ಬೆಂಗಳೂರು: ಬಸವೇಶ್ವರ ನಗರದ ಗಣೇಶ್ ಬೇಕರಿ ಮತ್ತು ಕಾಂಡೀಮೆಂಟ್ಸ್ ಅಂಗಡಿ ಸೇರಿದಂತೆ ಬೆಂಗಳೂರಿನ ವಿವಿಧ ಪ್ರದೇಶಗಳ ಕಾಂಡಿಮೆಂಟ್ಸ್ ಅಂಗಡಿಗಳು ಜುಲೈ 23 ರಂದೇ ಬಂದ್ ಮಾಡಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ವಿರುದ್ಧ ಪ್ರತಿಭಟನೆ ಆರಂಭಿಸಿವೆ. ವಾಣಿಜ್ಯ ತೆರಿಗೆ ಹಾಗೂ ಆನ್ಲೈನ್ ಪಾವತಿಗೆ ಸಂಬಂಧಿಸಿದ ತೆರಿಗೆ ಸಮಸ್ಯೆಗಳಿಂದಾಗಿ ವ್ಯಾಪಾರಿಗಳು ಮೂರು ದಿನಗಳ ಮುಷ್ಕರಕ್ಕೆ ಮುಂದಾಗಿದ್ದಾರೆ.

ಜುಲೈ 25 ರಂದು ಫ್ರೀಡಂ ಪಾರ್ಕ್ನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯಲಿದೆ. ಸಮಸ್ಯೆಗೆ ಪರಿಹಾರ ದೊರೆಯುವವರೆಗೆ ಮುಷ್ಕರ ಮುಂದುವರಿಸುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.