ಈಶ ಗ್ರಾಮೋತ್ಸವದಲ್ಲಿ ಭಾಗವಹಿಸಲು ಸಜ್ಜಾಗಿರುವ 8100 ಕ್ಕೂಹೆಚ್ಚು ಗ್ರಾಮೀಣ ಕರ್ನಾಟಕದ ಆಟಗಾರರು.

• 17ನೇ ಆವೃತ್ತಿ ಯಾದ ಈ ವರ್ಷದ ಈಶ ಗ್ರಾಮೋತ್ಸವವು ಕರ್ನಾಟಕದಾದ್ಯಂತ 700ಕ್ಕೂ ಹೆಚ್ಚು ತಂಡಗಳ ಸ್ಪರ್ಧೆಗಳಿಗೆ ಸಾಕ್ಷಿಯಾಗಲಿದೆ.
• ಕಳೆದ ವರ್ಷ, ಕರ್ನಾಟಕ ರಾಜ್ಯವು ಅತ್ಯುತ್ತಮ ಆಟವನ್ನು ಪ್ರದರ್ಶಿಸಿ, ಪುರುಷರ ವಾಲಿಬಾಲ್ನಲ್ಲಿ ಮೊದಲ, ಎರಡನೇ ಮತ್ತು ಮೂರನೇ ಬಹುಮಾನಗಳನ್ನು ಗೆದ್ದುಕೊಂಡಿತು ಮತ್ತು ಮಹಿಳೆಯರ ಥ್ರೋಬಾಲ್ನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿತು.
• ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಮೊದಲ ಬಾರಿಗೆ ಒಡಿಶಾ ಸೇರಿದಂತೆ 35,000 ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡಿರುವ 2025ರ ಈಶಗ್ರಾಮೋತ್ಸವವು ಮತ್ತಷ್ಟು ಅದ್ಭುತ ವಾಗಿರಲಿದೆ!

ಆಗಸ್ಟ್ 11, 2025:ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾದ ಈಶ ಗ್ರಾಮೋತ್ಸವದ 17ನೇ ಆವೃತ್ತಿಆಗಸ್ಟ್ 10ರಂದು ಕರ್ನಾಟಕದಲ್ಲಿಆರಂಭವಾಯಿತು. ಮೈಸೂರು ಪ್ರೆಸ್ಕ್ಲಬ್ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಗ್ರಾಮೋತ್ಸವ ತಂಡವು ಈ ವರ್ಷದ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿತು. 2024ರಲ್ಲಿ 5,000 ಕ್ಕೂ ಹೆಚ್ಚು ಆಟಗಾರರನ್ನು ದಾಖಲಿಸಿದ್ದ ಕರ್ನಾಟಕ ರಾಜ್ಯವು, ಈವರ್ಷ 700ಕ್ಕೂ ಹೆಚ್ಚು ತಂಡಗಳೊಂದಿಗೆ 8,100ಕ್ಕೂ ಹೆಚ್ಚು ಆಟಗಾರರ ದಾಖಲೆಯ ಭಾಗವಹಿಸುವಿಕೆಯನ್ನು ಕಾಣಲಿದೆ, ಇದು ರಾಜ್ಯದಾದ್ಯಂತ ಉತ್ಸವದ ಬೆಳೆಯುತ್ತಿರುವ ಜನಪ್ರಿಯತೆಯನ್ನು ಎತ್ತಿತೋರಿಸುತ್ತದೆ.

ಈಶಗ್ರಾಮೋತ್ಸವಕರ್ನಾಟಕದ 18 ಜಿಲ್ಲೆಗಳಲ್ಲಿ 19 ಕ್ಲಸ್ಟರ್ಗಳಲ್ಲಿನಡೆಯುತ್ತಿದೆ, ಇವುಗಳಲ್ಲಿ ಎಂಟು ಕ್ಲಸ್ಟರ್ಗಳಲ್ಲಿ ಥ್ರೋಬಾಲ್ಪಂ ದ್ಯಾವಳಿಗಳು ನಡೆಯುತ್ತವೆ. ಪುರುಷರ ವಿಭಾಗದಲ್ಲಿ ವಾಲಿಬಾಲ್ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್ಇರುತ್ತದೆ, ಫೈನಲ್ನಲ್ಲಿಪ್ಯಾರಾ-ವಾಲಿಬಾಲ್ನ ಪ್ರದರ್ಶನ ಪಂದ್ಯವೂ ಜರುಗಲಿದೆ. ರಾಜ್ಯದಲ್ಲಿ ಕ್ಲಸ್ಟರ್ಪಂದ್ಯಗಳು ಈಗಾಗಲೇ ಆರಂಭವಾಗಿದ್ದು, ವಿಭಾಗೀಯ ಪಂದ್ಯಗಳುಆ ಗಸ್ಟ್ 31ರಂದು ಉಡುಪಿಯಲ್ಲಿ ಮತ್ತು ಸೆಪ್ಟೆಂಬರ್ 7ರಂದು ಸದ್ಗುರುಸ ನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ನಿಗದಿಯಾಗಿವೆ.

ದೇಶದಾದ್ಯಂತ, ಈಶಗ್ರಾಮೋತ್ಸವವು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಮೊದಲ ಬಾರಿಗೆ ಒಡಿಶಾಸೇರಿದಂತೆ 35,000 ಕ್ಕೂಹೆಚ್ಚು ಗ್ರಾಮಗಳನ್ನು ವ್ಯಾಪಿಸಲಿದೆ. ಈವರ್ಷ 5,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ 50,000ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಸ್ಪರ್ಧಿಸುತ್ತಿದ್ದು, 6,000ಕ್ಕೂ ಹೆಚ್ಚು ತಂಡಗಳು ರಚನೆ ಯಾಗಿವೆ.

ಗ್ರಾಮೋತ್ಸವವು ಮೂರು ಹಂತಗಳಲ್ಲಿ ನಡೆಯಲಿದೆ: ಕ್ಲಸ್ಟರ್ಹಂತ, ವಿಭಾಗೀಯ ಹಂತ ಮತ್ತು ಫೈನಲ್. ಗ್ರಾಂಡ್ಫೈನಲ್ಸೆ ಪ್ಟೆಂಬರ್ 21 ರಂದು ಕೊಯಂಬತ್ತೂರಿನ ಈಶಯೋಗ ಕೇಂದ್ರದಲ್ಲಿರುವ ಪ್ರತಿಷ್ಠಿತ ಆದಿಯೋಗಿ ಮುಂದೆ ನಡೆಯಲಿದೆ. ಕಳೆದವರ್ಷ, ಕರ್ನಾಟಕ ಅದ್ಭುತ ಪ್ರದರ್ಶನ ನೀಡಿ, ಪುರುಷರ ವಾಲಿಬಾಲ್ನಲ್ಲಿ ಮೊದಲ, ಎರಡನೇ ಮತ್ತು ಮೂರನೇ ಬಹುಮಾನಗಳನ್ನು ಗೆದ್ದುಕೊಂಡಿತು ಮತ್ತು ಮಹಿಳೆಯರ ಥ್ರೋಬಾಲ್ನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *