ಬೆಂಗಳೂರು: ನಾಲ್ಕು ಕೋಟಿ ಬೆಲೆ ಬಾಳುವಂತಹ ಮನೆಯನ್ನು ಕೇವಲ ಅರವತ್ತು ಲಕ್ಷಕ್ಕೆ ನಮ್ಮ ಸಂಬಂಧಿಕರಿಗೆ ಕೊಡಬೇಕು ಎಂದು ಇನ್ಸ್ಪೆಕ್ಟರ್ ಕಿರುಕುಳ ಕೊಟ್ಟ ಆರೋಪ ಬೆಂಗಳೂರಿನಲ್ಲಿ ಕೇಳಿ ಬಂದಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಹೌದು 4 ಕೋಟಿ ಬೆಲೆ ಬಾಳುವ ಬಂಗಲೆಯನ್ನು ಕೇವಲ 60 ಲಕ್ಷಕ್ಕೆ ಸಂಬಂಧಿಕರೊಬ್ಬರಿಗೆ ಮಾರುವಂತೆ ಇನ್ಸ್ಪೆಕ್ಟರ್ ಗುತ್ತಿಗೆದಾರರೊಬ್ಬರಿಗೆ ಕಿರುಕುಳ ನೀಡಿದ್ದಾರೆ. ಹೀಗಾಗಿ ಇನ್ಸ್ಪೆಕ್ಟರ್, ಇಬ್ಬರು ಕಾನ್ಸ್ಟೇಬಲ್ ಸೇರಿ ಒಟ್ಟು ಏಳು ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಎ1 ಇನ್ಸ್ಪೆಕ್ಟರ್ ಕುಮಾರ್, ಎ2 ಪೇದೆ ಉಮೇಶ್, ಎ5 ಠಾಣೆ ಸಿಬ್ಬಂದಿ ಆನಂತ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಕಲಂ 7ಎ ಅಡಿ ಎಫ್ಐಆರ್ ದಾಖಲು ಮಾಡಲಾಗಿದೆ.
ಗುತ್ತಿಗೆದಾರ ಚನ್ನೇಗೌಡ ಎಂಬುವವರು ದೂರು ದಾಖಲು ಮಾಡಿದ್ದಾರೆ. ಆರೋಪ ಸಾಬೀತಾದರೆ ಏಳು ವರ್ಷ ಜೈಲು ಶಿಕ್ಷೆ ಮತ್ತು ದಂಡ ಒಳಗೊಂಡಿರುವ ಕಲಂ ಅಡಿ ಕೇಸ್ ದಾಖಲು ಮಾಡಲಾಗಿದೆ. ದೂರಿನಲ್ಲಿ ಸಂಬಂಧಿಯೊಬ್ಬರಿಗೆ ಕಡಿಮೆ ಬೆಲೆಗೆ ಮನೆ ಕೊಡಿಸಲು ಗುತ್ತಿಗೆದಾರ ಚನ್ನೇಗೌಡ ಅವರ ಮೇಲೆ ಒತ್ತಡ ಹೇರಲಾಗಿದೆ. ಕಳೆದ ವಾರ ಅನ್ನಪೂರ್ಣೇಶ್ವರಿ ಠಾಣೆಯ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದರು. ನಂತರ ಈ ಕುರಿತು ಚನ್ನೇಗೌಡ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸಂಬಂಧಿಯೊಬ್ಬರಿಗೆ ಕಡಿಮೆ ಬೆಲೆಯಲ್ಲಿ ಮನೆ ಕೊಡಿಸಲು ಗುತ್ತಿಗೆದಾರ ಚನ್ನೇಗೌಡ ಅವರ ಮೇಲೆ ಈ ಪೊಲೀಸ್ ಗ್ಯಾಂಗ್ ಒತ್ತಡ ಹಾಕಿತ್ತು. ಇಲ್ಲಿ ವಿಶೇಷ ಅಂದರೆ ಎ1 ಆರೋಪಿ ಇನ್ಸ್ಪೆಕ್ಟರ್ ಕುಮಾರ್ ಮುಖ್ಯಮಂತ್ರಿಗಳ ಚಿನ್ನದಪದಕಕ್ಕೆ ಆಯ್ಕೆ ಆಗಿದ್ದರು. ಮೇಲ್ನೋಟಕ್ಕೆ ದಕ್ಷ ಅಧಿಕಾರಿಯಾಗಿದ್ದರೂ ಕೂಡ ಒಳಗಿಂದೊಳಗೆ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ದುಡ್ಡಿಗಾಗಿ ಕೂಡ ಇವರು ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದೀಗ ದೂರ ದಾಖಲಾಗಿದ್ದು ಇವರನ್ನು ಸಸ್ಪೆಂಡ್ ಮಾಡ್ತಾರಾ ಅಥವಾ ವಿಚಾರಣೆ ನಡೆಸುತ್ತಾರಾ ಮುಂದಿನ ಕ್ರಮ ಏನು ಎಂದು ಕಾದು ನೋಡಬೇಕಿದೆ. ಈ ಘಟನೆ ನಡೆದು ಏಳೆಂಟು ದಿನ ಕಳೆದ ಬಳಿಕ ಈಗ ಎಫ್ಐಆರ್ ದಾಖಲು ಮಾಡಲಾಗಿದೆ. ಜೊತೆಗೆ ಠಾಣೆಯ ಮೇಲೆ ಲೋಕಾಯುಕ್ತರು ದಾಳಿ ಮಾಡಿದಾಗ ಸುಮಾರು ದಾಖಲೆಗಳನ್ನು ಸೀಜ್ ಮಾಡಿದ್ದಾರೆ. ಇದರಿಂದ ಮಾಹಿತಿ ಕಲೆ ಹಾಕುವ ಸಾಧ್ಯತೆ ಕೂಡ ಇದೆ.