ಮೈಸೂರು : ಆಷಾಢದ ಮಾಸದ ಮೂರನೇ ಶುಕ್ರವಾರದ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬರ್ತಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ಬೆಟ್ಟಕ್ಕೆ ಜನರು ಆಗಮಿಸಿದ್ದು, ದೇವಿಗೆ ವಿಶೇಷ ಪೂಜೆ ನಡೆದಿದೆ. ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾಗಲು ಭಕ್ತಸಾಗರ ಬೆಳಗಿನ ಜಾವದಿಂದಲೇ ಬರುತ್ತಿದ್ದಾರೆ.

ಬಗೆಬಗೆಯ ಹೂಗಳಿಂದ ಗಜಲಕ್ಷ್ಮಿ ಮತ್ತು ಮಹಾಲಕ್ಷ್ಮಿ ಅಲಂಕಾರ ಮಾಡಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಚಾಮುಂಡೇಶ್ವರಿಗೆ ನಾಲ್ಕು ವಾರಗಳ ಕಾಲ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನಡೆಯಲಿದ್ದು, ದೇವಿಯ ಉತ್ಸವ ಮೂರ್ತಿಗೆ ವಿವಿಧ ಬಗೆಯಲ್ಲಿ ಅಲಂಕಾರ ಮಾಡಲಾಗುತ್ತೆ. ಇತ್ತ ದೇಗುಲಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಕಲ್ಪಿಸಿದೆ. ಭಕ್ತರು ಕೂಡ ಸರದಿ ಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆಯುತ್ತಿದ್ದಾರೆ.