ಯಾವ ದಿನಾ ದೀಪಾವಳಿ ಆಚರಿಸಬೇಕು; ಅಕ್ಟೋಬರ್ 31 ಅಥವಾ ನವೆಂಬರ್ 1

ಯಾವ ದಿನಾ ದೀಪಾವಳಿ ಆಚರಿಸಬೇಕು; ಅಕ್ಟೋಬರ್ 31 ಅಥವಾ ನವೆಂಬರ್ 1

ಭಾರತದಲ್ಲಿನ ದೊಡ್ಡ ಹಬ್ಬಗಳಲ್ಲಿ ಒಂದು, ದೀಪಾವಳಿ. ಇದು ಇನ್ನೇನು ಸಮೀಪದಲ್ಲೆ ಇದೆ, ಆದರೆ ಒಂದು ಪ್ರಶ್ನೆ ಎಲ್ಲರನ್ನೂ ಗೊಂದಲಗೊಳಿಸಿದೆ, ಹಬ್ಬ ಯಾವಾಗ? ಹಬ್ಬ, ಕೆಲವರು ಅಕ್ಟೋಬರ್ 31 ಎಂದು ಹೇಳುತ್ತಾರೆ, ಆದರೆ ಕೆಲವರು ಅದರ ಮರುದಿನ ಅಂದ್ರೆ ನವೆಂಬರ್ 1 ಎಂದು ಹೇಳುತ್ತಾರೆ. ದೀಪಾವಳಿ ಪೂಜೆಯನ್ನು ವಿಶಿಷ್ಟವಾಗಿ ಹಬ್ಬಗಳ ಮುಖ್ಯ ದಿನದಂದು ನಡೆಸಲಾಗುತ್ತದೆ, ದೀಪಾವಳಿ ಹಬ್ಬವು ಕಾರ್ತಿಕ ಮಾಸದ ಅಮಾವಾಸ್ಯೆಯ ದಿನದಂದು ಬರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಜೋತೆಗೆ ಪಂಚಾಂಗದ ಪ್ರಕಾರ ದೀಪಾವಳಿಯನ್ನು ಕಾರ್ತಿಕ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ಅಮವಾಸ್ಯೆಯು ಸತತ ಎರಡು ದಿನಗಳಲ್ಲಿ ಬರುವುದರಿಂದ ಆಚರಣೆಯ ನಿಖರವಾದ ದಿನಾಂಕದ ಬಗ್ಗೆ ಗೊಂದಲ ಉಂಟಾಗಿದೆ. ಅಮವಾಸ್ಯೆಯು ಅಕ್ಟೋಬರ್ 31 ರಂದು ಮಧ್ಯಾಹ್ನ 3:55 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 1 ರಂದು ಸಂಜೆ 6:15 ರವರೆಗೆ ಇರುತ್ತದೆ. 150 ಕ್ಕೂ ಹೆಚ್ಚು ವಿದ್ವಾಂಸರ ಪ್ರಕಾರ ಈ ವರ್ಷ ನವೆಂಬರ್ 1 ರಂದು ದೀಪಾವಳಿಯನ್ನು ಆಚರಿಸಲಾಗುತ್ತದೆ ಎಂದು ವರದಿಯೊಂದು ಹೇಳುತ್ತಿದೆ. ಇಂದೋರ್ನಲ್ಲಿ ನಡೆದ ಸಭೆಯ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಯಿತು, ಅಲ್ಲಿ ನೂರಾರು ಪುರೋಹಿತರು ಮತ್ತು ತಜ್ಞರು ಅತ್ಯಂತ ಸೂಕ್ತವಾದ ದಿನಾಂಕವನ್ನು ನಿರ್ಧರಿಸಲು ಒಟ್ಟುಗೂಡಿದರು. ಜನರು ಎರಡೂ ದಿನಗಳಲ್ಲಿ ಹಬ್ಬವನ್ನು ಆಚರಿಸಬಹುದು ಮತ್ತು ಈ ವರ್ಷದ ಆಚರಣೆಗಳು ಆರು ದಿನಗಳವರೆಗೆ ಇರುತ್ತದೆ.

Leave a Reply

Your email address will not be published. Required fields are marked *