ಕುಣಿಗಲ್: ಶಾಸಕ ಡಾ ರಂಗನಾಥ್ ರೈತರೊಂದಿಗೆ ಗದ್ದೆಗೆ ಇಳಿದು ಭತ್ತ ನಾಟಿ ಮಾಡುವ ಮೂಲಕ ರೈತರ ಬದುಕು ಅರಿತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕುಣಿಗಲ್ ತಾಲ್ಲೂಕಿನ ಅಮೃತೂರು ಹೊಬಳಿ ವ್ಯಾಪ್ತಿಯ ಒಳಗೆರೆಪುರ ಗ್ರಾಮದಲ್ಲಿ ಕಾಂಗ್ರೇಸ್ ಶಾಸಕ ಡಾ.ರಂಗನಾಥ್ ಕೆಸರು ಗದ್ದೆಯಲ್ಲಿ ಉಳುಮೆ ಮಾಡಿ ರೈತರೊಂದಿಗೆ ಸೇರಿ ಭತ್ತದ ನಾಟಿ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ.
ಇತ್ತಿಚೇಗಷ್ಟೆ ಮಾರ್ಕೋನಹಳ್ಳಿ ಜಲಾಶಯದಿಂದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗಿತ್ತು ಬಳಿಕ ಅಮೃತೂರು ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು ಭಾನುವಾರ ಬಿಡುವು ಮಾಡಿಕೊಂಡ ಶಾಸಕ ರಂಗನಾಥ್ ಒಳಗೆರೆಪುರ ಗ್ರಾಮದ ರೈತ ಜಯರಾಮಯ್ಯ ಎಂಬುವವರ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ರೈತರೊಂದಿಗೆ ಭತ್ತದ ಪೈರು ನಾಟಿ ಮಾಡಿದ್ದಾರೆ.
ಬಳಿಕ ಮಾತನಾಡಿ ಶಾಸಕರು ಈ ಹಿಂದೆ ನಮ್ಮ ತಾತ ಕೃಷಿ ಕೆಲಸ ಮಾಡುತ್ತಿದ್ದರು, ಆದರೆ ನಮ್ಮ ತಂದೆ ವೈದ್ಯರಾದರು ನಾನು ಕೂಡ ವೈದ್ಯಕೀಯ ವೃತ್ತಿಗೆ ಬರಬೇಕಾಯಿತು ಆದರೆ ವೈದ್ಯ ವೃತ್ತಿಯಿಂದ ಈ ಕ್ಷೇತ್ರದಲ್ಲಿ ಎರಡನೆ ಭಾರಿಗೆ ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದೆನೆ, ರೈತರ ಬದುಕು ಹೇಗಿರಲಿದೆ ಎಂದು ತಿಳಿಯುವ ಕಾರಣದಿಂದ ಇಂದು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ಭತ್ತದ ನಾಟಿ ಮಾಡಿ ರೈತರೊಂದಿಗೆ ಸಮಯ ಕಳೆದಿರುವುದು ನನಗೆ ಸಂತಸ ತಂದಿದೆ ಸರ್ಕಾರದಿಂದ ರೈತರಿಗೆ ಆರ್ಥಿಕ ಭದ್ರತೆ ಸಿಕ್ಕಿದ್ದರೆ ಕೃಷಿ ನೆಮ್ಮದಿಯ ಕೆಲಸ ಆತ್ಮ ತೃಪ್ತಿ,ಸಂತೋಷ,ನೆಮ್ಮದಿ,ಕಂಡುಕೊಳ್ಳಬಹುದು ಇಲ್ಲಿನ ನೆಮ್ಮದಿ ಎಲ್ಲು ಇಲ್ಲ ಸದ್ಯ ರೈತರು ಬಳಸುವ ರಸಗೋಬ್ಬರ ಕೀಟನಾಶಕಗಳ ಬೆಲೆಯನ್ನ ಕೇಂದ್ರ ಸರ್ಕಾರ ಕಡಿಮೆ ಮಾಡುವ ಮೂಲಕ ರೈತರಿಗೆ ಆಸರೆಯಾಗಬೇಕೆಂದು ಪ್ರಧಾನಿ ನರೇಂದ್ರಮೋದಿ ರವರಿಗೆ ಮನವಿ ಮಾಡುತ್ತೆನೆ ಎಂದರು.
For More Updates Join our WhatsApp Group :
