ಮತ್ತೆ ಐಟಂ ಸಾಂಗ್‌ ಗೆ ಸೈ ಎಂದ ಪೂಜಾ ಹೆಗ್ಡೆ…..!

ಮುಂಬೈ : ಬಾಲಿವುಡ್ ಬ್ಯೂಟಿ ಪೂಜಾ ಹೆಗ್ಡೆ ಸೌತ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ದಿಢೀರ್ ಕ್ರೇಜ್ ಸಂಪಾದಿಸಿಕೊಂಡ ಪೂಜಾ ಅಷ್ಟೇ ಬೇಗ ಕಳೆದುಕೊಂಡುಬಿಟ್ಟರು. ಸದ್ಯ ದೊಡ್ಡ ಅವಕಾಶಗಳು ಆಕೆಕಯ ಕೈಯಲ್ಲಿ ಇಲ್ಲ. ಇಂತಹ ಸಮಯದಲ್ಲೇ ಮತ್ತೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಾರೆ ಎನ್ನಲಾಗ್ತಿದೆ.

ಮುಂಬೈ ಬೆಡಗಿ ಪೂಜಾ ಹೆಗ್ಡೆ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದಾರೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಐರೆನ್ ಲೆಗ್ ಎನಿಸಿಕೊಂಡಿದ್ದ ಚೆಲುವೆ ಬಳಿಕ ಒಂದಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಎಲ್ಲಾ ಸರಿ ಹೋಯಿತು ಎಂದುಕೊಳ್ಳವಾಗಲೇ ಮತ್ತೆ ಅವಕಾಶ ಬರ ಎದುರಾಯುತು.

ಸದ್ಯ ಬಾಲಿವುಡ್‌ನಲ್ಲಿ ‘ದೇವ’ ಎನ್ನುವ ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ. ಶಾಹಿದ್ ಕಪೂರ್ ಚಿತ್ರದಲ್ಲಿ ಹೀರೊ ಆಗಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಸೌತ್‌ನಲ್ಲಿ ಯಾವುದೇ ಸಿನಿಮಾ ಆಕೆಗೆ ಸಿಕ್ಕಿಲ್ಲ. ಆಕೆಯ ಹವಾ ಕಮ್ಮಿ ಆಗಿದೆ ಎಂದೇ ಟಾಲಿವುಡ್, ಕಾಲಿವುಡ್‌ನಲ್ಲಿ ಚರ್ಚೆ ನಡೀತಿದೆ.

ತೆಲುಗಿನ ‘ದೇವರ’ ಚಿತ್ರದಲ್ಲಿ ಪೂಜಾ ಹೆಗ್ಡೆ ಸ್ಪೆಷಲ್ ಸಾಂಗ್ ಹೆಜ್ಜೆ ಹಾಕುವ ಬಗ್ಗೆ ಚರ್ಚೆ ನಡೀತಿದೆ. ಜ್ಯೂ. ಎನ್‌ಟಿಆರ್ ನಟನೆಯ ಈ ಚಿತ್ರಕ್ಕೆ ಕೊರಟಾಲ ಶೀವ ಆಕ್ಷನ್ ಕಟ್ ಹೇಳುತ್ತಿದ್ದಾರೆ. 2 ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ. ಅಕ್ಟೋಬರ್ 10ಕ್ಕೆ ಮೊದಲ ಭಾಗ ರಿಲೀಸ್ ಆಗಲಿದೆ.

‘ರಂಗಸ್ಥಳಂ’ ಚಿತ್ರದಲ್ಲಿ ಈಗಾಗಲೇ ಪೂಜಾ ಹೆಗ್ಡೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಆಗ ಆಕೆ ಹೀರೊಯಿನ್ ಆಗಿ ಸಕ್ಸಸ್ ಕಂಡಿರಲಿಲ್ಲ. ಬಳಿಕ ಜ್ಯೂ. ಎನ್‌ಟಿಆರ್ ನಟನೆಯ ‘ಅರವಿಂದ ಸಮೇತ’ ಚಿತ್ರದ ಬಳಿಕ ಪೂಜಾ ಕ್ರೇಜ್ ಹೆಚ್ಚಾಗಿತ್ತು. 

jr.NTR ಜೊತೆಗೆ ನಾಯಕಿಯಾಗಿ ನಟಿಸಿದ್ದ ಪೂಜಾ ಈ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕುತ್ತಾರಾ? ಎನ್ನುವ ಅನುಮಾನವೂ ಕೆಲವರಲ್ಲಿದೆ. ಆದರೆ ಚಿತ್ರರಂಗದಲ್ಲಿ ಏನು ಬೇಕಾದರೂ ನಡೆಯುತ್ತದೆ ಎನ್ನುವ ವಾದವನ್ನು ಕೆಲವರು ಮುಂದಿಡುತ್ತಿದ್ದಾರೆ.

ಈ ಹಿಂದೆ ತಾರಕ್ ಜೊತೆ ನಾಯಕಿಯಾಗಿ ನಟಿಸಿದ್ದ ಕಾಜಲ್ ಬಳಿಕ ಆತನ ಸಿನಿಮಾದಲ್ಲೇ ಐಟಂ ಸಾಂಗ್‌ಗೆ ಕುಣಿದಿದ್ದರು. ಸದ್ಯ ‘ದೇವರ’ ಚಿತ್ರದ ಸ್ಪೆಷಲ್ ಸಾಂಗ್‌ಗೆ ಕಾಜಲ್ ಅಗರ್‌ವಾಲ್ ಹೆಸರು ಕೂಡ ಕೇಳಿಬರ್ತಿದೆ. ಆದರೆ ಪೂಜಾ ಹೆಗ್ಡೆಗೆ ಆ ಅವಕಾಶ ಸಿಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ.

‘ಅಲಾ ವೈಕುಂಠಪುರಂಲೊ’ ಸಿನಿಮಾ ಬಳಿಕ ಪೂಜಾ ನಟಿಸಿದ ‘ಆಚಾರ್ಯ’, ‘ರಾಧೆಶ್ಯಾಮ್’, ‘ಬೀಸ್ಟ್’ ಸಿನಿಮಾಗಳು ಸೋತು ಸುಣ್ಣವಾದವು. ಕಳೆದ ವರ್ಷ ಸಲ್ಮಾನ್ ಖಾನ್ ಜೊತೆ ನಟಿಸಿದ್ದ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಕೂಡ ಸದ್ದು ಮಾಡಲಿಲ್ಲ. ಹಾಗಾಗಿ ಪೂಜಾಗೆ ಅವಕಾಶಗಳು ಕಮ್ಮಿ ಆಗಿದೆ.

Leave a Reply

Your email address will not be published. Required fields are marked *