ತಿದ್ದಾರೆ. ಕಂಪನಿಯಿAದ ಏಜೆಂಟರ್ ಎಂದು ನೇಮಕವಾದವರು ಅಡ್ವಾಸನ್ನೂ ಸಹ ಕೊಡದೆ ಬೆಳೆಗಾರರನ್ನು ಸಂಕಷ್ಟದ ಕೂಪಕ್ಕೆ ತಳ್ಳಿದ್ದಾರೆ ಎಂಬುದು ಬೆಳೆಗಾರರ ಆರೋಪವಾಗಿದೆ.

ಮಿಡಿ ಸೌತೆಯಿಂದ ಮಾಡುವ ಉಪ್ಪಿನಕಾಯಿ ವಿಶೇಷ ರುಚಿ ಹೊಂದಿರುತ್ತದೆ. ಹೀಗಾಗಿಯೇ ಮಿಡಿ ಸೌತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಬಂದಿದ್ದರಿAದ ರೈತರು ಬೆಳೆಯಲು ಮುಂದಾಗಿದ್ದಾರೆ.

ಮಿಡಿ ಉಪ್ಪಿನಕಾಯಿ ಸೌತೆಯನ್ನು ಹಲವು ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಆದರೆ ಹೆಚ್ಚು ಸಾವಯವ ಪದಾರ್ಥಗಳಿಂದ ಕೂಡಿದ 5.8 ರಿಂದ 7ರ ರಸಸಾರ ಹೊಂದಿರುವ, ನೀರು ಚೆನ್ನಾಗಿ ಬಸಿದು ಹೋಗುವ ಗೋಡು ಅಥವಾ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತವಾಗಿದೆ. ನೀರು ಸರಾಗವಾಗಿ ಬಸಿದು ಹೋಗದ ಎರೆ ಮಣ್ಣು ಇರುವೆಡೆ ಈ ಬೆಳೆ ತೆಗೆಯಲು ಸೂಕ್ತವಲ್ಲ. ನೀರು ಬಸಿದು ಹೋಗದೆ ಇರುವ ಸಂದರ್ಭದಲ್ಲಿ ಬೇರಿನ ಸುತ್ತಲೂ ಆಮ್ಲಜನಕದ ಕೆರತೆಯಿಂದಾಗಿ ಬೆಳೆಯು ಚೆನ್ನಾಗಿ ಬೆಳೆಯದೆ ಇರುವ ಸಾಧ್ಯತೆ ಇರುತ್ತದೆ. ಪ್ರತಿಯೊಂದು ಈ ಮಿಡಿ ಸೌತೆಕಾಯಿ ಬಳ್ಳಿಯು ಸೂಕ್ಷ್ಮ ವಾಗಿ ಕಾಪಾಡಿಕೊಂಡು ಬಂದರೆ ಮಾತ್ರ ಮಿಡಿ ಸೌತೆಕಾಯಿ ಬೆಳೆಯಲು ಸಾಧ್ಯ. ಈ ಬೆಳೆಗೆ ಅತಿಯಾಗಿ ನೀರು ಸರಬರಾಜು ನೀಡಬೇಕು. ಕೆಲ ಕಂಪನಿಗಳು ಹಳ್ಳಿಗಾಡು ಜನರ ಹೊಲಗಳಿಗೆ ಭೇಟಿ ನೀಡಿ ಬೆಳೆಗೆ ಎಷ್ಟು ಅನುಗುಣವಾಗಿ ಬೆಳೆ ಹಾನಿಯಾಗದಂತೆ ರೈತರಿಗೆ ತಿಳಿಸಿ ಇನ್ನು ಹೆಚ್ಚಿನ ರೀತಿಯಲ್ಲಿ ಫಲವತ್ತಾಗಿ ಬೆಳೆಯಲು ಅನುವು ಮಾಡಿಕೊಡುತ್ತಾರೆ.

ಇದು ಉಷ್ಣ ವಲಯದ ತರಕಾರಿ ಬೆಳೆ. 27ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾದರೆ ಅಥವಾ12 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಿದ್ದಲ್ಲಿ ಕಾಯಿ ಕಚ್ಚುವುದು ಇಲ್ಲವಾದರೆ ಅತಿಯಾಗಿ ಉಷ್ಣಾಂಶ ತೇವಾಂಶದಿAದ ಬೆಳೆಯುತ್ತಿರುವ ಬೆಳೆ ಕುಂಠಿತವಾಗುತ್ತದೆ ಇಲ್ಲವಾದರೆ ಈ ಬಳ್ಳಿಯು ಒಣಗುತ್ತದೆ.

ಸಾವಯವ ಕೃಷಿಯಲ್ಲಿ ಬಿತ್ತನೆ ಮಾಡಲು ಮುಂಗಾರಿಗೆ ಮೊದಲಿನ ಕಾಲ ಸೂಕ್ತ. ಒಳ್ಳೆಯ ಬೆಳೆ ಮತ್ತು ಇಳುವರಿ ಪಡೆಯಲು ಒಂದು ವರ್ಷದಲ್ಲಿ ಎರಡು ಬೆಳೆಗಳು ಮಾತ್ರ. ಅದು ಮೇ ತಿಂಗಳು ಹಾಗೂ ಜೂನ್ ತಿಂಗಳು ಮತ್ತು ನವೆಂಬರ್ ಮತ್ತು ಡಿಸೆಂಬರ್ ತಿಂಗಳು ಹೇಳಿ ಮಾಡಿಸಿದ ಸಮಯ. ರೈತರು ಸಹ ಈ ವರ್ಷದಲ್ಲಿ ಎರಡು ಬೆಳೆಗಳ ಮಾತ್ರ ಬೆಳೆಯುತ್ತಾರೆ. ಈ ಸೌತೆಕಾಯಿ ಪ್ರತಿ ರೈತರ ಜಮೀನಿನಲ್ಲಿ ಪ್ರತಿ ಟನ್ಗಟ್ಟಲೆ ಬೆಳೆದು ಕಂಪನಿಗಳಿಗೆ ನೀಡುತ್ತಾರೆ.

ಬಿತ್ತನೆ ವಿಧಾನ:- ಬೀಜಗಳನ್ನು 1ರಿಂದ 2 ಸೆಂ. ಆಳಕ್ಕೆ ಮಣ್ಣಿನಲ್ಲಿ ಬಿತ್ತಬೇಕು. ಇದರಿಂದ ಅಗತ್ಯವಿರುವಷ್ಟು ಮಣ್ಣಿನ ಪದರು ಹಾಗೂ ತೇವಾಂಶ ಬೀಜ ಬೇಗನೇ ಮೊಳೆತು ಗಿಡಗಳು ವೇಗವಾಗಿ ಬೆಳೆಯಲು ಅನುಕೂಲವಾಗುತ್ತದೆ. ಸಾವಯವ ಕೃಷಿಯಲ್ಲಿ ಬೆಳೆಯುವಾಗ ಹೆಚ್ಚಿಗೆ ಅಂತರ ಅಂದರೆ ಸಾಲಿನಿಂದ ಸಾಲಿಗೆ 4 ಅಡಿ ಹಾಗೂ ಗಿಡದಿಂದ ಗಿಡಕ್ಕೆ 2 ಅಡಿ ಗಾಳಿಯಾಡಲು ಅನುಕೂಲಕರವಾಗಿ, ಎಲೆಗಳಿಗೆ ಹರಡುವ ರೋಗಗಳ ಬಾಧೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಬಿತ್ತನೆ ಮಾಡಿದ 40 ದಿನಗಳವರೆಗೂ ಮುಖ್ಯ ತಾಕನ್ನು ಕಳೆ ರಹಿತವಾಗಿಡಬೇಕು. ಸಾಮಾನ್ಯವಾಗಿ ಕೈಯಿಂದ ಕಳೆ ಕೀಳುವುದರಿಂದ ಮಣ್ಣು ಸಡಿಲತೆಗೆ ಅನುವಾಗುತ್ತದೆ. ಬಿತ್ತನೆ ಮಾಡಿದ ೧೫ ದಿನಗಳ ನಂತರ ಮೊದಲನೇ ಬಾರಿಗೆ ಹಾಗೂ 30 ದಿನಗಳ ನಂತರ ಎರಡನೇ ಸಲ ಕಳೆ ಕೀಳಬಹುದು. ಇದಾದ ನಂತರ ಬೆಳೆ ಸಾಲುಗಳ ನಡುವೆ ಅಂತರ ಬೇಸಾಯ ಮಾಡಬೇಕು. ಪರಿಣಾಮಕಾರಿಯಾಗಿ ಕಳೆ ನಿಯಂತ್ರಣ ಮಾಡಲು ಹಾಗೂ ಹನಿ ನೀರಾವರಿ ಪದ್ಧತಿಯಲ್ಲಿ ನೀರುಣಿಸಬೇಕು. ಉತ್ತಮ ಗುಣಮಟ್ಟದ ಕಾಯಿಗಳನ್ನು ಪಡೆಯಲು ಆಧಾರ ಒದಗಿಸಿ ದಾರಗಳಿಗೆ ಬಳ್ಳಿಗಳನ್ನು ಹಬ್ಬಿಸಬೇಕು. ಡ್ರಿಪ್ ಮುಖಾಂತರ

ನೀರನ್ನು ಹಾಯಿಸಬೇಕು.

Leave a Reply

Your email address will not be published. Required fields are marked *