ಬೆಂಗಳೂರು : ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಗಾಂಧಿನಗರ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಕೆ.ಪಿ ಅಗ್ರಹಾರ, ನಾಗಮ್ಮನಗರ, ಕಲ್ಯಾಣಿ ರಸ್ತೆ ಸೇರಿದಂತೆ 120 ನೇ ವಾರ್ಡ್ ನ ಸುತ್ತಮುತ್ತಲಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಸಮಸ್ಯೆ ಆಲೀಸಿದರು.

ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಮುಂಗಾರಿನಿಂದಾಗಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ರಾಜಕಾಲುವೆಗಳಲ್ಲಿ ಹೂಳು ತುಂಬಿದೆಯಾ ಎಂಬುದನ್ನು ಪರಿಶೀಲಿಸಿ. ಹೂಳು ತುಂಬಿದ್ದ ಸ್ಥಳಗಳಲ್ಲಿ ತಕ್ಷಣ ತೆರವು ಕಾರ್ಯ ಕೈಗೆತ್ತಿಕೊಳ್ಳಬೇಕು. ನೀರು ನುಗ್ಗುವ ತಗ್ಗು ಪ್ರದೇಶಗಳಲ್ಲಿ ಅಗತ್ಯ ಚಂರಡಿ ವ್ಯವಸ್ಥೆ ಕಲ್ಪಿಸಿ ಮಳೆ ನೀರು ರಾಜಾಕಾಲುವೆಗಳನ್ನು ಸರಾಗವಾಗಿ ಸೇರುವಂತೆ ಕ್ರಮ ಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.