ಬೆಂಗಳೂರಿಗಿಂತ Mumbai ರಸ್ತೆಗಳು ಉತ್ತಮ: Tejaswi Surya , D.K. Shivakumar ಪತ್ರ!

ಬೆಂಗಳೂರಿಗಿಂತ Mumbai ರಸ್ತೆಗಳು ಉತ್ತಮ: Tejaswi Surya , D.K. Shivakumar ಪತ್ರ!

ಬೆಂಗಳೂರು: ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ಬೆಂಗಳೂರಿನ ಕೆಲವು ಗಂಭೀರ ವಿಷಯಗಳನ್ನು ಚರ್ಚೆ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲೂ ಅವರು ಪೋಸ್ಟ್ ಮಾಡಿಕೊಂಡಿದ್ದು. ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಟಿಸಿಎಸ್ ವರ್ಲ್ಡ್ 10ಕೆ-2025 ಮ್ಯಾರಥಾನ್ ಆಯೋಜಿಸಲಾಗಿತ್ತು. ಈ ಮ್ಯಾರಥಾನ್ಗೆ ಹೇಗೆಲ್ಲಾ ಸಮಸ್ಯೆ ಆಯಿತು ಎನ್ನುವ ಬಗ್ಗೆ ತೇಜಸ್ವಿ ಸೂರ್ಯ ಅವರು ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಮ್ಯಾರಥಾನ್ನಲ್ಲಿ ಅಥ್ಲೀಟ್ಗಳು ಬೆಂಗಳೂರಿನ ಕೆಟ್ಟ ರಸ್ತೆಗಳು, ರಸ್ತೆ ಗುಂಡಿ ಹಾಗೂ ಧೂಳಿನಲ್ಲಿ ಓಡುವ ಪರಿಸ್ಥಿತಿ ಎದುರಾಯ್ತು. ಈ ವಿಷಯ ತುಂಬಾ ಬೇಸರ ಮೂಡಿಸಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಟಿಸಿಎಸ್ ವರ್ಲ್ಡ್ 10ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಹಾಜರಿದ್ದ ವಿಷಯ ಸಂತೋಷವನ್ನುಂಟು ಮಾಡಿದೆ. ಆದರೆ, ನಾನು ಬೆಂಗಳೂರು ಸಂಸದನಾಗಿ ಮಾತ್ರವಲ್ಲ. ಈ ವಿಷಯವನ್ನು ಒಬ್ಬ ಓಟಗಾರನಾಗಿ, ನಾಗರಿಕನಾಗಿ & ಅತ್ಯಂತ ನೋವಿನಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ ಅಂತ ಹೇಳಿದ್ದಾರೆ. ಈ ಓಟದಲ್ಲಿ ಜಗತ್ತಿನ ಶ್ರೇಷ್ಠ ಅಥ್ಲೀಟ್ ಗಳು, ಹಿರಿಯ ನಾಗರಿಕರು, ಸಾಮಾನ್ಯ ನಾಗರಿಕರು ಸೇರಿದಂತೆ ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆದರೆ, ಅವರೆಲ್ಲರೂ ಸುಂದರ ಓಟದ ಅನುಭವವನ್ನು ಅನುಭವಿಸುವ ಬದಲು ಗುಂಡಿಗಳ ಓಟ, ಧೂಳಿನ ಓಟ, ಅಪಾಯದಿಂದ ಕೂಡಿದ ಓಟ ಎಂಬ ಅನುಭವ ಪಡೆದದ್ದು ಬಹಳ ಬೇಸರದ ಸಂಗತಿ ಎಂದಿದ್ದಾರೆ. ನಗರದ ಹೃದಯವಾಗಿರುವ ಸಿಬಿಡಿ ರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಸಣ್ಣ ಸುಗಮ ರಸ್ತೆ ಕೂಡ ಇಲ್ಲದ್ದು . ಎಲ್ಲೆಲ್ಲೂ ಗುಂಡಿಗಳು. ಓಟಗಾರರು ಮುಗ್ಗರಿಸಿದ್ದು ಗಾಯಗೊಂಡಿದ್ದು, ಹಿರಿಯರು ಹೆಜ್ಜೆ ಹಾಕಲು ಹೆದರುವ ಸ್ಥಿತಿ ಎದುರಾಗಿದ್ದು ಸುಳ್ಳಲ್ಲ. ವೀಲ್ಚೇರ್ನಲ್ಲಿ ಓಡಿದವರು ಸ್ವಂತ ಶಕ್ತಿಯಿಂದ ಸಾಗಲು ಆಗಲಿಲ್ಲ. ಅವರಿಗೆ ಅನ್ಯರ ಸಹಾಯ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇದರ ಜೊತೆಗೆ ಅನೇಕ ಸ್ಥಳಗಳಲ್ಲಿ ಕಸದ ರಾಶಿಗಳು, ಅನೈರ್ಮೈಲದ ಬದಿಗಳು, ಮುರಿದ ಪಾದಚಾರಿ ಮಾರ್ಗಗಳು ಇವು ಬ್ರ್ಯಾಂಡ್ ಬೆಂಗಳೂರಿನ ಚಿತ್ರಣಗಳಾಗಿದ್ದವು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮುಂಬೈನಲ್ಲಿ ಉತ್ತಮ ರಸ್ತೆ: ಇನ್ನು ಬೆಂಗಳೂರಿಗಿಂತ ಮುಂಬೈನಲ್ಲಿ ಉತ್ತಮ ರಸ್ತೆಗಳಿವೆ ಎಂದು ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ. ಇದು ವರ್ಲ್ಡ್ ಅಥ್ಲೆಟಿಕ್ಸ್ ಪ್ರಮಾಣಿತ ಗೋಲ್ಡ್ ಲೇಬಲ್ ಈವೆಂಟ್ ಆಗಿದ್ದು. ಜಗತ್ತಿನ ನೂರಾರು ಅತಿಥಿಗಳು ನಮ್ಮತ್ತ ಗಮನಿಸುತ್ತಿದ್ದು, ಈ ಬಗ್ಗೆ ಸೂಕ್ತ ಗಮನ ಹರಿಸಿ ಬ್ರ್ಯಾಂಡ್ ಬೆಂಗಳೂರಿನ ಮೌಲ್ಯವನ್ನು ಹೆಚ್ಚಿಸುವಂತೆ ನಾನು ತಮ್ಮಲ್ಲಿ ವಿನಂತಿಸುತ್ತೇನೆ. ಕೇವಲ 2 ತಿಂಗಳುಗಳ ಹಿಂದೆ ನಾನು ಮುಂಬೈಯಲ್ಲಿ ನಡೆದ ಮ್ಯಾರಥಾನ್ ನಲ್ಲಿಯೂ ಭಾಗವಹಿಸಿದೆ. ಅಲ್ಲಿನ ಅನುಭವ ಇಷ್ಟೊಂದು ಕಳಪೆ ಆಗಿರಲಿಲ್ಲ ಎಂಬುದು ನನ್ನ ಅಭಿಪ್ರಾಯ ಅಂತಲೂ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೇವಲ TCS 10ಕೆ ಹಿನ್ನೆಲೆಯಿಂದ ಮಾತ್ರ ನೋಡದೆ.

ನಗರದ ಮೂಲಭೂತ ಸೌಕರ್ಯಗಳ ಬಗ್ಗೆ ತಾವುಗಳು ವಿಶೇಷ ಕಾಳಜಿ ವಹಿಸಿ, ಸಾರ್ವಜನಿಕರ ಅನುಕೂಲಕ್ಕೆ ನಗರದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *