ನವದೆಹಲಿ: ಉಗ್ರರ ನೆಲೆಗಳ ಮೇಲೆ ಮಾಡಿದ ಏರ್ಸ್ಟ್ರೈಕ್ಗೆ (Air Strike) ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ಪ್ರಯೋಗಿಸಿದ ಕ್ಷಿಪಣಿಯನ್ನು ಅರ್ಧದಲ್ಲೇ ಧ್ವಂಸ ಮಾಡಲಾಗಿದೆ.

ಹೌದು. ಪಾಕ್ ರಾತ್ರಿ 1:20 ರಿಂದ 1:30 ರೊಳಗಡೆ ಪಂಜಾಬ್ನ ಅಮೃತಸರವನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಹೀಗಿದ್ದರೂ ಭಾರತದಲ್ಲಿರುವ ಮುಂದುವರಿದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು (Advanced Missile Defence System) ತಕ್ಷಣವೇ ಪ್ರತಿಕ್ರಿಯಿಸಿ ಪಾಕಿಸ್ತಾನದ ಕ್ಷಿಪಣಿಯನ್ನು ಆಕಾಶದಲ್ಲಿಯೇ ಉಡೀಸ್ ಮಾಡಿದೆ
ಕ್ಷಿಪಣಿಯ ಮೂರು ತುಂಡುಗಳಾಗಿ ಛಿದ್ರಗೊಂಡಿದ್ದು ಅವಶೇಷಗಳು ಗ್ರಾಮದಲ್ಲಿ ಬಿದ್ದಿದೆ. ಕೆಲವು ಭಾಗಗಳು ಛಾವಣಿಗಳ ಮೇಲೆ ಬಿದ್ದರೆ ಹತ್ತಿರ ಹೊಲದಲ್ಲಿ 6 ಅಡಿ ಉದ್ದದ ದೊಡ್ಡ ಭಾಗ ಪತ್ತೆಯಾಗಿದ್ದು ಸಣ್ಣ ಕುಳಿ ನಿರ್ಮಾಣವಾಗಿದೆ.
ಆಕಾಶದಲ್ಲಿ ಧ್ವಂಸ ಮಾಡಿದ್ದರಿಂದ ಹಳ್ಳಿಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಡೆದಿದೆ. ಪಾಕ್ ಸೇನೆ ಕ್ಷಿಪಣಿ ಹಾರಿಸಿದ್ದನ್ನು ಪಂಜಾಬ್ ಪೊಲೀಸರು ಅಧಿಕೃತವಾಗಿ ದೃಢಪಡಿಸಿದ್ದಾರೆ.
ಪಾಕಿಸ್ತಾನ ಹಾರಿಸಿದ್ದು PL-15E ಚೀನಾ ನಿರ್ಮಿತ ಕ್ಷಿಪಣಿಯಾಗಿದ್ದು ಯುದ್ಧ ವಿಮಾನದಿಂದ ಹಾರಿಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತಿದೆ.