ತುಮಕೂರು: ತುಮಕೂರು ನಗರದ ವಿನಾಯಕನಗರದ ನಿವಾಸಿ ಹಾಗೂ ಆದಿರಾಜ್ ಜೈನ್ ಅವರ ಪತ್ನಿ ವಿಜಯಾ ಜೈನ್ ಅವರು ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ನವದೆಹಲಿಯಲ್ಲಿ ನಡೆದ ವೀಜಿ ಮಿಸ್ & ಮಿಸೆಸ್ ಇಂಡಿಯಾ ಎಂಪ್ರೆಸ್ 2025 – ಸೀಸನ್ 6 ಸ್ಪರ್ಧೆಯಲ್ಲಿ ಅವರು ಸೆಕೆಂಡ್ ರನ್ನರ್-ಅಪ್ ಕಿರೀಟವನ್ನು ಗೆದ್ದು ತುಮಕೂರಿಗೆ ಕೀರ್ತಿ ತಂದಿದ್ದಾರೆ.

“ಡ್ರೀಮ್, ಡೇರ್ & ಬಿ ದ ಕ್ವೀನ್” (ಕನಸು ಕಾಣಿರಿ, ಧೈರ್ಯವಿರಲಿ ಮತ್ತು ರಾಣಿ ಆಗಿರಿ) ಎಂಬ ಸ್ಪೂರ್ತಿದಾಯಕ ಥೀಮ್‌ನಡಿ ನಡೆದ ಈ ಭವ್ಯ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗಗಳಿಂದ ಬಂದ ಪ್ರತಿಭಾವಂತ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಅವರ ಮಧ್ಯೆ ವಿಜಯಾ ಜೈನ್ ಅವರು ಮೆರುಗು, ಬುದ್ಧಿವಂತಿಕೆ ಮತ್ತು ಆತ್ಮವಿಶ್ವಾಸದಿಂದ ತೀರ್ಪುಗಾರರ ಮನ ಗೆದ್ದರು. ಸೀರೆ ರೌಂಡ್, ಅಧಿಕೃತ ನೃತ್ಯ ರೌಂಡ್ ಮತ್ತು ಈವಿನಿಂಗ್ ಗೌನ್ ರೌಂಡ್‌ಗಳಲ್ಲಿ ಕಂಗೊಳಿಸಿದ ಅವರು ಅಂತಿಮ ಪ್ರಶ್ನೋತ್ತರ ಸುತ್ತಿನಲ್ಲಿ ತಮ್ಮ ಕರುಣೆ ಹಾಗೂ ಸ್ಪಷ್ಟ ಚಿಂತನೆಯಿಂದ ವಿಭಿನ್ನ ವ್ಯಕ್ತಿತ್ವ ತೋರಿಸಿದರು. ಈ ಸಾಧನೆ ನನ್ನದು ಮಾತ್ರವಲ್ಲ, ಇದು ತುಮಕೂರಿನ ಹೆಮ್ಮೆ. ಇದು ನನ್ನ ಕುಟುಂಬ ಮತ್ತು ಸ್ನೇಹಿತರ ಪ್ರೋತ್ಸಾಹದ ಫಲವಾಗಿದೆ. ಅವರ ನಂಬಿಕೆ ಮತ್ತು ಬೆಂಬಲವೇ ನನ್ನ ಗೆಲುವಿನ ಶಕ್ತಿ. ನಮ್ಮ ನಗರದಲ್ಲಿನ ಪ್ರತಿಯೊಬ್ಬ ಮಹಿಳೆಯೂ ದೊಡ್ಡ ಕನಸು ಕಾಣಬೇಕು, ತನ್ನ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಧೈರ್ಯದಿಂದ ಮುಂದೆ ಬರಬೇಕು.”
For More Updates Join our WhatsApp Group :