‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ಕಲೆಕ್ಷನ್; ಯಾವುದು ಪಾಸ್, ಯಾವುದು ಫೇಲ್..?

‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ಕಲೆಕ್ಷನ್; ಯಾವುದು ಪಾಸ್, ಯಾವುದು ಫೇಲ್..?

‘ಎಕ್ಕ’ ಮತ್ತು ‘ಜೂನಿಯರ್’ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸ ಉತ್ಸಾಹ ತುಂಬಿವೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಯುವ ರಾಜ್ಕುಮಾರ್ ಅಭಿನಯದ ‘ಎಕ್ಕ’ ಹಾಗೂ ಕಿರೀಟಿ ನಟನೆಯ ‘ಜೂನಿಯರ್’ ಚಿತ್ರಗಳ ಮೊದಲ ವಾರದ ಗಳಿಕೆ ಅಭೂತಪೂರ್ವವಾಗಿದೆ.

ಸೊರಗಿದ್ದ ಕನ್ನಡ ಚಿತ್ರರಂಗಕ್ಕೆ ‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾಗಳು ಹೊಸ ಹುರುಪು ನೀಡಿವೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಾ ಇವೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನು ಸಿನಿಮಾಗಳು ಹುಸಿ ಮಾಡಿಲ್ಲ. ಈಗ ಈ ಚಿತ್ರಗಳ ಸೋಮವಾರದ ಕೆಲೆಕ್ಷನ್ ಬಗ್ಗೆ ಮಾಹಿತಿ ಸಿಕ್ಕಿದೆ. ಯಾವ ಸಿನಿಮಾ ಫೇಲ್ ಹಾಗೂ ಯಾವ ಸಿನಿಮಾ ಪಾಸ್ ಎಂಬುದರ ಸಂಪೂರ್ಣ ವಿವರ ದೊರೆತಿದೆ. ಎರಡೂ ಸಿನಿಮಾಗಳು ಒಂದು ಹಂತಕ್ಕೆ ಪಾಸ್ ಆಗಿವೆ.

‘ಎಕ್ಕ’ ಸಿನಿಮಾ

ಯುವ ರಾಜ್ಕುಮಾರ್ ಅಭಿನಯದ ಎರಡನೇ ಸಿನಿಮಾ ‘ಎಕ್ಕ’. ಈ ಚಿತ್ರವನ್ನು ರೋಹಿತ್ ಪದಕಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಯುವ ಅವರ ನಟನೆ, ಯುವ ಆ್ಯಕ್ಷನ್ ಅಭಿಮಾನಿಗಳಿಗೆ ಇಷ್ಟ ಆಗಿದೆ. ‘ಬ್ಯಾಂಗಲ್ ಬಂಗಾರಿ’ ಹಾಡು ಕೂಡ ಚಿತ್ರಕ್ಕೆ ಮೈಲೇಜ್ ನೀಡಿದೆ. ಈ ಸಿನಿಮಾ ಮೊದಲ ವೀಕೆಂಡ್ನಲ್ಲಿ 5.60 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈಗ ಸೋಮವಾರ ಸಿನಿಮಾ 50 ಲಕ್ಷದಿಂದ 80 ಲಕ್ಷ ರೂಪಾಯಿ ಅಂತರದಲ್ಲಿ ಕಲೆಕ್ಷನ್ ಮಾಡಿದೆ. ಇದರಿಂದ ಚಿತ್ರದ ಒಟ್ಟಾರೆ ಗಳಿಕೆ 6 ಕೋಟಿ ರೂಪಾಯಿ ದಾಟಿದೆ.

ಜೂನಿಯರ್

ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದೆ. ಈ ಚಿತ್ರ ಮೊದಲ ಮೂರು ದಿನಕ್ಕೆ 5.40 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಸಿನಿಮಾದ ಕಲೆಕ್ಷನ್ ಸೋಮವಾರ 75 ಲಕ್ಷದಿಂದ 1 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಈ ಮೂಲಕ ಈ ಚಿತ್ರದ ಕಲೆಕ್ಷನ್ ಆರೂವರೆ ಕೋಟಿ ರೂಪಾಯಿ ಸಮೀಪಿಸಿದೆ.

Leave a Reply

Your email address will not be published. Required fields are marked *