ಬೆಂಗಳೂರಿಗರಿಗೆ ದರ ಏರಿಕೆ ಬಿಸಿ : Hosur Road ಎರಡು toll ದರ ಏರಿಕೆ..!

Toll Price Hike

ಬೆಂಗಳೂರು: ದರ ಏರಿಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಇಂದಿನಿಂದ ಬೆಂಗಳೂರಿನ ಮತ್ತೆರೆಡು ಪ್ರಮುಖ ಟೋಲ್ ದರ (Toll Price) ಏರಿಕೆಯಾಗಿದೆ.

ಬೆಂಗಳೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆಯ (Hosur Road) ಎರಡು ಟೋಲ್ಗಳಲ್ಲೂ ದರ ಏರಿಕೆಯಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಯಾಗಿದೆ.

ಇಂದಿನಿಂದ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಟೋಲ್ವೇ ಶುಲ್ಕ ಹೆಚ್ಚಳವಾಗಿದೆ. ಪರಿಣಾಮ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಎಲೆಕ್ಟ್ರಾನಿಕ್ ಸಿಟಿಗೆ ಮತ್ತು ಕರ್ನಾಟಕ, ತಮಿಳುನಾಡು ಗಡಿಯ ಬಳಿಯ ಅತ್ತಿಬೆಲೆ ಕಡೆಯ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರು ಎಲಿವೇಟೆಡ್ ರಸ್ತೆಗೆ ಹೆಚ್ಚಿನ ಟೋಲ್ ಶುಲ್ಕವನ್ನು ಪಾವತಿಸಬೇಕಾಗಿದೆ. ಈ ಕುರಿತ ಪರಿಷ್ಕೃತ ದರಗಳನ್ನ ಮಾರ್ಚ್ 31ರ ಸಗಟು ಬೆಲೆ ಸೂಚ್ಯಂಕ ಆಧರಿಸಿ ದರ ಏರಿಕೆ ಮಾಡಲಾಗಿದೆ

ಎಲಿವೇಟೆಡ್ ಎಕ್ಸ್ಪ್ರೆಸ್ ವೇ ಹೊಸ ಟೋಲ್ ರಚನೆಯಡಿಯಲ್ಲಿ, ಕಾರುಗಳು, ಜೀಪ್ಗಳು ಮತ್ತು ವ್ಯಾನ್ಗಳಿಗೆ ಏಕಮುಖ ಪ್ರಯಾಣಕ್ಕೆ 65 ರೂ. ಇದೆ. ವಾಪಸ್ ಹಿಂತಿರುಗಿ ಬರಲು ಅದೇ ದಿನಕ್ಕೆ 95 ರೂ. ಮತ್ತು ಮಾಸಿಕ ಪಾಸ್ಗೆ 1,885 ರೂ. ಪಾವತಿಸಬೇಕಾಗುತ್ತದೆ. ಈ ಹಿಂದೆ ಈ ಎಲ್ಲಾದಕ್ಕೂ 5 ರೂ. ಕಡಿಮೆ ಇತ್ತು. ಈಗ ಬಿಇಟಿಪಿಎಲ್ನಿಂದ 5 ರೂ. ಏರಿಕೆ ಮಾಡಿದ್ದು, ದರ ಜಾರಿಯಾಗಿದೆ. ಆದರೆ ಬಸ್ಗಳು ಮತ್ತು ಟ್ರಕ್ಗಳಿಗೆ ಶುಲ್ಕ ಭಾರೀ ಹೆಚ್ಚಳವಾಗಿದೆ. ಒಂದೇ ಪ್ರಯಾಣಕ್ಕೆ 175 ರೂ. ಮತ್ತು ಮಾಸಿಕ ಪಾಸ್ಗೆ 5,275 ರೂ.ಗೆ ಶುಲ್ಕ ಏರಿಕೆಯಾಗಿದೆ. ಮಲ್ಟಿ-ಆಕ್ಸಲ್ ವಾಹನಗಳಿಗೆ ಪ್ರತಿ ಟ್ರಿಪ್ಗೆ 350 ರೂ. ಮತ್ತು ತಿಂಗಳಿಗೆ 10,550 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಇನ್ನೂ ಅತ್ತಿಬೆಲೆ ಟೋಲ್ನಲ್ಲೂ ದರ ಏರಿಕೆಯಾಗಿದೆ. ಹಳೆಯ ದರಕ್ಕಿಂತ 5 ರೂ. ಹೆಚ್ಚಳವಾಗಿದ್ದು, ಈ ಭಾಗದ ಸವಾರರಿಗೂ ಇಂದಿನಿಂದಲೇ ದರ ಏರಿಕೆ ಬಿಸಿ ತಟ್ಟಲಿದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ದರ ಎಷ್ಟಾಗಲಿದೆ?

*ಕಾರು, ಜೀಪ್, ನಾಲ್ಕು ಚಕ್ರದ ಲಘು ವಾಹನಗಳಿಗೆ ಒಂದು ಪ್ರಯಾಣಕ್ಕೆ ರೂ.65 – ಹಳೆ ಬೆಲೆ 60

*ಎರಡು ಕಡೆಗಿನ ಪ್ರಯಾಣಕ್ಕೆ ರೂಪಾಯಿ 90- ಹಳೆಯ ಬೆಲೆ 85

*ದ್ವಿಚಕ್ರ ವಾಹನಗಳಿಗೆ ಒಂದು ಮಾರ್ಗದ ಪ್ರಯಾಣಕ್ಕೆ ?25 ಪಾವತಿಸಬೇಕಾಗಿದೆ (ಬದಲಾವಣೆ ಇಲ್ಲ)

*ಲಾರಿ (ಟ್ರಕ್) ಹಾಗೂ ಬಸ್ಗಳಿಗೆ ಒಂದು ಬದಿ ಪ್ರಯಾಣಕ್ಕೆ 175 (ಹಳೆ ಬೆಲೆ 170) ರೂಪಾಯಿ

*ಮಲ್ಟಿ-ಆಕ್ಸಲ್ ವಾಹನಗಳಿಗೆ ಒಂದು ಬದಿಗೆ 350 ರೂಪಾಯಿ ಕಟ್ಟಬೇಕಿದೆ (ಹಳೆ ಬೆಲೆ 345)

ಅತ್ತಿಬೆಲೆ ಟೋಲ್ ದರವೂ ಹೆಚ್ಚಳ:

*ಕಾರುಗಳು ಏಕ ಬದಿ ಪ್ರಯಾಣಕ್ಕೆ 40 ರೂ. (ಹಳೆ ಬೆಲೆ 35 ರೂ.)

*ಲಘು ವಾಹನಗಳು, ಮಿನಿ ಬಸ್ 65 ರೂ. (ಹಳೆ ಬೆಲೆ 60 ರೂ.)

*ಟ್ರಕ್, ಬಸ್ 125 ರೂ. (ಹಳೆ ಬೆಲೆ 120 ರೂ.)

*ದೊಡ್ಡ ಮಲ್ಟಿ ಆಕ್ಸೆಲ್ ವಾಹನಗಳಿಗೆ ಒಂದು ಟ್ರಿಪ್ಗೆ 265 ರೂ. ಇದೆ (ಹಳೆ ಬೆಲೆ 260 ರೂ.)

Leave a Reply

Your email address will not be published. Required fields are marked *