F-35 ಖರೀದಿಸಲ್ಲ : ತೆರಿಗೆ ಸಮರ ಆರಂಭಿಸಿದ ಟ್ರಂಪ್‌ಗೆ ಬಿಗ್ ಶಾಕ್‌ || Big shock for Trump

India to Cut Tariffs

ನವದೆಹಲಿ: ಡೊನಾಲ್ಡ್‌ ಟ್ರಂಪ್‌ ತೆರಿಗೆ ಸಮರ ಸಾರಿದ ಬೆನ್ನಲ್ಲೇ ಅಮೆರಿಕದಿಂದ ಎಫ್‌-35 ಯುದ್ಧ ವಿಮಾನವನ್ನು ಭಾರತ  ಖರೀದಿಸದೇ ಇರಲು ನಿರ್ಧರಿಸಿದೆ.

ಭಾರತ ಐದನೇ ತಲೆಮಾರಿನ ಯುದ್ಧ ವಿಮಾನ ಖರೀದಿಸಲು ಆಸಕ್ತಿ ವಹಿಸಿದೆ. ಮೋದಿ ಅವರ ಅಮೆರಿಕ ಪ್ರವಾಸದ ಸಮಯದಲ್ಲಿ ಟ್ರಂಪ್‌ ಅಮೆರಿಕ ಭಾರತಕ್ಕೆ ಎಫ್‌ 35 ವಿಮಾನ ನೀಡುವ ಆಫರ್‌ ನೀಡಿದ್ದರು.

ಈ ಆಫರ್‌ ಪ್ರಕಟವಾದ ನಂತರ  ಭಾರತ ಎಫ್‌-35 (F-35) ಖರೀದಿ ಸಂಬಂಧ ಮಾತುಕತೆ ನಡೆಸಿತ್ತು. ಆದರೆ ಈಗ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ತೆರಿಗೆ ವಿಧಿಸಿದ ಬೆನ್ನಲ್ಲೇ ಭಾರತ ಎಫ್‌-35 ಖರೀದಿಸದೇ ಇರಲು ತೀರ್ಮಾನಿಸಿದೆ ಎಂದು ಬ್ಲೂಮ್‌ಬರ್ಗ್‌ ಭಾರತದ ಖಚಿತ ಮೂಲಗಳನ್ನು ಆಧರಿಸಿ ವರದಿ ಮಾಡಿದೆ

ನರೇಂದ್ರ ಮೋದಿ ಸರ್ಕಾರವು ದೇಶೀಯವಾಗಿ ಜಂಟಿಯಾಗಿ ರಕ್ಷಣಾ ಉಪಕರಣಗಳನ್ನು ವಿನ್ಯಾಸಗೊಳಿಸುವುದು ಮತ್ತು ತಯಾರಿ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ಅಮೆರಿಕಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.

ಬ್ಲೂಮ್‌ಬರ್ಗ್‌ ಮಾಧ್ಯಮ ವರದಿಯ ಬಗ್ಗೆ ಇಲ್ಲಿಯವರೆಗೆ ಭಾರತ, ಅಮೆರಿಕ ಸರ್ಕಾರ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಭಾರತದ ಬತ್ತಳಿಕೆಯಲ್ಲಿ ರಫೇಲ್‌ ಮತ್ತು ತೇಜಸ್‌ ಯುದ್ಧ ವಿಮಾನವಿದೆ. ಇದು Four and Half Generation Jet Fighters ವಿಭಾಗಕ್ಕೆ ಬರುತ್ತದೆ. ಎಫ್‌ 35 ಮತ್ತು ಸು 57 ಎರಡು ಐದನೇ ತಲೆಮಾರಿನ ಯುದ್ಧ ವಿಮಾನಗಳು. ಈ ತಲೆಮಾರಿನ ಯುದ್ಧ ವಿಮಾನಗಳು ಭಾರತದಲ್ಲಿ ಇಲ್ಲ.

Leave a Reply

Your email address will not be published. Required fields are marked *