ಬೆಂಗಳೂರು: ಸಾರಿಗೆ ನೌಕರರು ಇಂದಿನಿಂದ ಆರಂಭಿಸಿರುವ ಅನಿರ್ದಾಷ್ಟಾವಧಿ ಮುಷ್ಕರ ಸಾಮಾನ್ಯ ಜನಜೀವನ ಮೇಲೆ ಭಾರೀ ಪರಿಣಾಮ ಬೀರಿದೆ. ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಹೇಳುವ ಹಾಗೆ ರಾಜ್ಯದ ಯಾವುದೇ ಭಾಗದಲ್ಲಿ ಅಹಿತಕರ ಘಟನೆ ಜರುಗಿಲ್ಲ, ಅಲ್ಲಲ್ಲಿ ಸಣಪುಟ್ಟ ಘಟನೆಗಳು ಜರುಗಿವೆ, ಆದರೆ ಅವುಗಳಿಂದ ಹೆಚ್ಚಿನ ಸಮಸ್ಯೆಯಾಗಿಲ್ಲ ಎಂದು ಹೇಳಿದರು.
ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಜಾರಿಯಲ್ಲಿದೆ, ಆಯಕಟ್ಟಿನ ಜಾಗಗಳ ಮೇಲೆ ನಿಗಾ ಇಡಲಾಗಿದೆ, ಜನರ ಮನಸ್ಥಿತಿ ಬಗ್ಗೆ ಹೇಳಲಾಗಲ್ಲ, ಯಾವ ಕ್ಷಣದಲ್ಲಾದರೂ ಜನ ಗಲಾಟೆ ಸೃಷ್ಟಿಸಬಹುದು ಎಂದು ಪರಮೇಶ್ವರ್ ಹೇಳಿದರು.
For More Updates Join our WhatsApp Group :