ಎಲ್ಲರಿಗೂ ದುಡ್ಡು ಮಾಡೋ ಆಸೆ. ಬೇಗ ಬೇಗ ಶ್ರೀಮಂತರಾಗಬೇಕು. ಎಲ್ಲರಂತೆ ಸುಖ ಜೀವನ ಮಾಡಬೇಕು ಅಂದುಕೊಳ್ಳುವವರುಎಲ್ಲೆಲ್ಲಿ ಹಣ ಸಿಗುತ್ತೆ ಅಂತ ಹುಡುಕ್ತಾರೆ. ಹಾಗೆ ಹಣ ಹುಡುಕುತ್ತಾ ಹೋದವರಲ್ಲಿ ಕೆಲವರು ಅಡ್ಡ ದಾರಿ ಹಿಡಿದರೆ, ಮತ್ತೆ ಕೆಲವರು ಶ್ರಮದಿಂದ ಬೆಳೆಯುತ್ತಾರೆ. ಮೇಲೆ ಹೇಳಿದ ಮೊದಲನೇ ಸಾಲಿಗೆ ಸೇರುವ ಮಹಿಳೆಯೊಬ್ಬಳು ಒಂದಲ್ಲ ಎರಡಲ್ಲ ಬರೋಬ್ಬರಿ 30 ಸಾವಿರ ಮಹಿಳೆಯರಿಗೆ ವಂಚನೆ ಮಾಡಿ ಪರಾರಿ ಆಗಿದ್ದಾಳೆ.
ಒಬ್ಬ ಮಹಿಳೆ, ಒಂದು ಮನೆ, ಸಾವಿರಾರು ಮಹಿಳೆಯರು. ಇವತ್ತು ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದಲ್ಲಿ ಕಂಡು ಬಂದ ಕೆಲವು ದೃಶ್ಯಗಳು ಕಂಡು ಬಂದವು. ಯಾರನ್ನೋ ನಂಬಿ ಹಣ ಹಾಕಿದ ಮಹಿಳೆಯರು ತಮಗೆ ಆಗಿರುವ ಅನ್ಯಾಯವನ್ನು ಹೇಳಿಕೊಳ್ಳುತ್ತಿದ್ದರು
ಸುರೇಖಾ ಎಂಬ ಹೆಸರಿನ ಮಹಿಳೆಯೊಬ್ಬಳು ಬೆಳಗಾವಿ ತಾಲೂಕಿನಾದ್ಯಂತ ಮಹಿಳಾ ಸಂಘಗಳನ್ನ ಮಾಡುವಂತೆ ಮಹಿಳೆಯರಿಗೆ ಪುಸಲಾಯಿಸಿದ್ದಾಳೆ. ಒಬ್ಬೊಬ್ಬರು 4-8 ಮಹಿಳಾ ಸಂಘಗಳನ್ನ ಮಾಡಿ ಹಣ ಕಲೆಕ್ಟ್ ಮಾಡಿದ್ದಾರೆ. ಸಂಘಗಳನ್ನ ಮಾಡಿದವ್ರಿಗೆ 50 ಪರ್ಸೆಂಟ್ ಶೇರ್ ನೀಡೋದಾಗಿ ಆಸೆ ಹುಟ್ಟಿಸಿ. ಈಗ ಇರೋ ಬರೋದನ್ನೆಲ್ಲಾ ಬಾಚಿಕೊಂಡು ಪರಾರಿಯಾಗಿದ್ದಾಳೆ.