ಪಾವಗಡ : ಖಾಸಗಿ ಕಂಪನಿಯ ಒಎಫ್ಸಿ ಕೇಬಲ್ ಅಳವಡಿಕೆಗಾಗಿ ನಡೆಸುತ್ತಿರುವ ಕಾಮಗಾರಿಯಿಂದಾಗಿ ನೀರಿನ ಪೈಪ್ಲೈನ್ ಹಾಳು ಮಾಡಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಖಂಡಿಸಿದ್ದಾರೆ.
ತಾಲೂಕಿನ ಕಡಮಲಕುಂಟೆ ಗಡಿಯಲ್ಲಿ ಹಾಗೂ ಬಳ್ಳಾರಿ ರಸ್ತೆಯ ಆಂಧ್ರ್ರದ ಕಂಬದೂರಿನಿAದ ಕರ್ನಾಟಕ ಗಡಿಯ ದೊಡ್ಡಹಳ್ಳಿ ಗ್ರಾಮದವರೆಗೂ ಕಾಮಗಾರಿ ನಡೆಸುತ್ತಿದ್ದಾರೆ. ಸ್ಥಳೀಯ ಪಿಡಬ್ಲೂಡಿ ಇಲಾಖೆಯ ಅನುಮತಿ ಪಡೆಯದೆ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಅಕ್ರಮವಾಗಿ ಕಾಮಗಾರಿಯನ್ನು ಜೆಸಿಬಿಗಳಿಂದ ನಡೆಸುತ್ತಿದ್ದಾರೆ.
ಇದನ್ನು ತಡೆಯಲು ಪಿಡಬ್ಲೂö್ಯಡಿ ಇಲಾಖೆಯ ಎಇಇ ಅನಿಲ್ಕುಮಾರ್ ಪಟ್ಟಣದ ಪೋಲಿಸ್ ಠಾಣೆ ಹಾಗೂ ವೈ.ಎನ್.ಹೊಸಕೋಟೆ ಪೋಲಿಸ್ ಠಾಣೆಯಲ್ಲಿ ಗುತ್ತಿಗೆದಾರರ ವಿರುದ್ದ ತಕ್ಷಣ ಕ್ರಮ ಕೈಗೊಂಡು ಕಾಮಗಾರಿ ನಿಲ್ಲಿಸುವಂತೆ ದೂರು ನೀಡಿದ್ದಾರೆ. ಆದರೂ ಇದುವರೆಗೂ ಕ್ರಮ ಜರುಗಿಸಿಲ್ಲ ಎಂದರೆ ಅವರು ಎಷ್ಟು ಬಲಿಷ್ಟರಾಗಿರಬಹುದೆಂದು ಮೇಲಧಿಕಾರಿಗಳು ಗಮನಿಸಬೇಕಾಗಿದೆ ಎಂದು ರೈತ ಸಂಘದವರು ಆಗ್ರಹಿಸಿದ್ದಾರೆ.
ಪಾವಗಡ ತಾಲ್ಲೂಕು ಅತಿ ಹಿಂದುಳಿದಿದ್ದು, ಶಾಸಕರು ಶ್ರಮವಹಿಸಿ ಸಾವಿರಾರು ಕೋಟಿ ಅನುದಾನ ತಂದು ರಸ್ತೆ ಅಭಿವೃದ್ಧಿ ಪಡಿಸಿದ್ದರು. ಖಾಸಗಿ ಕಂಪನಿÂಯವರು ರಸ್ತೆ ಅಗೆದು ಹಾಳು ಮಾಡುತ್ತಿದ್ದಾರೆ. ಇಂತಹ ಅವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಿ ತಕ್ಷಣವೆ ಸರ್ಕಾರಕ್ಕೆ ಆಗಿರುವ ನಷ್ಟದ ಹಣವನ್ನು ಕಟ್ಟಿಸಿಕೊಳ್ಳಬೇಕು. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ರಮೇಶ್ ಮಾತನಾಡಿ, ಪೆನುಗೊಂಡ ರಸ್ತೆ ರಾಜ್ಯ ಹೆದ್ದಾರಿ ಆಗಿದ್ದು, ಇದರ ಪಕ್ಕದಲ್ಲಿ ಖಾಸಗಿ ಕಂಪನಿಯವರು ಕೇಬಲ್ ಅಳಡಿಸುತ್ತಿದ್ದಾರೆ. ಇದರ ಪಕ್ಕದಲ್ಲಿ ಶುದ್ದ ಕುಡಿಯುವ ನೀರಿನ ದೊಡ್ಡ ಪೈಪ್ ಲೈನ್ ಅಳವಡಿಸಿದೆ. ಇದರ ಪಕ್ಕದಲ್ಲಿ ಖಾಸಗಿ ಕಂಪನಿಯವರು ಅಧಿಕಾರಿಗಳ ಮೇಲೆ ದರ್ಪ ತೋರಿಸಿ, ಅವರ ಮಾತಿಗೆ ಬೆಲೆ ಕೊಡದೆ, ಯಾರೆ ಬರಲಿ ಕಾಮಗಾರಿ ನಿಲ್ಲಿಸಲ್ಲ ಎಂದು ದೌರ್ಜನ್ಯದಿಂದ ಜೆಸಿಬಿ ಯಂತ್ರಗಳಿAದ ಕಾಮಗಾರಿ ನಡೆಸುತ್ತಿದ್ದಾರೆ.
ಇವರಿಗೆ ಯಾರು ಅನುಮತಿ ನೀಡಿದ್ದಾರೆ? ರಸ್ತೆ ಬಿಟ್ಟು ಎಷ್ಟು ದೂರ ಕಾಮಗಾರಿ ಮಾಡಬೇಕೆಂದು ಅಧಿಕಾರಿಗಳಿಂದ ಮಾಹಿತಿ ಪಡೆದು ಕೆಲಸ ಪ್ರಾರಂಭಿಸಬೇಕಾಗಿತ್ತು. ಇದನ್ನು ಗಾಳಿಗೆ ತೂರಿ ಇಷ್ಟ ಬಂದAತೆ ರಸ್ತೆಗಳನ್ನು ಅಗೆದು ಹಾಳು ಮಾಡಿದ್ದಾರೆ. ಇವರ ಮೇಲೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.
ತಾಲ್ಲೂಕು ರೈತ ಸಂಘದ ಸಂಘಟನ ಕಾರ್ಯದರ್ಶಿ ತಾಳೆಮರದಹಳ್ಳಿ ಗೋವಿಂದಪ್ಪ ಮಾತನಾಡಿ, ಇವರಿಗೆ ರಸ್ತೆ ಬಿಟ್ಟು ಎಷ್ಟು ದೂರ ಟ್ರೆಂಚು ಹೊಡೆಯಬೇಕೆಂದು ಅನುಮತಿ ಪತ್ರದಲ್ಲಿ ಇರುತ್ತದೆ. ಇದನ್ನು ಬಿಟ್ಟು ಕಾನೂನಿಗೆ ವಿರುದ್ದವಾಗಿ ನಡೆದುಕೊಂಡಿದ್ದರೆ ಅವರ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಬ್ಯಾಡನೂರು ಶಿವು, ಸದಸ್ಯರಾದ ಸಿದ್ದಪ್ಪ, ರಾಮಾಂಜಿನಪ್ಪ, ಶ್ರೀನಿವಾಸ್, ಸುಬ್ಬರಾಯ, ರಮೇಶ್, ರಾಜು ಇದ್ದ