ಮೈಸೂರು ದಸರಾ : ಒಂದೂವರೆ ತಿಂಗಳಲ್ಲಿ ಅಭಿಮನ್ಯು ತೂಕ ಭಾರಿ ಹೆಚ್ಚಳ

ಮೈಸೂರು ದಸರಾ : ಒಂದೂವರೆ ತಿಂಗಳಲ್ಲಿ ಅಭಿಮನ್ಯು ತೂಕ ಭಾರಿ ಹೆಚ್ಚಳ

ಮೈಸೂರು: ಮೈಸೂರಿನಲ್ಲಿ ನವರಾತ್ರಿ, ದಸರಾ ಆಚರಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ದಸರಾ ಜಂಬೂಸವಾರಿಗೆ ಆಗಮಿಸಿರುವ ಆನೆಗಳು ತಾಲೀಮಿನಲ್ಲಿ ನಿರತವಾಗಿದ್ದು, ಅವುಗಳಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.

ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಅಂಬಾರಿ ಹೊರುವ ಆನೆ ಅಭಿಮನ್ಯು ತೂಕ 5560 ಕೆಜಿ ಯಿಂದ 5820ಗೆ ಏರಿಕೆಯಾಗಿದೆ. ಒಂದೂವರೆ ತಿಂಗಳ ಅಂತರದಲ್ಲಿ 260 ಕೆಜಿ ತೂಕ ಹೆಚ್ಚಿಸಿಕೊಂಡಿರುವ ಅಭಿಮನ್ಯು ಬಲಶಾಲಿಯಾಗಿದ್ದಾನೆ. ದಸರಾ ಆನೆಗಳು ಮೈಸೂರಿಗೆ ಬಂದಾಗಿನಿಂದ ಇದು ಮೂರನೇ ಬಾರಿಯ ತೂಕ ಪರೀಕ್ಷೆಯಾಗಿದ್ದು 14 ಆನೆಗಳು ಭಾಗಿಯಾಗಿದ್ದವು.

Leave a Reply

Your email address will not be published. Required fields are marked *