ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯಲ್ಲ: ರಾಕೇಶ್ ಟಿಕಾಯತ್

ನವದೆಹಲಿ: ಕೃಷಿ ಮಸೂದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದರೂ ಕೂಡ ನಾವು ಪ್ರತಿಭಟನೆಯನ್ನು ಹಿಂಪಡೆಯಲ್ಲ ಎಂದು ಭಾರತ್ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಕೃಷಿ ಮಸೂದೆಯನ್ನು ಹಿಂಪಡೆಯುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರೊಂದಿಗೆ ಪ್ರತಿಭಟನೆಯನ್ನು ಕೈ ಬಿಟ್ಟು ಮನೆಗೆ ತೆರಳುವಂತೆ ಮನವಿ ಮಾಡಿದ್ದಾರೆ. ಈ ಮನವಿ ಬಳಿಕ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ರಾಕೇಶ್ ಟಿಕಾಯತ್, ಕೃಷಿ ಮಸೂದೆಯನ್ನು ಸಂಸತ್ತಿನಲ್ಲಿ ಪಾಸ್ ಮಾಡಲಾಗಿತ್ತು. ಇದೀಗ ಸಂಸತ್‍ನಲ್ಲಿ ಮತ್ತೆ ಕೃಷಿ ಮಸೂದೆ ಹಿಂಪಡೆಯುವ ಬಗ್ಗೆ ಬಿಲ್ ಪಾಸ್ ಆದ ಬಳಿಕ ನಾವು ಪ್ರತಿಭಟನಾ ಸ್ಥಳದಿಂದ ತೆರಳುತ್ತೇವೆ ಎಂದು ಹೇಳಿದ್ದಾರೆ

ಇದಲ್ಲದೆ ರೈತರ ಹಲವು ಸಮಸ್ಯೆಗಳು ಬಾಕಿ ಇದೆ. ಕನಿಷ್ಠ ಬೆಂಬಲ ಬೆಲೆ ಬಗ್ಗೆ ನರೇಂದ್ರ ಮೋದಿ ಅವರು ಯಾವುದೇ ಮಾತನಾಡಿಲ್ಲ ಈ ಬಗ್ಗೆ ನಮಗೆ ಸ್ಪಷ್ಟಪಡಿಸಿದ ಬಳಿಕ ಮನೆಗೆ ತೆರಳುವ ಬಗ್ಗೆ ರೈತರೊಂದಿಗೆ ಮಾತುಕತೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಂಸತ್‍ನಲ್ಲಿ ಕೃಷಿ ಮಸೂದೆ ಹಿಂಪಡೆದ ಬಿಲ್ ಪಾಸ್ ಆಗುವವರೆಗೆ ನಾವು ಯಾವುದೇ ಹೇಳಿಕೆಗಳನ್ನು ನಂಬುವುದಿಲ್ಲ ಎಂದರು

ಕೃಷಿ ಮಸೂದೆ ಹಿಂಪಡೆದ ಬಗ್ಗೆ ಮಾಹಿತಿ ಸಿಕ್ಕಂತೆ ನಾನು ನಮ್ಮ ರೈತ ಹೋರಾಟದಲ್ಲಿರುವ ರೈತರೊಂದಿಗೆ ಮಾತುಕತೆ ನಡೆಸುತ್ತೇನೆ ಆ ಬಳಿಕ ಅವರು ಕೊಡುವಂತಹ ಸೂಚನೆಯ ಮೇಲೆ ನಮ್ಮ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. 

Pragati TV Social Connect for more latest u

Leave a Reply

Your email address will not be published. Required fields are marked *