ಒನ್ ನೇಷನ್ ಒನ್ ಎಲೆಕ್ಷನ್ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದೇನು..?

ಒನ್ ನೇಷನ್ ಒನ್ ಎಲೆಕ್ಷನ್ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದೇನು..?

ಬೆಂಗಳೂರು : ಕನಿಷ್ಠ 2/3 ಸ್ಟೇಟ್ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಈಗ ತಾನೇ ಕೋವಿಂದ್ ಅವರು ವರದಿ ಸಲ್ಲಿಸಿದ್ದಾರೆ. ಹೌಪವರ್ ಕಮಿಟಿ ವರದಿ ಸಲ್ಲಿಸಿದೆ. ಮುಂದೆ ಏನು ಡೆವಲಪ್ಮೆಂಟ್ ಆಗುತ್ತದೆ ನೋಡೋಣ ಎಂದು ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿಕೆಯನ್ನು ಕೊಟ್ಟಿದ್ದಾರೆ.

ಅಧಿಕಾರಿಗಳ ವಿರುದ್ಧ ಗವರ್ನರ್  ವರದಿ ಕೇಳಿರುವ ವಿಚಾರದ ಅದರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ದಿನನಿತ್ಯ ಒಂದಲ್ಲ ಒಂದು ರೀತಿ ಕಂಪ್ಲೈಂಟ್ಸ್ ಬಂದಾಗ ಸರ್ಕಾರವನ್ನು ಕೇಳುತ್ತಾರೆ. ಅದು ಸ್ವಾಭಾವಿಕವಾಗಿ ಮಾಹಿತಿ ಕೇಳುತ್ತಾರೆ, ಸರ್ಕಾರ ಉತ್ತರ ಕೊಡುತ್ತದೆ ಎಂದರು. ರಾಜ್ಯಪಾಲರಿಂದ ಕುಲಪತಿಗಳ ನೇಮಕ ಅಧಿಕಾರ ಮೊಟಕು ವಿಚಾರದ ಬಗ್ಗೆ ಮಾತನಾಡಿ, ರಾಜ್ಯಪಾಲರ ರೋಲ್ ಏನು ಅಂತ ಮಾಡಿದ್ದಾರೆ. ನಾನು ಹೈಯರ್ ಎಜುಕೇಷನ್ ಮಿನಿಸ್ಟರ್ ಇದ್ದೆ ಆಗ ವಿಸಿಗಳನ್ನು ನೇಮಕ ಮಾಡೋದನ್ನು ಗವರ್ನರ್ ಅವರಿಂದ ಮೊಟಕುಗೊಳಿಸಿದ್ದೆ ಸರ್ಕಾರದ ತೀರ್ಮಾನ ಆಗುವ ರೀತಿಯಲ್ಲಿ ನಾನು ಮಾಡಿದ್ದೆ ಗುಜರಾತ್ ಸರ್ಕಾರ ಕೇವಲ ಸೆರ್ಮನಿಯಕ್ ಅಂತ ಮಾಡಿದೆ. ಗುಜರಾತನಲ್ಲಿ ಆಡಳಿತಕ್ಕೆ ಅವರು ಒಳಗಾಗುವುದಿಲ್ಲ ಅಡಳಿತದ ದೃಷ್ಟಿಯಿಂದ ಯಾವುದು ಸುಲಭ ಅದು ಮಾಡಿರುತ್ತಾರೆ.  ನಾವು ಒಬ್ಬರೇ ಮಾಡಿಲ್ಲ, ಬೇರೆ ಬೇರೆ ರಾಜ್ಯದಲ್ಲಿಯೂ ಮಾಡಿದ್ದಾರೆ. ಇದೇನು ಹೊಸದೇನಲ್ಲ, 2000 ಬಿಲ್ ಪಾಸ್ ಮಾಡಿದ್ದೇವು. ಅದರ ಬಗ್ಗೆ ಚರ್ಚೆ ನಡೆಯುತ್ತಿರುತ್ತವೆ ಎಂದು ಹೇಳಿದರು.

Leave a Reply

Your email address will not be published. Required fields are marked *