ಬೆಂಗಳೂರು: ಶಿಕ್ಷಣ ಇಲಾಖೆಯ “ಸಾರ್ವಜನಿಕ ಗ್ರಂಥಾಲಯ ಇಲಾಖೆ'” ಅಡಿ ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಗ್ರಂಥ ಪಾಲಕರಾಗಿ 1987-88ರಿಂದ ಕಾರ್ಯ ನಿರ್ವಹಿಸುತ್ತದ್ದೇವೆ.ಕಾರ್ಮಿಕ ಇಲಾಖೆ 2015 ರಲ್ಲಿ ನಮ್ಮನ್ನು ‘ಕನಿಷ್ಟ ವೇತನ” ವ್ಯಾಪ್ತಿಗೆ ತಂದು ಕರಡು ಅಧಿಸೂಚನೆ ಹೊರಡಿಸಿರುತ್ತದೆ. ಮತ್ತು 5-8-2016 ರಲ್ಲಿ 13,200 ರೂ ನಿಗಧಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಿತ್ತು.

“ಕನಿಷ್ಟ ವೇತನ” ನೀಡುವಂತೆ ಇಲಾಖೆಗೆ ಮನವಿ ಸಲ್ಲಿಸಿದಾಗ ಸ್ಪಂದಿಸದ ಕಾರಣ ರಾಜ್ಯದ ಉಚ್ಚನ್ಯಾಯಾಲಯದಲ್ಲಿ W.P.4355/2017’ನ್ನು ಸಲ್ಲಿಸಲಾಗಿತ್ತು. ಈ ನಡುವೆ ಕಾರ್ಮಿಕ ಇಲಾಖೆ ತನ್ನ ಅಧಿಸೂಚನೆಯನ್ನು ವಾಪಸ್ಸು ತೆಗೆದುಕೊಂಡಿದ್ದರಿಂದ ಹಾಗೂ ಗ್ರಂಥಾಲಯ ಇಲಾಖೆ ಕೆಲಸದ ವೇಳೆಯನ್ನು 4 ಗಂಟೆಗೆ ಕಡಿತಗೊಳಿಸಿದ್ದರಿಂದ, ಈ ಎರಡೂ ಆದೇಶಗಳನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯದಲ್ಲಿ W.P.No 22420/2017ನ್ನು ಸಲ್ಲಿಸಲಾಗಿತ್ತು.
ಉಚ್ಚನ್ಯಾಯಾಲಯದಲ್ಲಿ ದಿನಾಂಕ 21-4-2022 ರಂದು ತೀರ್ಪು ನೀಡಿ ಈ ಎರಡೂ ಆದೇಶಗಳನ್ನು ಅನೂರ್ಜಿತಗೊಳಿಸಿದೆ.ಈ ಮಧ್ಯೆ ಗ್ರಂಥಾಲಯ ಇಲಾಖೆ ಮಹಾನಗರ ಪಾಲಿಕೆ, ನಗರ ಪಾಲಿಕೆ, ಪಟ್ಟಣ ಪಂಚಾಯಿತಿ ಕೊಳಚೆ, ಅಲೆಮಾರಿ ಗ್ರಂಥಾಲಯಗಳನ್ನು ಮಾತ್ರ ತನ್ನ ಸುಪರ್ದಿಗೆ ಇಟ್ಟುಕೊಂಡು ಬಾಕಿ 5,766 ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಗೆ ಹಸ್ತಾಂತರಿಸಿದೆ.
ನ್ಯಾಯಾಲಯದ ಆದೇಶದಂತೆ ಹಿಂಪಡೆದ ಹೆಸರನ್ನು ಪುನರ್ ಸೆರ್ಪಡೆಗೊಳಿಸುವಂತೆ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಿದ್ದೆವು. ಇದರಿಂದಾಗಿ ಕಾರ್ಮಿಕ ಇಲಾಖೆ ಸಮಾಲೋಚನೆ ನಡೆಸಿ ಸೆಪ್ಟೆಂಬರ್ 2023’ರಲ್ಲಿ ಅಧಿಸೂಚನೆಯಲ್ಲಿ ನಮ್ಮನ್ನು ಸೇರ್ಪಡೆಗೊಳಿಸಿದೆ.
ಇದರಿಂದಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಸೆಪ್ಟೆಂಬರ್ 2023’ರಲ್ಲಿ ಗ್ರಂಥಾಲಯ ಇಲಾಖೆ ನವೆಂಬರ್ 2023 ರಲ್ಲಿ ”ಕನಿಷ್ಟ ವೇತನ” ಆದೇಶ ಮಾಡಿದೆ. ಆದರೆ ಗ್ರಂಥಾಲಯ ಇಲಾಖೆ ತಮ್ಮ ಇಲಾಖೆಯ ಪತ್ರಕ್ಕೂ ಬೆಲೆ ನೀಡದೆ 5-8-2016ರಲ್ಲಿನ ಅಧಿಸೂಚನೆಯಲ್ಲಿನ ಹೆಸರು ಹೊರತುಪಡಿಸಿ ಗ್ರಂಥಾಲಯ ಸಹಾಯಕರ ‘ಕನಿಷ್ಟ ವೇತನ” ಜಾರಿ ಮಾಡಿದೆ. ಇದರ ಬಗ್ಗೆ ಇಲಾಖೆಗೆ ಮನವಿ ಮಾಡಿ ಸರಿಪಡಿಸುವಂತೆ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ “”ಕನಿಷ್ಟ ವೇತನ’ ಆದೇಶ ಮಾಡಿ F.Dಯಿಂದ 12,000/- ರೂ ನೀಡಿ ಇನ್ನುಳಿದ ಹೆಚ್ಚುವರಿ ಹಣವನ್ನು ಗ್ರಾಮ ಪಂಚಾಯಿತಿಗಳು ವಸೂಲಿ ಮಾಡುವ ಗ್ರಂಥಾಲಯಕರಿಂದ ನೀಡುವಂತೆ ನಿರ್ದೇಶನ ನೀಡಿದೆ. ಸೆಪ್ಟೆಂಬರ್ 2023 ರಿಂದ ಇಲ್ಲಿಯವರೆಗೂ ಒಂದು ವರ್ಷದ ಹೆಚ್ಚುವರಿ ಹಣ ನೀಡಿಲ್ಲ. ಇದನ್ನು ಸರಿಪಡಿಸಿ ಪ್ರತಿ ತಿಂಗಳ 5ನೇ ತಾರೀಖಿನೊಳಗೆ “ಕನಿಷ್ಟ ವೇತನ” ಪೂರ್ತಿ ಹಣ ನೀಡುವಂತೆ ಹಲವಾರು ಬಾರಿ ಪಂಚಾಯಿತಿ ರಾಜ್ ಇಲಾಖೆಗೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಸಮಸ್ಯೆ ಬಗೆಹರಿಸಿಲ್ಲ.
ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಪಾಲಕರನ್ನು ಬೇರೆ ಬೇರೆ ಕೆಲಸಕ್ಕೆ ನಿಯೋಜಿಸುತ್ತಿದ್ದಾರೆ. ರಜೆಗಳನ್ನು ನೀಡದೆ ಕೆಲಸ ನಿರ್ವಹಣೆ ಮಾಡಿಸಿಕೊಳ್ಳುತ್ತಿದ್ದಾರೆ. ರಜಾದಿನಗಳಲ್ಲಿ ಕೆಲಸ ಮಾಡಿಸಿದ ದುಪ್ಪಟ್ಟು ಹಣವನ್ನು ನೀಡುತ್ತಿಲ್ಲ. ಕೆಲವು ಜಿಲ್ಲೆಗಳಲ್ಲಿ ಹೆಚ್ಚುವರಿ ಗಂಟೆ ಕೆಲಸ ಮಾಡಿಸಿ ಕಿರುಕುಳ ನೀಡುತ್ತಿದ್ದಾರೆ. ಕೆಲಸದ ವೇಳೆಯಲ್ಲಿ ಅಕಾಲಿಕ ನಿಧನ ಹೊಂದಿದ ಮೇಲ್ವಿಚಾರಕರಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ. ನಿವೃತ್ತಿ ಹೊಂದಿದ ನೌಕರರಿಗೆ ಗ್ರಾಚ್ಯುಟಿ ನೀಡುತ್ತಿಲ್ಲ. ಒಟ್ಟಿನಲ್ಲಿ ”ಕನಿಷ್ಟ ವೇತನ” ಅಡಿ ಸಿಗುವ ಕಾನೂನು ರೀತ್ಯಾ ಸವಲತ್ತುಗಳು ಸಿಗುತ್ತಿಲ್ಲ. ಇದರಿಂದಾಗಿ ಗ್ರಂಥಾಲಯ ನೌಕರರ ಕುಟುಂಬಗಳು ಬೀದಿಗೆ ಬಿದ್ದಿವೆ ಆದ್ದರಿಂದ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು..