ಕೇಂದ್ರದಿOದ ನೈಸರ್ಗಿಕ ಕೃಷಿಗಾಗಿ 2,481 ಕೋಟಿ ಮೊತ್ತದ ಹೊಸ ಯೋಜನೆ ಘೋಷಣೆ ಆಗಿದ್ದು ಇದನ್ನು ಪಡೆಯುವುದು ಹೇಗೆ ಇದರ ಬಗ್ಗೆ ಮಾಹಿತಿ ಎಲ್ಲಿದೆ ನೋಡಿ. ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನ್ಯಾಷನಲ್ ಮಿಷನ್ ಆನ್ ನ್ಯಾಚುರಲ್ ಫಾರ್ಮಿಂಗ್ ಎಂಬ ಹೊಸ ರಾಷ್ಟ್ರೀಯ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2,481ಕೋಟಿ ಮೊತ್ತದ ಈ ಯೋಜನೆಗೆ ಒಪ್ಪಿಗೆಯನ್ನು ನೀಡಲಾಯಿತು.
ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಕೇಂದ್ರ ಸರ್ಕಾರವು ನೈಸರ್ಗಿಕ ಕೃಷಿಗಾಗಿ ನ್ಯಾಷನಲ್ ಮಿಷನ್ ಆನ್ ನ್ಯಾಚುರಲ್ ಫಾರ್ಮಿಂಗ್ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ ಈ ಯೋಜನೆಗೆ ಒಟ್ಟು 2,481 ಕೋಟಿ ರೂ. ಗಳ ಬಜೆಟ್ ನಿಗದಿಪಡಿಸಲಾಗಿದೆ. ಇದರಲ್ಲಿ 1,584 ಕೋಟಿ ರೂ. ಕೇಂದ್ರದ ಪಾಲಾಗಿದ್ದರೆ, ಉಳಿದ 897 ಕೋಟಿ ರೂ. ರಾಜ್ಯ ಸರ್ಕಾರಗಳು ನೀಡಲಿದೆ. ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಹೊಸ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಒಂದು ಕೋಟಿ ರೈತರನ್ನು ತಲುಪಲಿರುವ ಈ ಯೋಜನೆಯು 15 ನೇ ಹಣಕಾಸು ಆಯೋಗದ ಅಡಿಯಲ್ಲಿ 2025-26 ರ ವರೆಗೆ ನಡೆಯಲಿದೆ. 2,481 ಕೋಟಿ ಬಜೆಟ್ನ ಈ ಯೋಜನೆಗೆ 1,584 ಕೋಟಿ ರೂ. ಕೇಂದ್ರ ಸರ್ಕಾರ ನೀಡಲಿದ್ದು, ಇನ್ನುಳಿದ 897ಕೋಟಿ ರೂ. ರಾಜ್ಯ ಸರ್ಕಾರಗಳು ನೀಡಲಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಉಪಕ್ರಮವು ಗ್ರಾಮ ಪಂಚಾಯತಿಗಳ 15,೦೦೦ ಕ್ಲಸ್ಟರ್ಗಳಲ್ಲಿ ಜಾರಿಗೆ ಬರಲಿದೆ. ಮತ್ತು ಇದು 7.5 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ನೈಸರ್ಗಿಕ ಕೃಷಿಯನ್ನು ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಾಲಾಗಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಒಂದು ಸ್ವತಂತ್ರ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಪ್ರಾರಂಭಿಸಲಾದ ಓಒಓಈ ಎಂಬ ಈ ನೈಸರ್ಗಿಕ ಕೃಷಿ ಯೋಜನೆಯು ಭಾರತೀಯ ಸಂಪ್ರದಾಯಗಳಲ್ಲಿ ಬೇರೂರಿರುವ ರಾಸಾಯನಿಕ-ಮುಕ್ತ, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಎಲ್ಲರಿಗೂ ಸುರಕ್ಷಿತ, ಪೌಷ್ಟಿಕ ಆಹಾರವನ್ನು ಒಗದಿಸುವ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು ಹಾಗೂ ಬಾಹ್ಯವಾಗಿ ಸಿಗುವ ರಸಗೊಬ್ಬರಗಳು, ಕೀಟ ನಾಶಕಗಳ ಬಳಕೆಯನ್ನು ಕಡಿಮೆ ಮಾಡಿ ಸ್ಥಳೀಯವಾಗಿ ಸಿಗುವ ಗೋ ಆಧಾರಿದ ಗೊಬ್ಬರ ಬಳಸಿ ಮಣ್ಣಿನ ಗುಣಮಟ್ಟ ಸುಧಾರಿಸುವ ಮತ್ತು ಆಧುನಿಕ ಕೃಷಿಯ ಸವಾಲುಗಳನ್ನು ತಗ್ಗಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಓಒಓಈ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ವಿಶ್ವವಿದ್ಯಾಲಯಗಳು ಮತ್ತು ರೈತರ ಹೊಲಗಳಲ್ಲಿ 2,೦೦೦ ಮಾದರಿ ಪ್ರಾತ್ಯಕ್ಷಿಕೆ ಫಾರ್ಮ್ಗಳನ್ನು ಸ್ಥಾಪಿಸಿ ಆ ಮೂಲಕ ರೈತರಿಗೆ ನೈಸರ್ಗಿಕ ಕೃಷಿ ತಂತ್ರಗಳ ಬಗ್ಗೆಯೂ ತರಬೇತಿಯನ್ನು ನೀಡಲಿದೆ.