ಚನ್ನಬಸವ. ಎಂ, ಕಿಟ್ಟದಾಳ್
ರೈತರಲ್ಲಿ ಆನೇಕ ಪದ್ದತಿಗಳು ಜಾರಿಯಲ್ಲಿವೆ. ಆದರಲ್ಲಿ ಓಮದಾದ ಪದ್ದತಿ ಎಂದರೆ ಬೆಳೆದ ಬೆಳೆಗಳಿಗೆ ದೃಷ್ಟಿ ತಾಗದಿರಲು ಹೊಲದಲ್ಲಿ ಬೆದರು ಬೊಂಬೆ, ಮಡಿಕೆ, ದೃಷ್ಠಿ ಗೊಂಬೆಗಳನ್ನು ಇಡುವುದು ರೈತರಲ್ಲಿ ಅಂದಿನ ಕಾಲದಿಂದಲು ಇರುವ ಸಂಪ್ರದಾಯ.. ಆದರೆ ಇಲ್ಲೊಂದು ಹೊಲದಲ್ಲಿ ಬೆಳೆಗೆ ದೃಷ್ಠಿತಾಗದಿರಲೆಂದು ಚಿತ್ರ ನಟಿಯರ ಫೋಟೋಗಳನ್ನು ಹಾಕಿರುವುದು ಬೆಳಕಿಗೆ ಬಂದಿದೆ. ಹಿಂದಿನ ಕಾಲದ ರೈತರ ಪದ್ದತಿಗಳಿಗೆ ಒಂದು ಕಾರಣ ಇರುತ್ತಿತ್ತು. ವೈಜ್ಞಾನಿಕವಾಗಿಯೂ ಚಿಂತಿಸುವ ಶಕ್ತಿಯನ್ನು ಹೊಂದಿದ್ದರು. ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿಯೂ ಹೊಲದಲ್ಲಿ ಬೆದರು ಬೊಂಬೆಗಳನ್ನು ಇಡುವ ಪದ್ದತಿ ಜಾರಿಯಲ್ಲಿತ್ತು.
ಆದರೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಓರ್ವ ರೈತ ತನ್ನ ಬೆಳೆಗೆ ದೃಷ್ಟಿ ತಾಗಬಾರದೆಂದು ವಿನೂತನ ದಾರಿ ಕಂಡುಕೊAಡಿದ್ದಾರೆ. ಕಲ್ಮೇಶ್ ಹಾಗೂ ಶಿವಕುಮಾರ ಹಂಚಿನಾಳ ರೈತ ಸಹೋದರರು ತಮ್ಮ ಹೊಲದಲ್ಲಿ ಬೆಳೆದಿರುವ ಎಲೆಕೋಸು ಬೆಳೆಗೆ ದೃಷ್ಟಿ ತಾಗದಿರಲೆಂದು ಗೊಂಬೆ ಬದಲಿಗೆ ಚಿತ್ರನಟಿಯರಾದ ರಚಿತಾ ರಾಮ್, ರಶ್ಮಿಕಾ, ಶ್ರೀಲೀಲಾ, ರೀಷ್ಮಾ ಭಾವಚಿತ್ರ ನೇತು ಹಾಕಿದ್ದಾರೆ. ಸಹೋದರರು ಹಿಂದೆ ಇದೇ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಚೆನ್ನಾಗಿ ಬೆಳೆದ ಕಲ್ಲಂಗಡಿಗೆ ಜನರ ದೃಷ್ಟಿ ಬಿದ್ದು ಮುಂದೆ ಸರಿಯಾಗಿ ಬೆಳೆಯದೆ ಲಾಸ್ ಆಗಿತ್ತು. ಹೀಗಾಗಿ, ಇದೀಗ ಜನರ ವಕ್ರ ದೃಷ್ಟಿ ತಪ್ಪಿಸಲು ರೈತರ ಸಹೋದರರು ಚಿತ್ರ ನಟಿಯರು ಕಟೌಟ್ ಹಾಕಿದ್ದಾರೆ.
ಹಾದಿಯಲ್ಲಿ ಹೋಗುವ ಜನರ ದೃಷ್ಠಿ ಹೊಲದ ಮೇಲಲ್ಲದೆ ಹೊಲದಲ್ಲಿ ಹಾಕಿರುವ ಚಿತ್ರ ನಟಿಯರ ಛಾಯಚಿತ್ರಗಳ ಮೇಲೆ ತಾಗುತ್ತಿದೆ. ಇದೊಂದು ರೀತಿಯ ವಿನೂತನ ವಾದ ದಾರಿ. ಬೆದರು ಬೊಂಬೆ, ಸುಣ್ಣ ಬಳಿದ ಮಡಿಕೆಗಳನ್ನು ಇಡುವ ಆನುಯಾಯಿತಿ ಇದ್ದರು. 2025ರಲ್ಲಿ ಈ ಪದ್ದತಿ ಬದಲಾಗಿದೆ. ಯುವ ರೈತರು ತಮ್ಮ ಯೋಚನೆಯನ್ನು ಬದಲಾಯಿಸಿ ಆಧುನಿಕರಣದತ್ತ ಚಿಂತನೆಯನ್ನು ನಡೆಸುತಿದ್ದಾರೆ. ಹಳೆಯ ಪದ್ದತಿಗಳನ್ನೆ ಮುಂದುವರಿಸ ಬೇಕು ಎಂದೇನಿಲ್ಲ.. ಆದರೆ ಹಿಂದಿನ ರೈತರು ಕಾಡು ಪ್ರಾಣಿಗಳು ಕೂಡ ಹೊಲಕ್ಕೆ ಬಾರದಿರಲಿ ಎಂದು ಸುಣ್ಣ ಬಳಿದ ಮಡಿಕೆ, ಬೆದರು ಬೊಂಬೆಗಳನ್ನು ನಿಲ್ಲಿಸುತಿದ್ದರು. ರಾತ್ರಿ ವೇಳೆ ಕೂಡ ಸುಣ್ಣ ಬಳಿದಮಡಿಕೆಗಳು ಕಣ್ಣಿಗೆ ಗೋಚರಿಸುತಿದ್ದವು, ಆಗ ಕಾಡು ಪ್ರಾಣಿಗಳು ಅವುಗಳನ್ನು ಕಂಡು ಭಯದಿಂದ ಹೊಲಗಳಿಗೆ ಬರುತ್ತಿರಲಿಲ್ಲ. ಚಿತ್ರನಟಿಯರ ಛಾಯಚಿತ್ರಗಳು ಜನರ ದೃಷ್ಟಿ ಬದಲಾಯಿಸಲು ಸರಿಯಾದರೂ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸುವಲ್ಲಿ ವಿಫಲವಾಗುವುದು ಖಚಿತ.