ಮುಂದಿನ ವರ್ಷ ನಡೆಯಲಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೂ ಮೊದಲೇ ಭಾರೀ ಕುತೂಹಲ ಕೆರಳಿಸಿದೆ. ಕಾರಣ ಕೆಲ ಸ್ಟಾರ್ ಆಟಗಾರರು ಈ ಬಾರಿ ತಮ್ಮ ಹಾಲಿ ತಂಡಗಳನ್ನು ತೊರೆದು ಹೊಸ ತಂಡಕ್ಕೆ ಸೇರಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ರಿಷಭ್ ಪಂತ್ ಹೆಸರು ಭಾರೀ ಟ್ರೆಂಡಿಂಗ್ನಲ್ಲಿದೆ.
ಕಿವೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅದ್ಬುತ ಪ್ರದರ್ಶನ ತೋರುತ್ತಿರುವ ಪಂತ್ ಈ ಬಾರಿ ಐಪಿಎಲ್ ಮೆಗಾ ಹರಾಜಿಗೆ ಎಂಟ್ರಿ ಕೊಡಲಿದ್ದಾರೆ ಎಂದು ವರದಿಗಳಾಗಿವೆ. ಅಲ್ಲದೇ ಅವರಿಗೆ ಈಗಾಗಲೇ ಕೆಲ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಸೇರುವಂತೆ ಆಫರ್ ಕೂಡ ನೀಡಿವೆ ಎಂದು ಸುದ್ದಿ ಹರಿದಾಡಲಾರಂಭಿಸಿದೆ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಈ ಹಿನ್ನೆಲೆ ತಂಡಕ್ಕೆ ಹೊಸ ನಿರ್ದೇಶಕ ಹಾಗೂ ಮುಖ್ಯ ಕೋಚ್ ಅನ್ನು ನೇಮಕ ಮಾಡಿಕೊಂಡಿದೆ. ಇದರ ಜೊತೆ ನಾಯಕತ್ವ ಬದಲಾವಣೆಗೂ ಚಿಂತನೆ ನಡೆಸಿದ್ದು ರಿಷಬ್ ಪಂತ್ ಅವರನ್ನು ನಾಯಕತ್ವದ ಕೆಳಗಿಳಿಸಿ ಮತ್ತು ಹೊಸ ನಾಯಕನನ್ನು ನೇಮಿಸಲು ಫ್ರಾಂಚೈಸಿ ಯೋಜಿಸುತ್ತಿದೆ ಎಂದು ವರದಿಗಳಾಗಿವೆ. ಈ ಹಿನ್ನೆಲೆ ಪಂತ್ ತಂಡ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಂತ್ ಅವರನ್ನು ತಂಡಕ್ಕೆ ತೆಗೆದುಕೊಳ್ಳಲು ಪ್ರಮುಖ ಕಾರಣ ನಾಯಕತ್ವ. ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಪಂತ್ಗೆ ಇದೆ. ಅವರು ಹಲವು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ಒತ್ತಡದಲ್ಲಿಯೂ ತಂಡವನ್ನು ಸಮರ್ಥವಾಗಿ ನಡೆಸಬಲ್ಲರು.