ಬೆಂಗಳೂರು: “ಜಾತಿ ಗಣತಿ ವರದಿ ವಿಚಾರದಲ್ಲಿ ಸರ್ಕಾರ ಆತುರವಾಗಿ ತೀರ್ಮಾನ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಜಾತಿ ಗಣತಿ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿರುವ ಬಗ್ಗೆ ಕೇಳಿದಾಗ, “ಕಾನೂನು ಸಚಿವರು ವರದಿ ತೆರೆದಿದ್ದು, ಯಾವುದೇ ಶಾಸಕರು ಹಾಗೂ ಸಚಿವರು ಇದನ್ನು ನೋಡಿಲ್ಲ. ಈ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಸಚಿವರ ವಿರೋಧದ ಬಗ್ಗೆ ಕೇಳಿದಾಗ, “ಜಾತಿ ಗಣತಿ ವಿಚಾರವಾಗಿ ಯಾವುದೇ ಸಚಿವರ ವಿರೋಧವಿಲ್ಲ. ಯಾರೂ ಇದನ್ನು ಕಣ್ಣುಬಿಟ್ಟು ನೋಡಿಲ್ಲ” ಎಂದು ಹೇಳಿದರು.