ಮುಂಬೈ: ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿರುವ ಕಂದಹಾರ್ ವಿಮಾನ ಅಪಹರಣ ಕಥಾಹಂದರದ ವೆಬ್ಸಿರೀಸ್ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ್ದು, ಅಪಹೃತರ ನಿಜವಾದ ಹೆಸರನ್ನು ಬಳಸಲು ಸೂಚಿಸಿತ್ತು. ಇದಕ್ಕೆ ಮಣಿದ ಚಿತ್ರತಂಡ ಸಿರೀಸ್ನಲ್ಲಿ ಭಯೋತ್ಪಾದಕರ ನಿಜವಾದ ಹೆಸರನ್ನು ಬಳಸಿದೆ.
1999 ರಲ್ಲಿ ಪ್ರಯಾಣಿಕರಿದ್ದ ವಿಮಾನವನ್ನು ಕಂದಹಾರ್ ನಿಲ್ದಾಣದಲ್ಲಿ ಹೈಜಾಕ್ ಮಾಡಲಾಗಿತ್ತು. ಈ ಕುರಿತ ಸಿರೀಸ್ನಲ್ಲಿ ವಿಜಯ್ ವರ್ಮಾ, ನಾಸಿರುದ್ದೀನ್ ಶಾ, ಪಂಕಜ್ ಕಪೂರ್ ಸೇರಿದಂತೆ ಕೆಲ ಜನಪ್ರಿಯ ಕಲಾವಿದರು ನಟಿಸಿದ್ದಾರೆ. ಐಸಿ814 ಸರಣಿಯಲ್ಲಿ ಭಯೋತ್ಪಾದಕರ ಬಗ್ಗೆ ಸಿಂಪತಿ ಮೂಡುವಂತೆ ಚಿತ್ರಿಸಲಾಗಿದೆ. ಕೆಲವು ಕಟ ಸತ್ಯಗಳನ್ನು ಬೇಕಂತಲೇ ತಿರುಚಲಾಗಿದೆ ಎಂಬ ಆರೋಪವಿದೆ.
ಇದೆಲ್ಲಕ್ಕಿಂತ ಮಿಗಿಲಾಗಿ ಭಯೋತ್ಪಾದಕರ ನಿಜವಾದ ಹೆಸರನ್ನೇ ಕೈಬಿಡಲಾಗಿದೆ. ಅವರಿಗೆ ಹಿಂದುಕೋಡ್ಗಳನ್ನು (ಹೆಸರುಗಳನ್ನು) ಬಳಸಲಾಗಿದೆ. ಹೀಗಾಗಿ ವೆಬ್ಸಿರೀಸ್ ಪ್ರಸಾರವನ್ನು ನಿಲ್ಲಿಸಬೇಕು ಎಂಬ ಒತ್ತಾಯ ಜೋರಾಗಿ ಕೇಳಿಬಂದಿತ್ತು.
ತಪ್ಪು ತಿದ್ದಿಕೊಂಡ ನೆಟ್ಫ್ಲಿಕ್ಸ್: ಈ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ ಬಳಿಕ IC814 ಸರಣಿಯಲ್ಲಿ ಆದ ಲೋಪಗಳನ್ನು ತಿದ್ದಿಕೊಳ್ಳಲಾಗುವುದು ಎಂದು ನೆಟ್ಫ್ಲಿಕ್ಸ್ ಹೇಳಿದೆ. ನೆಟ್ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ವೈಸ್ ಪ್ರೆಸಿಡೆಂಟ್ ಮೋನಿಕಾ ಶೇರ್ಗಿಲ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, 1999 ರ ವಿಮಾನ ಅಪಹರಣದ ಬಗ್ಗೆ ಮಾಹಿತಿ ಇಲ್ಲದ ಪ್ರೇಕ್ಷಕರ ಅನುಕೂಲಕ್ಕಾಗಿ ಭಯೋತ್ಪಾದಕರ ನಿಜ ಹೆಸರಿನ ಜೊತೆಗೆ ಅವರ ಕೋಡ್ ನೇಮ್ಗಳನ್ನು ಸಹ ಪ್ರದರ್ಶಿಸುತ್ತಿದ್ದೇವೆ. ಕೋಡ್ ನೇಮ್ಗಳು ನಿಜವಾದ ಆಪರೇಷನ್ನಲ್ಲಿ ಬಳಸಲಾಗಿತ್ತು ಎಂದಿದ್ದಾರೆ. ಇದೀಗ ಸರಣಿಯಲ್ಲಿ ಭಯೋತ್ಪಾದಕರ ಹೆಸರುಗಳನ್ನು ಪ್ರದರ್ಶಿಸಲಾಗುತ್ತಿದೆ.
ಸಿರೀಸ್ನಲ್ಲಿನ ಲೋಪಗಳೇನು?: ವೆಬ್ ಸಿರೀಸ್ನಲ್ಲಿ ವಿಮಾನ ಅಪಹರಣ ಮಾಡಿದ ಉಗ್ರರಾದ ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜೂಹುರ್ ಇಬ್ರಾಹಿಂ, ಶಾಖಿರ್, ಶಾಹಿದ್ ಅಖ್ತರ್ ಶಯೀದ್, ಇಬ್ರಾಹಿಂ ಅಥರ್ ಬಳಸಲಾಗಿಲ್ಲ. ಈ ಹೆಸರುಗಳನ್ನು ಬೇರೆ ರೀತಿಯಾಗಿ ಕರೆಯಲಾಗಿದೆ. ಹಿಂದೂ ಕೋಡ್ ಆಗಿ ಅಪಹರಣಕಾರರ ಪಾತ್ರಗಳಿಗೆ ಶಂಕರ್ ಮತ್ತು ಭೋಲಾ ಎಂದು ಕರೆಯಲಾಗಿದೆ. ಭಯೋತ್ಪಾದಕರನ್ನು ವೈಭವೀಕರಿಸಲಾಗಿದೆ. ಅಪಹರಣ ಪ್ರಕರಣದಲ್ಲಿ ಪಾಕಿಸ್ತಾನ, ಐಎಸ್ಐಗಳ ಕೈವಾಡ ಇಲ್ಲ ಎಂಬಂತೆ ಚಿತ್ರೀಕರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ