ಈ ಲಕ್ಷಣಗಳಿದ್ದವರು ಅಪ್ಪಿತಪ್ಪಿಯೂ ಎಳನೀರು ಮುಟ್ಟಲೇಬಾರದು

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಉತ್ತಮ ಆರೋಗ್ಯಕ್ಕಾಗಿ ಎಳನೀರು ಒಳ್ಳೆಯದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರು ಎಳನೀರನ್ನು ಕುಡಿಯಬಾರದು.

ಹೌದು,  ಮನುಷ್ಯನಲ್ಲಿ ಒಳ್ಳೆಯದ್ದು, ಕೆಟ್ಟದ್ದು ಹೇಗೆ ಎರಡು ಆಯಾಮಗಳು ಇರುತ್ತದೆಯೋ ಅದೇ ರೀತಿ ಎಳನೀರಿನಲ್ಲಿಯೂ ಸಹ ಒಳ್ಳೆಯ ಅಂಶಗಳಿರುವಂತೆ ಕೆಟ್ಟ ಅಂಶಗಳೂ ಇವೆ. ಹಾಗಾಗಿ ಆರೋಗ್ಯ  ತಜ್ಞರ ಪ್ರಕಾರ ಕೆಲವು ಆರೋಗ್ಯ ಸಮಸ್ಯೆ ಇರುವವರು ಎಳನೀರನ್ನು ಸೇವಿಸಬಾರದು. ಒಂದು ವೇಳೆ ಸೇವಿಸಿದ್ದೇ ಆದಲ್ಲಿ. ಆರೋಗ್ಯ ಸಮಸ್ಯೆ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಳ್ಳುತ್ತದೆ.

ಒಂದು ನಾಣ್ಯಕ್ಕೆ ಎರಡು ಮುಖಗಳಿರುವಂತೆ ಎಳನೀರಿಗೂ ಎರಡು ಮುಖಗಳಿವೆ. ಕೆಲವು ಆರೋಗ್ಯ ಸಮಸ್ಯೆಯಿರುವವರು ಉತ್ತಮ ಆರೋಗ್ಯಕ್ಕಾಗಿ ಎಳನೀರು ಸೇವಿಸಬೇಕು. ಆದರೆ, ಕೆಲವು ಸಮಸ್ಯೆಯಿರುವವರು ಎಳನೀರನ್ನು ಸೇವಿಸಲೇಬಾರದು. ಹಾಗಾದರೆ ಯಾರೆಲ್ಲಾ? ಯಾವಾಗ? ಯಾವ ಸಂದರ್ಭದಲ್ಲಿ ಎಳನೀರು ಸೇವಿಸಬಾರದು ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್

ಇವರು ಎಳನೀರು ಮುಟ್ಟಲೇಬಾರದು:

ಮನುಷ್ಯರಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಲರ್ಜಿ ಕಾಡುತ್ತದೆ. ಕೆಲವರಿಗೆ ಮರದ ಅಲರ್ಜಿ ಸಮಸ್ಯೆ ಕಾಡುತ್ತದೆ. ಹಾಗಾಗಿ ಎಳನೀರು ಸಹ ಮರದಿಂದಲೇ ಸಿಗುವ ಕಾರಣ ಇಂತಹ ಅಲರ್ಜಿ ಇರುವವರು ಅಪ್ಪಿತಪ್ಪಿಯೂ ಎಳನೀರು ಕುಡಿಯಬಾರದು.

ಎಲೆಕ್ಟ್ರೋಲೈಟ್:

ಎಳನೀರಿನಲ್ಲಿರುವ ಪೊಟ್ಯಾಸಿಯಮ್ ಅಂಶವೂ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ, ಅತಿಯಾಗಿ ಎಳನೀರಿನ ಸೇವನೆಯನ್ನು ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ.

ಮಧುಮೇಹಿಗಳಿಗೆ ಎಳನೀರು ಒಳ್ಳೆಯದಲ್ಲ:

ಇಡೀ ಜಗತ್ತಿನಲ್ಲಿ ಮಾನವ ಒಂದಲ್ಲ ಒಂದು ರೀತಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಹಾಗಾಗಿ ಮಧುಮೇಹಿಗಳಿಗೆ ಎಳನೀರು ಒಳ್ಳೆಯದಲ್ಲ. ಅದರಲ್ಲೂ ಹೈ ಶುಗರ್ ಸಮಸ್ಯೆ ಹೊಂದಿದ್ದರೆ ಯಾವುದೇ ಕಾರಣಕ್ಕೂ ಎಳನೀರನ್ನು ಸೇವಿಸಲೇಬಾರದು. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಮೂತ್ರಪಿಂಡದ ಕಾಯಿಲೆ/ ಪಾರ್ಶ್ವವಾಯು:

ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಎಳನೀರು ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಅಲ್ಲದೆ, ಎಳನೀರನ್ನು ಅತಿಯಾಗಿ ಸೇವಿಸುವುದರಿಂದ ವಯಸ್ಸಾದ ರೋಗಿಯಲ್ಲಿ ತೀವ್ರವಾದ ಮಂದವಾದ ಪಾರ್ಶ್ವವಾಯು ಉಂಟಾಗುತ್ತದೆ ಎಂದು ವರದಿಯೊಂದರಿಂದ ಬಹಿರಂಗಗೊಂಡಿದೆ.

Leave a Reply

Your email address will not be published. Required fields are marked *