PNB ನೇಮಕಾತಿ: 2,700 ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ

ಬೆಂಗಳೂರು: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿ (ಪಿಎನ್​ಬಿ) ಖಾಲಿ ಇರುವ ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷದ ತರಬೇತಿ ಹುದ್ದೆ ಇದಾಗಿದೆ. ಗ್ರಾಮೀಣ, ನಗರ ಮತ್ತು ಮೆಟ್ರೋ ನಗರಿಗಳಲ್ಲಿ ನೇಮಕಾತಿ ನಡೆಯುತ್ತದೆ. ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ಪಿಎನ್​ಬಿಯಿಂದ 2,700 ಅಪ್ರೆಂಟಿಸ್​ ಹುದ್ದೆಗಳನ್ನು ದೇಶಾದ್ಯಂತ ಭರ್ತಿ ಮಾಡಲಾಗುತ್ತಿದೆ. ಇದರನುಸಾರ ಕರ್ನಾಟಕದಲ್ಲಿ 32 ಹುದ್ದೆಗಳನ್ನು ನಿಗದಿ ಮಾಡಲಾಗಿದೆ.

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ವೇತನ: ಆಯ್ಕೆಯಾದ ಗ್ರಾಮೀಣ/ಅರೆ ನಗರದ ಅಭ್ಯರ್ಥಿಗಳಿಗೆ ಮಾಸಿಕ 10 ಸಾವಿರ ರೂ, ನಗರ ಪ್ರದೇಶದ ಅಭ್ಯರ್ಥಿಗಳಿಗೆ 12 ಸಾವಿರ ರೂ ಮತ್ತು ಮೆಟ್ರೋ ಅಭ್ಯರ್ಥಿಗಳಿಗೆ 15 ಸಾವಿರ ರೂ ನಿಗದಿಪಡಿಸಲಾಗಿದೆ. ಇದರ ಹೊರತಾಗಿ ಬ್ಯಾಂಕಿನ ಯಾವುದೇ ಭತ್ಯೆಗಳಿಗೆ ಇವರು ಅರ್ಹರಾಗಿರುವುದಿಲ್ಲ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಜೂನ್​ 30ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜುಲೈ 14 ಕಡೇಯ ದಿನ. ಜುಲೈ 28ರಂದು ಪರೀಕ್ಷೆ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗೆ pnbindia.in ಇಲ್ಲಿಗೆ ಭೇಟಿ ನೀಡಿ

Leave a Reply

Your email address will not be published. Required fields are marked *