ಬೆಂಗಳೂರು: ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ 15 ವರ್ಷದ ಬಾಲಕಿಗೆ ಬಸ್‌ನ ಸ್ಪೇರ್ ಚಾಲಕ ಆರೀಫ್ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಬಾಲಕಿ ತನ್ನ ಮೊಬೈಲ್‌ನ್ನು ಚಾರ್ಜ್ ಮಾಡಲು ಚಾಲಕನ ಬಳಿ ಇಟ್ಟಿದ್ದಳು. ಚಾರ್ಜ್ ಆದ ಬಳಿಕ ಫೋನ್ ಹಿಂತಿರುಗಿಸುವಾಗ “ಮುತ್ತು ಕೊಟ್ಟರೆ ಮಾತ್ರ ಫೋನ್ ಕೊಡುತ್ತೇನೆ” ಎಂದು ಆರೀಫ್ ಬಾಲಕಿಗೆ ಒತ್ತಾಯಿಸಿದ್ದಾನೆ. ಹೆದರಿದ ಬಾಲಕಿ ಹೇಗೋ ಫೋನ್ ಪಡೆದು ತನ್ನ ಅಣ್ಣನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.
ಇದರ ನಂತರ ಆಕ್ರೋಶಗೊಂಡ ಕುಟುಂಬಸ್ಥರು ಬಸ್‌ನ್ನು ಚಾಲುಕ್ಯ ಸರ್ಕಲ್ ಬಳಿ ನಿಲ್ಲಿಸಿ ಚಾಲಕ ಆರೀಫ್‌ನ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಈ ಘಟನೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗೆ ಕಾರಣವಾಗಿದ್ದು, ಖಾಸಗಿ ಬಸ್‌ಗಳಲ್ಲಿ ಸುರಕ್ಷತೆಯ ಕೊರತೆ ಬಗ್ಗೆ ಗಂಭೀರ ಕಾಳಜಿ ವ್ಯಕ್ತವಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
For More Updates Join our WhatsApp Group :




