ಮೈಸೂರು : ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆ ಸಿಎಂ ಸಿದ್ದರಾಮಯ್ಯ ಪರವಹಿಸಿಕೊಂಡು ಮಾತಾಡುವುದನ್ನು ನಿಲ್ಲಿಸುವುದಿಲ್ಲ.

ಮೈಸೂರಲ್ಲಿ ಮಾತಾಡಿ ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಗಳಾಗಿರುತ್ತಾರೆ ಅಂತ ಪುನರುಚ್ಛರಿಸಿದರು. ಗ್ಯಾರಂಟಿ ಯೋಜನೆಗಳಿಂದ ಜನ ಸೋಂಬೇರಿಗಳಾಗುತ್ತಿದ್ದಾರೆ ಎಂಬ ವಾದವನ್ನು ತಿರಸ್ಕರಿಸಿದ ಯತೀಂದ್ರ, ಸಿದ್ದರಾಮಯ್ಯ ಮೊದಲಾವಧಿಯಲ್ಲಿ ಭಾಗ್ಯಗಳನ್ನು ನೀಡಿದಾಗಲೂ ಹಾಗೆ ಹೇಳಲಾಗಿತ್ತು, ಆದರೆ ಯಾರೂ ಸೋಮಾರಿಗಳಾಗಲಿಲ್ಲ, ಬಡವರು ಹಸಿದ ಹೊಟ್ಟೆಯಲ್ಲಿ ಮಲಗಬಾರದು ಅಂತ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನೀಡಿದೆ, ಕಾಂಗ್ರೆಸ್ ಯಾವತ್ತಿಗೂ ದೇಶದ ಬಡಜನರ ಪರ ಇದೆ ಎಂದು ಹೇಳಿದರು.