ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಇಂದು 12ನೇ ತರಗತಿ ಫಲಿತಾಂಶ ಬಿಡುಗಡೆ ಮಾಡಿದೆ. ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರು ಶೇ.5ರಷ್ಟು ಮುಂಚೂಣಿ ಸಾಧಿಸುವ ಮೂಲಕ ಮೇಲುಗೈ ಪಡೆದಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದರು.

ಫಲಿತಾಂಶ ಪ್ರಕಟಿಸಿ ಮಾತನಾಡಿದ ಅವರು, ಈ ಬಾರಿ 12ನೇ ತರಗತಿಯಲ್ಲಿ ಶೇ 88.39ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಫಲಿತಾಂಶದಲ್ಲಿ ಕೊಂಚ ಮಟ್ಟದ ಸುಧಾರಣೆ ಕಂಡಿದೆ ಎಂದರು.
1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೇ.90ರಷ್ಟು ಅಂಕ: 12ನೇ ತರಗತಿ ಪರೀಕ್ಷೆಯಲ್ಲಿ 1.15 ಲಕ್ಷ ವಿದ್ಯಾರ್ಥಿಗಳು ಶೇ 90ರಷ್ಟು ಅಂಕ ಗಳಿಸಿದ್ದು, 24,000 ವಿದ್ಯಾರ್ಥಿಗಳು ಶೇ 95ರಷ್ಟು ಅಂಕ ಗಳಿಸಿದ್ದಾರೆ. ಫೆ. 4ರಿಂದ ಏಪ್ರಿಲ್ 15ರವರೆಗೆ 12ನೇ ತರಗತಿ ಪರೀಕ್ಷೆಗಳು ದೇಶಾದ್ಯಂತ ನಡೆದಿದ್ದು, ಸುಮಾರು 42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.
ಸದ್ಯ ಸಿಬಿಎಸ್ಸಿಯ 12ನೇ ತರಗತಿ ಫಲಿತಾಂಶ ಬಿಡುಗಡೆಯಾಗಿದ್ದು, 10ನೇ ತರಗತಿ ಫಲಿತಾಂಶಕ್ಕಾಗಿ ಇನ್ನು ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.
ಫಲಿತಾಂಶ ವೀಕ್ಷಣೆಗೆ ಈ ಕ್ರಮ ಅನುಸರಿಸಿ:
ಸಿಬಿಎಸ್ಸಿ ಅಧಿಕೃತ ವೆಬ್ಸೈಟ್ cbse.gov.inಗೆ ಭೇಟಿ ನೀಡಿ
ಸ್ಕೂಲ್ ಲಾಗಿನ್: Enter the required credentials and ‘Login as School’ ಆಯ್ಕೆ ಮಾಡಿ.
ಡೌನ್ಲೋಡ್ ಕೋಡ್: ‘Download Access Code file’ ಆಯ್ಕೆ ಮಾಡಿ.
12ನೇ ತರಗತಿಗೆ: ‘Download Access Code for Class XII’ ಕ್ಲಿಕ್ ಮಾಡಿ.
ಒಮ್ಮೆ ಡೌನ್ಲೋಡ್ ಮಾಡಿದ ನಂತರ, ಶಾಲೆಗಳು ಪ್ರವೇಶ ಕೋಡ್ಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬಹುದು.