“ಸಂಜೀವಿನಿ -ಎನ್ಆರ್ಎಲ್ಎಂ” ಹೆಸರೇ ಹೇಳುವಂತೆ ಇದು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಹಾಗೂ ಬದುಕು ರೂಪಿಸುವ ಸಂಜೀವಿನಿ ಆಗಿದೆ.
ಹೌದು ಮಧುಗಿರಿ ತಾಲ್ಲೂಕಿನ ಬ್ಯಾಲ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದ್ದಯ್ಯನಪಾಳ್ಯದ ವಾಸಿ ಗಂಗಾOಬಿಕೆ ಅವರ ಪಾಲಿಗೆ ಸಂಜೀವಿನಿ – ಎನ್ಆರ್ಎಲ್ಎಂ ಯೋಜನೆ ತನ್ನ ಬದುಕು ರೂಪಿಸಿ, ಸ್ವಾವಲಂಭಿ ಬದುಕು ಕಟ್ಟಿಕೊಂಡು ಮಹಿಳಾ ಉದ್ಯಮಿಯಾಗಿ ಬೆಳೆದು ನಿಲ್ಲುವಂತೆ ಮಾಡಿದೆ. ಇದನ್ನ ಗುರುತಿಸಿ ಸರ್ಕಾರ ಸ್ವಾವಲಂಬನೆ ಯೋಜನೆಯಡಿ ಬಡ್ಡಿ ರಹಿತ 3 ಲಕ್ಷ ಅನುದಾನವನ್ನು ನೀಡಿ ಉತ್ತಮ ಮಹಿಳಾ ಉದ್ಯಮಿಗಳಾಗಲು ಸಹಕರಿಸಿದೆ.
ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಗಂಡನ ಮನೆಗೆ ಬಂದ ಗಂಗಾOಬಿಕೆ ಕೆಲ ವರ್ಷಗಳಲ್ಲೇ ಹೃದಯಾಘಾತದಿಂದ ಗಂಡ ಮಹೇಶ ಅವರನ್ನು ಕಳೆದುಕೊಂಡು ಹಲವು ಸಮಸ್ಯೆಗಳನ್ನು ಎದುರಿಸುವಂತಾಯಿತು. ಎರಡ್ಮೂರು ವರ್ಷದ ಇಬ್ಬರು ಮಕ್ಕಳೊಂದಿಗೆ ಒಬ್ಬಳೇ ಕೆಲಸವಿಲ್ಲದೆ ಮನೆಯಲ್ಲಿಯೇ ಕೂರುವಂತಾಗಿ ಸಂಬOಧಿಕರ ಮಧ್ಯೆ ಹಲವು ನೋವುಗಳನ್ನು ನೋಡುವಂತಾಯಿತು.
ಜೀವನದ ಬವಣೆ ನೀಗಿಸಲು ಮಕ್ಕಳೊಂದಿಗೆ ಗಾರ್ಮೆಂಟ್ಸ್ವೊOದರಲ್ಲಿ ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡಲು ಶುರು ಮಾಡಿದ್ದಾಳೆ. ಇದು ಮಕ್ಕಳೊಂದಿಗೆ ಹೋಗಿ ಕೆಲಸ ಮಾಡಲು ಕಷ್ಟ ಅನುಭವಿಸುತ್ತಿದ್ದ ಗಂಗಮ್ಮ ತಮ್ಮ ತವರು ಮನೆಗೆ ಒಮ್ಮೆ ಹೋದಾಗ ಸಂಬOಧಿಕರೊಬ್ಬರು ಹಪ್ಪಳ ಕಾಯಕದ ಮೂಲಕ ಜೀವನ ನಿರ್ವಹಣೆ ಮಾಡುತ್ತಿರುವುದನ್ನು ಕಂಡು ತಾನೂ ಮಾಡಬೇಕು ಎಂಬ ಛಲದಿಂದ ಹಪ್ಪಳ ತಯಾರಿಕೆ ಕಾಯಕವನ್ನು ಪ್ರಾರಂಭಿಸಿದ್ದಾರೆ.

ತಾನು ತಯಾರಿಸಿದ ಹಪ್ಪಳವನ್ನು ಮಾರಲು ಬರಿಗಾಲಲ್ಲಿ ಊರು ಊರು ಸುತ್ತಿ, ಪಟ್ಟಣದ ಹೋಟೆಲ್, ಅಂಗಡಿಗಳಿಗೆ ಹೋಗಿ ಮಾರಿ ತುಸು ಗ್ರಾಹಕರಲ್ಲಿ ಹೆಸರು ಮಾಡುವ ವೇಳೆಗೆ ಅದೇ ಊರಿನ ಹಲವು ಜನರು ಇದೇ ಉದ್ಯಮವನ್ನು ಪ್ರಾರಂಭಿಸಿ ಕಡಿಮೆ ಬೆಲೆಯಲ್ಲಿ ಹಪ್ಪಳವನ್ನು ನೀಡಿದಾದರೂ ಯಾರು ಯಶಸ್ಸು ಕಾಣದೆ ಸುಮ್ಮನಾದರು ಎಂದೇಳುವ ಗಂಗಾOಬಿಕೆ ಇದಕ್ಕೇಲ್ಲ ಮೂಲ ಎನ್ಆರ್ಎಲ್ಎಂ ಯೋಜನೆ, ನಮ್ಮ ಸ್ವ ಸಹಾಯ ಗುಂಪಿನ ಸದಸ್ಯರ ಸಹಕಾರವೇ ನನ್ನ ಯಶಸ್ಸಿಗೆ ಕಾರಣ. ಹಾಗಾಗಿ ಗುಂಪಿನ ಹೆಸರೇ ನನ್ನ ಕಾಯಕಕ್ಕೆ ಹೆಸರೆಂದು ಅನ್ನಪೂರ್ಣೇಶ್ವರಿ ಅಕ್ಕಿ ಹಪ್ಪಳ ಎಂದು ನಾಮಕರಣ ಮಾಡಿಕೊಂಡಿದ್ದೇನೆ ಎನ್ನುತ್ತಾರೆ ಗಂಗಾOಬಿಕೆ.
2002 ರಲ್ಲಿ ಶಕ್ತಿ ಸಂಘವನ್ನು ಪ್ರಾರಂಭಿಸಿ ಉಳಿತಾಯ ಮಾಡಿಕೊಂಡು ಬಂದಿದ್ದಾರೆ. ಬಳಿಕ 2016 ರಲ್ಲಿ ಎನ್ಆರ್ಎಲ್ಎಂ ಯೋಜನೆಯಡಿ ಶ್ರೀ ಸ್ಪಂದನ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸ್ವ ಸಹಾಯ ಗುಂಪಾಗಿ ಬದಲಿಸಿಕೊಂಡು ಮೊದಲ ಹಂತದಲ್ಲಿ ಸಮುದಾಯ ಬಂಡವಾಳ ನಿಧಿಯಾಗಿ 25 ಸಾವಿರ ಸಾಲ ಪಡೆದು ಕಾಯಕವನ್ನು ಪ್ರಾರಂಭಿಸಿದ್ದಾರೆ. ಈ ಕಾಯಕದ ಜೊತೆಗೆ ಹಂತ ಹಂತವಾಗಿ 5 ಲಕ್ಷದವರೆಗೆ ಸಮುದಾಯ ಬಂಡವಾಳ ನಿಧಿಯನ್ನು ಪಡೆದು ಉದ್ಯಮವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರ ಜೊತೆಗೆ ತನ್ನ ಇಬ್ಬರ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿದ್ದಾರೆ.
ಜೀವನದ ಬವಣೆಯಲ್ಲಿ ಮೂರು ಬಾರಿ ಮಕ್ಕಳ ಅನಾರೋಗ್ಯಕ್ಕೆ ತುತ್ತಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಹಣವನ್ನು ವ್ಯಯ ಮಾಡಿಯೂ ಸ್ವಾವಲಂಭಿ ಬದುಕು ಕಟ್ಟಿಕೊಂಡಿರುವ ಇವರ ಛಲವನ್ನು ಮೆಚ್ಚುವಂತದ್ದು.
ಅಂದಿನಿOದ ಇಂದಿನವರೆಗೂ ನಾನು ಬೆಳಿಗ್ಗೆ 3.40 ಗಂಟೆಗೆ ಎದ್ದು ಹಪ್ಪಳ ತಯಾರಿಕೆ ಮಾಡುತ್ತಿರುವುದೇ ನನ್ನ ಯಶಸ್ಸು ಕಾರಣವಾದರೆ ಇಕ್ಕೇಲ್ಲ ಮೂಲ ಸಂಜೀವಿನಿ- ಎನ್ಆರ್ಎಲ್ಎಂ ಯೋಜನೆ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಸ್ವ ಸಹಾಯ ಗುಂಪಿನ ಸದಸ್ಯರು. ಇಂದು ನನ್ನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದೇನೆ, ಸ್ವಂತ ಮನೆ ನಿರ್ಮಿಸಿಕೊಂಡು ಜೀವನ ಸಾಗುತ್ತಿದ್ದೇನೆಂದರೆ ಹಪ್ಪಳ ತಯಾರಿಕೆ ಕಾಯಕದಿಂದಲೇ.
ಉನ್ನೀತರಕಣ: ಸಂಜೀವಿನಿ- ಎನ್ಆರ್ಎಲ್ಎಂ ಸಿಬ್ಬಂದಿಗಳ ಸಲಹೆಯಂತೆ ಎಫ್ಎಸ್ಎಸ್ಎಐ ಪ್ರಮಾಣಪತ್ರ, ಜಿಎಸ್ಟಿ, ಉದ್ಯಮ ಆಧಾರ್ ಮಾಡಿಸಿಕೊಂಡಿದ್ದಾರೆ. ಆಧುನೀಕರಣಕ್ಕೆ ತಕ್ಕಂತೆ ಉತ್ತಮ ಹಾಗೂ ಆಕರ್ಷಕ ಮತ್ತು ಸುರಕ್ಷಿತವಾಗಿ ಹಪ್ಪಳ ನೀಡುವ ದೃಷ್ಟಿಯಿಂದ ಅನ್ನಪೂರ್ಣೇಶ್ವರಿ ಅಕ್ಕಿ ಹಪ್ಪಳ ಎಂಬ ಬ್ರಾಂಡ್ನಲ್ಲಿ ಲೇಬಲ್ ಮಾಡಿಸಿಸಿಕೊಂಡು ಗ್ರಾಹಕರಿಗೆ ನೀಡುತ್ತಿದ್ದಾರೆ.

ಓಎಸ್ಎಫ್ನ ಫಲಾನುಭವಿ: ಸಂಜೀವಿನಿ ಯೋಜನೆಯಡಿ ಕೃಷಿಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಅಭಿವೃದ್ಧಿ ಪಡಿಸಲು ತಂದಿರುವ ಓಎಸ್ಎಫ್ ಕೇಂದ್ರದಡಿ ಸಮುದಾಯ ಉದ್ಯಮ ನಿಧಿ 99,೦೦೦ ಸಾಲವಾಗಿ ಪಡೆದು ಹಪ್ಪಳ ಒಣಗಲು ಹೋರಾಂಡವನ್ನು ನಿರ್ಮಿಸಿಕೊಂಡಿದ್ದಾರೆ.
ಸ್ವಾವಲಂಬನೆ ಯೋಜನೆಯ ಫಲಾನುಭವಿ: ಕೃಷಿಯೇತರ ಚಟುವಟಿಕೆ ಮಾಡುತ್ತಿರುವ ಉತ್ತಮ ಮಹಿಳಾ ಉದ್ಯಮಿಗಳಿಗೆ ಗುರುತಿಸಿ ಬಡ್ಡಿ ರಹಿತ ಹಾಗೂ ಅನುದಾನ ಬಿಡುಗಡೆ ಮಾಡಿ ಪ್ರೋತ್ಸಾಹಿಸಲು ಸ್ವಾವಲಂಬನೆ ಯೋಜನೆಯನ್ನು ಅನುಷ್ಟಾನಕ್ಕೆ ತರಲಾಗಿದೆ. ಇದರಡಿ ಉತ್ತಮ ಮಹಿಳಾ ಉದ್ಯಮಿಯಾಗಿ ಗುರುತಿಸಿ ಬಡ್ಡಿ ರಹಿತ ಮೃದು ಸಾಲವಾಗಿ 3 ಲಕ್ಷ ಪಡೆದುಕೊಂಡಿದ್ದಾರೆ. ಇದರಿಂದ ಸ್ವಂತ ಜಾಗದಲ್ಲಿ ಸುಸಜ್ಜಿತ ಘಟಕವೊಂದು ನಿರ್ಮಿಸಿಕೊಂಡು ಉದ್ಯಮ ಉನ್ನತಿಸಿಕೊಂಡಿದ್ದಾರೆ. ಸ್ವಾವಲಂಬನೆ ಯೋಜನೆಯಡಿ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಮಾರುಕಟ್ಟೆ, ವ್ಯಾಪಾರ-ವಹಿವಾಟು ಕುರಿತು ರಾಜ್ಯ ಮಟ್ಟದ ವಿವಿಧ ತರಬೇತಿಗಳನ್ನು ಪಡೆದುಕೊಂಡಿದ್ದು, ಮಾದರಿ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ತಿಂಗಳಿಗೆ 1.5 ಲಕ್ಷ ವಹಿವಾಟು: ಇಂದಿಗೂ ಯಾವುದೇ ಯಂತ್ರೋಪಕರಣದ ಸಹಾಯವಿಲ್ಲದೇ ಕೈಯಾರೆ ಹಪ್ಪಳವನ್ನು ತಯಾರಿಸುತ್ತಾರೆ. ಮೊದಲು 2.3 ಕೆಜಿಯಿಂದ ಪ್ರಾರಂಭಿಸುತ್ತಿದ್ದ ಗಂಗಾOಬಿಕೆ ಇಂದು ನಿತ್ಯ 50-6೦ ಕೆಜಿ ಹಪ್ಪಳ ತಯಾರಿಕೆ ಮಾಡಿ, ತಿಂಗಳಿಗೆ 1.5 ಲಕ್ಷ ವಹಿವಾಟು ಮಾಡುತ್ತಿದ್ದಾರೆ. ಮೂರು ಮಹಿಳೆಯರಿಗೆ ಕೆಲಸವನ್ನು ನೀಡಿದ್ದು, ಚಿಕ್ಕಬಳ್ಳಾಪುರ, ಹಿಂದೂಪುರು, ಬೆಂಗಳೂರು, ದಾಬಸ್ಪೇಟೆ, ತುಮಕೂರು ಹಾಗೂ ಗ್ರಾಮೀಣ ಭಾಗದಲ್ಲಿ ಹಪ್ಪಳ ವಹಿವಾಟು ಮಾಡುತ್ತಾರೆ.