ಬೆಂಗಳೂರು : ಬಿಜೆಪಿಯ ‘ಕಾಂಗ್ರೆಸ್ ಕೆ ಹಾಥ್ – ಪಾಕಿಸ್ತಾನ್ ಕೆ ಸಾಥ್’ ಎಂಬ ಟೀಕೆಯನ್ನು ಬಿಕೆ ಹರಿಪ್ರಸಾದ್ ಖಂಡಿಸಿದ್ದಾರೆ.

ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರೋಪಿಸಿ, ಬಿಜೆಪಿ ಸೋಷಿಯಲ್ ಮೀಡಿಯಾ ರಾಜಕಾರಣ ಮತ್ತು ಸ್ಲೋಗನ್ಗಳ ಮೂಲಕ ವಾತಾವರಣ ಹಾಳುಗೆಡವುತ್ತಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಉಗ್ರ ದಾಳಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಘೋಷಣಾ ವೀರರು, ಫ್ಲೋಗನ್ಗಳೇ ಅವರ ಗೊಬ್ಬರ ಮತ್ತು ಊಟ ಎಂದು ವ್ಯಂಗ್ಯವಾಡಿದ ಹರಿಪ್ರಸಾದ್, ಕೇಂದ್ರ ಸರ್ಕಾರದ ನಡವಳಿಕೆಯನ್ನು ಪ್ರಶ್ನಿಸಿದರು.
ಭಾರತೀಯರ ಮೇಲಿನ ಉಗ್ರ ದಾಳಿಗಳ ವಿರುದ್ಧ ಕಾಂಗ್ರೆಸ್ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದೆ. ಆದರೆ ಕೇಂದ್ರದ ನಾಯಕರು ಸಾಂತ್ವನ ಹೇಳಲು ಹೋಗದಿರುವುದು, ಸರ್ವಪಕ್ಷ ಸಭೆಗಳಿಂದ ಮೋದಿ ತಪ್ಪಿಸಿಕೊಳ್ಳುವುದು ಏಕೆ? ತುರ್ತು ಸಂಸತ್ ಅಧಿವೇಶನ ಏಕೆ ಕರೆದಿಲ್ಲ ಎಂದು ಪ್ರಶ್ನಿಸಿದರು.