ಮುಂಬೈ: ಅರಬ್ಬಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.ಗೀತಾ ನಗರ ಸಮುದ್ರ ತೀರದ ಬಳಿ ಸಂಭವಿಸಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ಕಾನ್ಸ್ಟೇಬಲ್ ರಾಂಧ್ವೆ ಸ್ಥಳಕ್ಕೆ ಧಾವಿಸಿ ಸ್ಥಳೀಯ ಮೀನುಗಾರಿಕಾ ದೋಣಿಯ ಸಹಾಯದಿಂದ ಸಮುದ್ರಕ್ಕೆ ಇಳಿದಿದ್ದರು. ಧೈರ್ಯ ಪ್ರದರ್ಶಿಸಿ ವ್ಯಕ್ತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಅಧಿಕಾರಿ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಜ್ತವಾಗಿದೆ. ಮತ್ತೊಂದು ಘಟನೆಯಲ್ಲಿ ಪಾಂಡವ್ಕಡ ಜಲಪಾತದ ಬಳಿ ಉಕ್ಕಿ ಹರಿಯುತ್ತಿದ್ದ ಹೊಳೆಯಿಂದ ವಿಕಾಸ್ ಖಾಂಡೆ ಎಂಬ 25 ವರ್ಷದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಖಾಂಡೆ ಮುಂಗಾರು ಆನಂದಿಸಲು ಹೊರಗೆ ಹೋಗಿದ್ದರು ಆದರೆ ನಿರಂತರ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾದ ಕಾರಣ ಸಿಲುಕಿಕೊಂಡಿದ್ದರು.