ಪಾಟ್ನಾ: ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತಂತ್ರಗಾರಿಕೆ ಫಲಿಸದೆ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷ ಹೀನಾಯ ಸೋಲು ಕಂಡಿತ್ತು. ಬೇರೆಲ್ಲಾ ಪಕ್ಷಗಳಿಗೆ ಚುನಾವಣಾ ತಂತ್ರಗಾರಿಕೆ ಹೇಳಿಕೊಟ್ಟಿದ್ದ ಪ್ರಶಾಂತ್ ತಮ್ಮ ಪಕ್ಷವನ್ನೇ ಗೆಲ್ಲಿಸುವಲ್ಲಿ ಸೋತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.
ಇದೀಗ ಪ್ರಶಾಂತ್ ಕಿಶೋರ್ ಈ ಬಗ್ಗೆ ಮಾತನಾಡಿದ್ದು, ಚುನಾವಣೆಯಲ್ಲಿ ಸೋತಿದ್ದು ಅಪರಾಧವಲ್ಲ, ನಮ್ಮ ತಪ್ಪು ಎಲ್ಲಾಗಿದೆ ಎಂಬುದನ್ನು ಹುಡುಕಿ ತಿದ್ದಿಕೊಂಡು ಮುನ್ನುಗ್ಗುವ ಪ್ರಯತ್ನ ಮಾಡುತ್ತೇವೆ ಎಂದರು. ಚುನಾವಣೆ ಸಮಯದಲ್ಲಿ ತಮ್ಮ ಪಕ್ಷವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿತ್ತು ಆದರೂ ವಿಫಲವಾಗಿದೆ. ತಮ್ಮ ಪಕ್ಷವು ಹಿನ್ನಡೆಯನ್ನು ಅನುಭವಿಸಿದೆ ಆದರೆ ತಪ್ಪುಗಳನ್ನು ಸರಿಪಡಿಸಿ ಮುನ್ನುಗ್ಗುತ್ತದೆ ಆದರೆ ವಾಪಸ್ ಹೋಗುವುದಿಲ್ಲ.
ನಾವು ನಮ್ಮ ಕಡೆಯಿಂದ ತುಂಬಾ ಸಕಾರಾತ್ಮಕವಾಗಿ ಪ್ರಯತ್ನಿಸಿದೆವು. ಈ ಸರ್ಕಾರವನ್ನು ಬದಲಾಯಿಸಲು ನಾವು ವಿಫಲರಾಗಿದ್ದೇವೆ. ನಮ್ಮ ಕಡೆಯಿಂದ ನಾವು ಬಹಳಷ್ಟು ಪ್ರಯತ್ನಿಸಿದ್ದೇವೆ, ಆದರೆ ನಾವು ಎಲ್ಲೋ ವಿಫಲರಾಗಿದ್ದೇವೆ ಎಂದು ತೋರುತ್ತದೆ. ಜನರಿಗೆ ಅರ್ಥಮಾಡಿಕೊಳ್ಳಲು ನಾನು ವಿಫಲವಾದ ಕಾರಣ ನಾನು ಎಲ್ಲಾ ಆಪಾದನೆಗಳನ್ನು ನನ್ನ ಮೇಲೆಯೇ ಹಾಕಿಕೊಳ್ಳುತ್ತೇನೆ.
ನಾವು ನಮ್ಮ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ನಮ್ಮ ಪ್ರಯತ್ನಗಳಲ್ಲಿ ನಾನು ವಿಫಲನಾದುದಕ್ಕೆ ವಿಷಾದಿಸುತ್ತೇನೆ. ನಾನು ಒಂದು ದಿನದ ಮೌನ ಉಪವಾಸ ಮಾಡುತ್ತೇನೆ ಎಂದು ಅವರು ಹೇಳಿದರು. ನಮ್ಮ ಕಡೆಯಿಂದ ತಪ್ಪುಗಳಾಗಿರಬಹುದು, ಯಾವುದೇ ಅಪರಾಧ ಮಾಡಿಲ್ಲ ಮತಗಳನ್ನು ಪಡೆಯದಿರುವುದು ಅಪರಾಧವಲ್ಲ ಎಂದು ಅವರು ಹೇಳಿದರು.
For More Updates Join our WhatsApp Group :
