ಮಿಡಿಗೇಶಿ : ಗ್ರಾಮದ ಬಸ್ ನಿಲ್ದಾಣದಲ್ಲಿ ಕೆ.ಶಿಪ್ ವತಿಯಿಂದ ಪುರುಷರಿಗೊಂದು, ಮಹಿಳೆಯರಿಗೊಂದು ಒಟ್ಟು ಎರಡು ಶೌಚಾಲಯಗಳನ್ನು ನಿರ್ಮಿಸಿ, ಆರೇಳು ವರ್ಷಗಳೆ ಕಳೆದಿವೆ. ಆದರೂ ಸಹ ಸದರಿ ಶೌಚಾಲಯಗಳು ಕೆಲಸಕ್ಕೆ ಬಾರದ ಸ್ಥಿತಿಯಲ್ಲಿದ್ದು, ಗ್ರಾಮ ಪಂಚಾಯಿತಿಯವರು ಇಲ್ಲಿಗೆ ನೀರನ್ನು ಸಹ ಒದಗಿಸಿಲ್ಲ.
ಆದರೆ ಸದರಿ ಶೌಚಾಲಯದ ದುರಸ್ತಿಗೆಂದು ಗ್ರಾ.ಪಂ. ವತಿಯಿಂದ ಅದೆಷ್ಟು ಬಾರಿ ಅದೆಷ್ಟೆಷ್ಟು ಹಣ ಡ್ರಾ ಮಾಡಲಾಗಿದೆ ಎಂಬುದು ಮಾತ್ರ ಗ್ರಾಮಸ್ಥರ ಗಮನಕ್ಕೆ ಬಂದಿಲ್ಲ. ಮಿಡಿಗೇಶಿ ಪೋಲೀಸ್ ಠಾಣೆಯ ಕಾಂಪೌAಡ್‌ಗೆ ಅಂಟಿಕೊAಡAತೆ, ಸರ್ಕಾರಿ ಬಾಲಕರ ವಸತಿ ನಿಲಯದ ಮುಂಭಾಗ ಶೌಚಾಲಯಗಳಿವೆ.
ಮುಂಭಾಗದಲ್ಲಿ ಕಂದಾಯ ತನಿಖಾಧಿಕಾರಿಗಳ ನಾಡಕಛೇರಿಯಿದೆ. ಸಾರ್ವಜನಿಕರಿಗೆ, ಅದರಲ್ಲೂ ಮಹಿಳೆಯರಿಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಶೌಚಾಲಯ ಇದ್ದೂ ಸಹ ಇಲ್ಲದಂತಾಗಿರುವುದು ವಿಪರ್ಯಾಸವೆ ಸರಿ. ಆದ್ದರಿಂದ ಈ ಬಗ್ಗೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಶಾಸಕರು, ಸಚಿವರು ಮಿಡಿಗೇಶಿ ಗ್ರಾಮ ಪಂಚಾಯಿತಿ ಕಾರ್ಯ ವೈಖರಿ ತರಾಟೆಗೆ ತೆಗೆದುಕೊಂಡು, ಸಮಸ್ಯೆ ಪರಿಹರಿಸಲಿ.