ಬ್ಯಾಂಕ್ ಆಫ್ ಬರೋಡಾದಲ್ಲಿದೆ 500ಕ್ಕೂ ಹೆಚ್ಚು ಹುದ್ದೆಗಳು: ಅರ್ಜಿ ಸಲ್ಲಿಸೋದು ಹೇಗೆ?

ಬ್ಯಾಂಕ್ ಆಫ್ ಬರೋಡಾದಲ್ಲಿದೆ 500ಕ್ಕೂ ಹೆಚ್ಚು ಹುದ್ದೆಗಳು: ಅರ್ಜಿ ಸಲ್ಲಿಸೋದು ಹೇಗೆ?

ಭಾರತದ ಪ್ರಮುಖ ರಾಷ್ಟೀಕೃತ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾದಲ್ಲಿ 592 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 20 ರಿಂದ 50 ವರ್ಷದ ವಯೋಮಿತಿ ಇದ್ದು, ಸಂಬಂಧಿತ ವಿಷಯದಲ್ಲಿ ಇಂಜಿನಿಯರಿಂಗ ಪದವಿ, ಸಿಎ, ಎಂಬಿಎ, ಸಿಎಫ ಎ, ಪದವಿ ಮುಗಿಸಿರಬೇಕು. ಇನ್ನು ಮಂಡ್ಯ, ಪುತ್ತೂರು, ಕಲಬುರಗಿ, ಹಾಸನ, ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು ಮತ್ತು ಉಡುಪಿ ಶಾಖೆಗಳಲ್ಲಿ ಈ ನೇಮಕಾತಿ ನಡೆಯುತ್ತಿದೆ. ಇನ್ನು ಅರ್ಜಿ ಶುಲ್ಕದ ವಿಚಾರಕ್ಕೆ ಬಂದ್ರೆ ಸಾಮಾನ್ಯ ವರ್ಗದವರು, ಆರ್ಥಿಕ ದುರ್ಬಲ ವರ್ಗದವರು ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು 600 ರೂ ಮತ್ತು ಎಸ್ಸಿ, ಎಸ್ಟಿ, ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು ಹಾಗು ಅಂಗವಿಕಲ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಹ ಅಭ್ಯರ್ಥಿಗಳು ನವೆಂಬರ್ 19 ರ ಒಳಗಾಗಿ ಅರ್ಜಿ ಸಲ್ಲಿಸಿರಿ.

ಅರ್ಜಿ ಸಲ್ಲಿಸಲು ಈ ಲಿಂಕ್ ಗೆ ವಿಸಿಟ್ ಮಾಡಿ  www.bankofbaroda.in

Leave a Reply

Your email address will not be published. Required fields are marked *