ಮೈಸೂರು : ನಟ ದರ್ಶನ್ ಆಷಾಡಮಾಸದ ಶುಕ್ರವಾರದಂದು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತಪ್ಪದೆ ಭೇಟಿ ನೀಡುತ್ತಾರೆ. ಕಳೆದ ವರ್ಷ ಜೈಲಿನಲ್ಲಿದ್ದ ಕಾರಣಕ್ಕೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಾಗಲಿಲ್ಲ. ಇಂದು ಆಷಾಡಮಾಸದ ಎರಡನೇ ಶುಕ್ರವಾರದಂದು ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಅವರ ಜೊತೆಗೂಡಿ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿದ್ದಾರೆ.

ಇಂದು ಚಾಮುಂಡೇಶ್ವರಿ ತಾಯಿಗೆ ಲಕ್ಷ್ಮೀ ಅಲಂಕಾರ, ಹೂವು, ಬಳೆ, ತೋತಾಪುರಿ ಮಾವಿನ ಕಾಯಿಯಿಂದ ಅಲಂಕಾರ ಮಾಡಲಾಗಿತ್ತು. ದರ್ಶನ್ ಆಗಮಿಸಿದ ವೇಳೆ ಸಾಕಷ್ಟು ಮಂದಿ ಅಭಿಮಾನಿಗಳು ಅವರನ್ನು ಕಾಣಲು ಬಂದ ಕಾರಣ, ದೇವಾಲಯದಲ್ಲಿ ನೂಕು-ನುಗ್ಗಲು ಉಂಟಾಯ್ತು.