ಬೆಂಗಳೂರು : ಬೆದರಿಕೆ ಹಾಗೂ ಜಾತಿನಿಂದನೆ ಪ್ರಕರಣದಲ್ಲಿ ಬೇಲ್ ಪಡೆದು ಜೈಲಿನಿಂದ ಹೊರ ಬಂದಿದ್ದ ಶಾಸಕ ಮುನಿರತ್ನ ಇದೀಗ ರೇಪ್ ಕೇಸ್‌ನಲ್ಲಿ ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಅಕ್ಟೋಬರ್ 5 ರವರೆಗೆ ಮುನಿರತ್ನಗೆ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ರ‍್ಟ್ ಆದೇಶಿಸಿದೆ. ಶಾಸಕ ಮುನಿರತ್ನರನ್ನು ಪೊಲೀಸರು ಇಂದು ಬೆಳಗ್ಗೆ 11 ಗಂಟೆಗೆ ಜನಪ್ರತಿನಿಧಿಗಳ ಮುಂದೆ ಹಾಜರು ಪಡಿಸಿದ್ದರು.
ಜಡ್ಜ್ ಮುಂದೆ ಕಣ್ಣೀರು ಹಾಕಿದ ಮುನಿರತ್ನ – ಜಡ್ಜ್ ಮುಂದೆ ಮುನಿರತ್ನ ಕಣ್ಣೀರು ಹಾಕಿದ್ದು, ನಾನು ಎಲ್ಲಿ ಬೇಕಾದ್ರೂ ರಾಜೀನಾಮೆ ಕೊಡ್ತೀನಿ. ವಿನಾಕರಣ ನನಗೆ ಕಿರುಕುಳ ಕೊಡ್ತಿದ್ದಾರೆ ಸಾರ್ ಎಂದು ಮುನಿರತ್ನ ಹೇಳಿದ್ದಾರೆ. ಲೋಕಸಭೆ ಎಲೆಕ್ಷನ್ ನಂತ್ರ ದೂರು ಕೊಡಿಸಿದ್ದಾರೆ. ಯಾವಾಗ ಬೇಕಾದರೂ ದೂರು ನೀಡಬಹುದಿತ್ತು. ನಾಲ್ಕು ಬಾರಿ ಶಾಸಕ, ಸಚಿವನಾಗಿದ್ದವನು ನಾನು. ನನ್ನ ಮೇಲೆ ರಾಜಕೀಯ ದ್ವೇಷ ನಡೆಯುತ್ತಿದೆ. ನನ್ನ ಜೊತೆ ಇದ್ದವರಿಂದ್ಲೇ ದೂರು ಕೊಡಿಸಿದ್ದಾರೆ ಎಂದು ಜಡ್ಜ್ ಮುಂದೆ ಒಐಂ ಮುನಿರತ್ನ ಕಣ್ಣೀರು ಹಾಕಿದ್ದಾರೆ. ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಅವರು ಗುರುವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ಅವರನ್ನು ಸುತ್ತಿಕೊಂಡಿತ್ತು. ಇದೀಗ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ರ‍್ಟ್ ಆದೇಶ ನೀಡಿದೆ.