ಬೆಂಗಳೂರು: ಉದ್ಯಮಿಯಾಗಿ ಹಾಗೂ ಉದ್ಯಮ ಸೃಷ್ಟಿಸಿ ಎಂದು ಹೇಳುವ ಸರ್ಕಾರವು ರಾಜ್ಯದ ಉದ್ಯಮಿಗಳ ಮೇಲೆ ಒಂದಿಲ್ಲೊಂದು ತೆರಿಗೆಗಳನ್ನು ಹೇರುತ್ತಿದೆ. ಇದು ಉದ್ಯಮಿಗಳಿಗೆ ತುಂಬಾ ಸಂಕಷ್ಟವನ್ನು ತಂದೊಡ್ಡಿದೆ ಎಂದು ಬೆಂಗಳೂರು ಹೋಟೆಲ್ಗಳ ಸಂಘ ಆರೋಪಿಸಿದೆ. ರಾಜ್ಯ ಸರ್ಕಾರವು ವಿವಿಧ ತೆರಿಗೆಗಳನ್ನು ಹೆಚ್ಚಳ ಮಾಡಿದೆ. ಇದರಿಂದ ಉದ್ಯಮ ನಡೆಸುವುದೇ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ತ್ಯಾಜ್ಯ ಬಳಕೆದಾರರ ಶುಲ್ಕ ನಿಗದಿಮಾಡಿ, ವಸೂಲಿ ಮಾಡಲು ಮುಂದಾಗಿರುವ ಕ್ರಮಕ್ಕೂ ಭಾರೀ ವಿರೋಧ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ನೀರಿನ ಬೆಲೆ ಹಾಗೂ ವಿದ್ಯುತ್ ಬೆಲೆಯನ್ನು ಹೆಚ್ಚಳ ಮಾಡಿದೆ. ಇದೀಗ ಗಾರ್ಬೇಜ್ ಟ್ಯಾಕ್ಸ್ ಎಂದು ಮೂರು ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿಯ ವರೆಗೆ ಸಂಗ್ರಹಿಸಲಾಗುತ್ತಿದೆ ಎಂದು ಬೆಂಗಳೂರು ಹೋಟೆಲ್ಗಳ ಸಂಘದ ಗೌರವ ಅಧ್ಯಕ್ಷ ಪಿ.ಸಿ ರಾವ್ ಅವರು ದೂರಿದ್ದಾರೆ. ಸರ್ಕಾರ ಹಾಗೂ ಬಿಬಿಎಂಪಿಯ ತೆರಿಗೆ ನೀತಿಯನ್ನು ಅವರು ಗಂಭೀರವಾಗಿ ವಿರೋಧಿಸಿದ್ದಾರೆ.
ಇದೀಗ ರಾಜ್ಯ ಸರ್ಕಾರವು ಹೋಟೆಲ್ಗಳ ಲೈಸೆನ್ಸ್ಗೆ ಸಂಬಂಧಿಸಿದಂತೆ ಮತ್ತೆ ಹೆಚ್ಚು ಟ್ಯಾಕ್ಸ್ ವಿಧಿಸುತ್ತಿದೆ. ಈಗ ಇರುವ ಟ್ಯಾಕ್ಸ್ಗಿಂತ ದುಪ್ಪಟ್ಟು ಹಾಗೂ ಅವೈಜ್ಞಾನಿಕ ಟ್ಯಾಕ್ಸ್ಗಳನ್ನು ರಾಜ್ಯ ಸರ್ಕಾರವು ವಿಧಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇದೀಗ 3 ಲಕ್ಷ ರೂಪಾಯಿಯಿಂದ 30 ಲಕ್ಷದ ವರೆಗೆ ಗಾರ್ಬೇಜ್ ಭಾರೀ ಟ್ಯಾಕ್ಸ್ ವಿಧಿಸಲಾಗುತ್ತಿದೆ. ಬಾರ್ ಅಂಡ್ ರೆಸ್ಟೋರೆಂಟ್ ಲೈಸೆನ್ಸ್ ಶುಲ್ಕವನ್ನು ಇದೀಗ ದುಪ್ಪಟ್ಟು ಮಾಡಲಾಗಿದೆ. ಈ ಹಿಂದೆ ಬಾರ್ ಅಂಡ್ ರೆಸ್ಟೋರೆಂಟ್ ಲೈಸೆನ್ಸ್ ಶುಲ್ಕವು 9 ಲಕ್ಷ ರೂಪಾಯಿ ಇತ್ತು. ಅದನ್ನು ಇದೀಗ ಏಕಾಏಕಿ 16 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇದು ಅತ್ಯಂತ ಅವೈಜ್ಞಾನಿಕ ಕ್ರಮವಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಸ್ಟಾರ್ ಹೋಟೆಲ್ಗಳಿಂದ ಬರೋಬ್ಬರಿ 20 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ದಿನಕ್ಕೆ 110 ಕೋಟಿಗೂ ಹೆಚ್ಚು ಅಬಕಾರಿ ಶುಲ್ಕ ಸಂಗ್ರಹವಾಗುತ್ತಿದೆ. ಈಗಾಗಲೇ 40,000 ಸಾವಿರ ಕೋಟಿರೂ ವಾರ್ಷಿಕವಾಗಿ ಅಬಕಾರಿ ಶುಲ್ಕ ಸಂಗ್ರಹವಾಗುತ್ತಿದೆ. ಲೈಸೆನ್ಸ್ ಹೆಚ್ಚುವರಿ ಮಾಡುವುದರಿಂದ 1,200 ಕೋಟಿಯಷ್ಟು ಲೈಸೆನ್ಸ್ ಹಣ ಸಂಗ್ರಹವಾಗಲಿದೆ ಎಂದು ಅವರು ಹೇಳಿದ್ದು. ಇದನ್ನು ತಕ್ಷಣದಿಂದಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ವಿಧಿಸಿರುವ ತೆರಿಗೆ ಈ ರೀತಿ ಇದೆ. ಎ) 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪುರಸಭೆ ಪ್ರದೇಶಗಳು ವರ್ಷಕ್ಕೆ ರೂ.12,00,000 ಬಿ) ನಗರ ಪುರಸಭೆಯೇತರ ಪ್ರದೇಶಗಳು ರೂ. ವರ್ಷಕ್ಕೆ 10,00,000ಸಿ) ನಗರ ಪುರಸಭೆ ಪ್ರದೇಶಗಳು ವರ್ಷಕ್ಕೆ ರೂ.9,00,000 ಡಿ) ಪಟ್ಟಣ ಪುರಸಭೆ/ಪಟ್ಟಣ ಪಂಚಾಯತ್ ಪ್ರದೇಶಗಳು ವರ್ಷಕ್ಕೆ ರೂ.8,00,000 ಇ) ಇತರ ಪ್ರದೇಶಗಳು ವರ್ಷಕ್ಕೆ ರೂ.8,00,000 ನಿಯಮ 3ರ ಷರತ್ತು (4) ರಲ್ಲಿ ಉಲ್ಲೇಖಿಸಲಾದ ಕ್ಲಬ್ಗಳಿಗೆ ಪರವಾನಗಿ ಶುಲ್ಕ ಎ) 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶಗಳು ವರ್ಷಕ್ಕೆ ರೂ.13,00,000 ಬಿ) ಇತರ ನಗರ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶಗಳು ವರ್ಷಕ್ಕೆ ರೂ.10,00,000 ಸಿ) ನಗರ ಮುನ್ಸಿಪಲ್ ಕೌನ್ಸಿಲ್ ಪ್ರದೇಶಗಳು ವರ್ಷಕ್ಕೆ ರೂ. 8,00,000 ಡಿ) ಪಟ್ಟಣ ಮುನ್ಸಿಪಲ್ ಕೌನ್ಸಿಲ್/ಪಟ್ಟಣ ಪಂಚಾಯತ್ ಪ್ರದೇಶಗಳು ವರ್ಷಕ್ಕೆ ರೂ.4,00,000 ಇ) ಇತರ ಪ್ರದೇಶಗಳು. ವರ್ಷಕ್ಕೆ ರೂ.4,00,000