ಬೆಂಗಳೂರು: ಅತ್ತ ಧರ್ಮಸ್ಥಳದಲ್ಲಿ ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸುತ್ತಿದ್ದಂತೆಯೇ ರಾಜಕೀಯ ನಾಯಕರ ಪ್ರತಿಕ್ರಿಯೆಗಳು ಬರಲಾರಂಭಿಸಿವೆ,
ನಗರದಲ್ಲಿ ಮಾಧ್ಯಮಗಳೊಡನೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ಹೂತಿಟ್ಟಿದ್ದಾಗಿ ಚಿನ್ನಯ್ಯ ಕ್ಲೇಮ್ ಮಾಡಿದಾಗ, ಬಿಜೆಪಿಯವರು ಏನೂ ಮಾತಾಡಿರಲಿಲ್ಲ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಅಂತ ತಾನು ಮತ್ತು ಸದನದಲ್ಲಿ ಬಾಲಕೃಷ್ಣ ಪ್ರಸ್ತಾಪ ಮಾಡಿದ ಬಳಿಕ ಫೆನ್ಸ್ ಸಿಟ್ಟರ್ಗಳಾಗಿರುವ ಬಿಜೆಪಿಯವರು ಹೇಳಿಕೆ ನೀಡತೊಡಗಿದರು. ಅಸಲಿಗೆ ಧರ್ಮಸ್ಥಳದವರೇ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತನಿಖೆಗಾಗಿ ಆಗ್ರಹಿಸಿದ್ದರು ಮತ್ತು ತನಿಖೆಯ ವೇಳೆ ಸಹಕರಿಸಿದರು, ತಪ್ಪಿತಸ್ಥರ ವಿರುದ್ಧ ಕ್ರಮ ಖಂಡಿತವಾಗಿ ಜರುಗುತ್ತದೆ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವ ಸದನದಲ್ಲಿ ಹೇಳಿದ್ದಾರೆ ಎಂದು ಶಿವಕುಮಾರ್ ಹೇಳಿದರು.
For More Updates Join our WhatsApp Group :
