ಕೊಪ್ಪಳ,: ಮುಸ್ಲಿಂ ಸಮಾಜದ ಯುವತಿಯನ್ನು ಮದುವೆಯಾದರೆ ರೂ. 5 ಲಕ್ಷ ಕೊಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವುದನ್ನು ಸಚಿವ ಶಿವರಾಜ್ ತಂಗಡಿಗಿ ತೀವ್ರವಾಗಿ ಖಂಡಿಸಿದರು.
ಸಚಿವ ಶಿವರಾಜ್ ತಂಗಡಿಗಿ ಮಾತಾಡಿ ಅವರು, ಯತ್ನಾಳ್ ಗೆ ಮಹಿಳೆಯರ ಬಗ್ಗೆ ಗೌರವ ಇಲ್ಲ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ, ಅದ್ಯಾವ ನೈತಿಕತೆಯಿಂದ ಅವರು ಹೀಗೆಲ್ಲ ಮಾತಾಡುತ್ತಾರೆ? ದುಡ್ಡು ಇವರ ಬಳಿ ಮಾತ್ರ ಇದೆ ಅಂದುಕೊಂಡಿದ್ದಾರಾ? ಬೇರೆ ಜಾತಿ ಮತ್ತು ಧರ್ಮದ ಹೆಣ್ಣುಮಕ್ಕಳ ವಿಷಯದಲ್ಲಿ ಕೀಳಾಗಿ ಮಾತಾಡುವುದನ್ನು ದೇಶ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಲ್ಲ ಎಂದು ಹೇಳಿದರು.
For More Updates Join our WhatsApp Group :