ತುಮಕೂರು: ಕೃಷಿ ವಿಶ್ವವಿದ್ಯಾಲಯ ಬೆಂಗಳೂರು , ಕೃಷಿ ವಿಜ್ಞಾನ ಕೇಂದ್ರ ಕೊನೆಹಳ್ಳಿ, ತಿಪಟೂರು ತಾಲೂಕು, ತುಮಕೂರು ಜಿಲ್ಲೆ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಪೋಷಣ ಮಾಸಾಚರಣೆ ಹಾಗೂ ಅಣಬೆ ಕೃಷಿ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ವೇದಿಕೆಯ ಎಲ್ಲ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಗೋವಿಂದ ಗೌಡ ವಿ, ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಕೊನೆಹಳ್ಳಿ, ತಿಪಟೂರು ವಹಿಸಿಕೊಂಡಿದ್ದರು. ಅಣಬೆ ಕೃಷಿ ತರಬೇತಿಗೆ ಬಂದಂತ ರೈತರಿಗೆ ,ಸಾರ್ವಜನಿಕರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಉತ್ತಮ ಮಾಹಿತಿ ನೀಡಿ, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು,
ಶ್ರೀಯುತ ಲೋಕೇಶ್ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಿಪಟೂರು .
ತಮ್ಮ ಇಲಾಖೆಗೆ ಸಂಬಂಧಪಟ್ಟ ಅಂಗನವಾಡಿಯ ಸಹಾಯಕಿಯರು ರಾಷ್ಟ್ರೀಯ ಪೋಷಣ ಮಾಸಾಚರಣೆ ಪ್ರಯುಕ್ತ ಬೆಂಕಿಯಿಂದ ಬೇಯಿಸದೇ ಇರುವ ಆಹಾರವನ್ನು ತಯಾರಿಸಿದ್ದು ಉತ್ತಮ ವಿಟಮಿನ್ ಪ್ರೋಟೀನ್ ಇರುವಂತಹ ಆಹಾರವನ್ನು ತಯಾರಿಸಿದ ಬಗ್ಗೆ ವಿವರಿಸುತ್ತಾ ಇನ್ನು ಹತ್ತು ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಖುಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಸಿಂಧು ಪಿ ಬಿ ಗೃಹ ವಿಜ್ಞಾನಿ ಇವರು ಅಣಬೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ
ಶ್ರೀಮತಿ ಡಾ. ಓಹಿಲಾ M S ನಗರಸಭಾ ಸದಸ್ಯರು, ತಿಪಟೂರು.
ಶ್ರೀಯುತ ಸಿರಿಗಂಧ ಗುರು ಅಧ್ಯಕ್ಷರು ಸಗುಡು ಜನಪದ ಹೆಜ್ಜೆ, ತಿಪಟೂರು.
ಶ್ರೀಯುತ ತರಕಾರಿ ಗಂಗಾಧರ್ ಸದಸ್ಯರು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ರಿ. ತುಮಕೂರು ,01 .
ಜೆಮ್ಸ್ GEMS ಗುರುಕುಲ ಎಜುಕೇಶನ್ ಅಂಡ್ ಮ್ಯಾನೇಜ್ಮೆಂಟ್ ಸಲ್ಯೂಷನ್. ರಿ, ತಿಪಟೂರು.
ಶ್ರೀಮತಿ ಪ್ರೇಮ ಬಿ ಎಂ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಪಟೂರು .
ಕು- ಬಿಂದು ಸಮುದಾಯ ಆರೋಗ್ಯ ಅಧಿಕಾರಿಗಳು ಹೊನ್ನವಳ್ಳಿ .
ಕು- ನಾಗರತ್ನ ಸಮುದಾಯ ಆರೋಗ್ಯ ಅಧಿಕಾರಿಗಳು ಹೊನ್ನವಳ್ಳಿ .
ಶ್ರೀಯುತ ಯೋಗೀಶ್ ರಾವ್ ಅಣಬೆ ಬೆಳೆಗಾರರು ಹಾಗಲವಾಡಿ.
ಶ್ರೀಮತಿ ಗಂಗಲಕ್ಷ್ಮೀ ಅಣಬೆ ಬೆಳೆಗಾರರು ಆಗಲವಾಡಿ.
ಶ್ರೀಯುತ ಯೋಗಾನಂದ ಮೂರ್ತಿ ಪ್ರಗತಿಪರ ರೈತರು ತಡಸೂರು.
ಡಾ. ತಸ್ಮಿಯಾ ಕೌಸರ್ ವಿಜ್ಞಾನಿ ಬೇಸಾಯ ಶಾಸ್ತ್ರ ಕೆ ವಿ ಕೆ ತಿಪಟೂರು .
ಶ್ರೀ ದರ್ಶನ್, ಎಂ. ಈ. ವಿಜ್ಞಾನಿ ಕೃಷಿ ವಿಸ್ತರಣೆ ಕೆವಿಕೆ ತಿಪಟೂರು, ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.