ಮೈಸೂರು: ಚಾಮುಂಡಿ ತಾಯಿ ಎಲ್ಲರ ದುಃಖವನ್ನು ದೂರ ಮಾಡುವ ದೇವತೆಯಾಗಿದ್ದಾಳೆ, ಈ ಸಲ ಇಡೀ ರಾಜ್ಯಕ್ಕೆ ಒಳ್ಳೆಯ ಮಳೆ ನೀಡಿ ಜನರಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸುವಂತೆ ಮಾಡಿದ್ದಾಳೆ ಎಂದು ತಮ್ಮ ಕುಟುಂಬದೊಂದಿಗೆ ಚಾಮುಂಡಿ ಬೆಟ್ಟಕ್ಕೆ ಅಗಮಿಸಿ ಪೂಜೆ ಸಲ್ಲಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಯಾವುದೇ ಕೆಲಸ ಆರಂಭಿಸುವ ಮೊದಲು ಚಾಮುಂಡಿ ತಾಯಿಗೆ ಸಲ್ಲಿಸುವುದು ನಮ್ಮಲ್ಲಿರುವ ಪದ್ಧತಿ, ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಅಂತ ನಾನು ನಂಬಿದ್ದೇನೆ, ನನಗೇನು ಬೇಕೋ ಅದನ್ನು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ, ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿ ಮಾತಾಡಲಾರೆ ಎಂದು ಶಿವಕುಮಾರ್ ಹೇಳಿದರು.